Advertisement

Maharashtra ಸ್ಥಳೀಯ ಸಂಸ್ಥೆ ಎಲೆಕ್ಷನ್‌ನಲ್ಲಿ ಸ್ವತಂತ್ರ ಸ್ಪರ್ಧೆ: ಅಜಿತ್‌ ಪವಾರ್‌

10:01 PM Jul 22, 2024 | Team Udayavani |

ಪುಣೆ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಮೀಕರಣಗಳು ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಸಿಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು “ಮಹಾಯುತಿ’ ಪಾಲುದಾರ ನಾಯಕ, ಡಿಸಿಎಂ ಅಜಿತ್‌ ಪವಾರ್‌ ಹೇಳಿದ್ದರೆ, ಮಿತ್ರಕೂಟದ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲು ಸ್ವತಂತ್ರರು ಎಂದು ಬಿಜೆಪಿ ನಾಯಕ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಈ ಮಧ್ಯೆ, ಸಿಎಂ ಏಕನಾಥ ಶಿಂಧೆಯನ್ನು ಶರದ್‌ ಪವಾರ್‌ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಪಿಂಪ್ರಿ ಚಿಂಚ್‌ವಾಡ್‌ ನಗರದಲ್ಲಿ ಭಾನುವಾರ ಎನ್‌ಸಿಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಜಿತ್‌, ಲೋಕಸಭೆ, ವಿಧಾನಸಭೆಯಲ್ಲಿ ಮಹಾಯುತಿ ಮೈತ್ರಿಕೂಟದ ಭಾಗವಾಗಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಸಿಪಿ ಸೇರಿದಂತೆ ಮಹಾ ಯುತಿಯ ಮಿತ್ರ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಬಹುದು ಎಂದರು.

ಶಿಂಧೆ-ಪವಾರ್‌ ಭೇಟಿ:
ಎನ್‌ಸಿಪಿ(ಎಸ್‌ಪಿ) ನಾಯಕ ಶರದ್‌ ಪವಾರ್‌ ಸೋಮವಾರ ಶಿವಸೇನೆ ನಾಯಕ, ಮುಖ್ಯಮಂತ್ರಿ ಏಕನಾಥ ಶಿಂಧೆಯನ್ನು ಭೇಟಿ ಮಾಡಿದ್ದಾರೆ.

ರಾಜಕೀಯ ಹೊರತಾದ ಭೇಟಿಯೆಂದು ಹೇಳಿಕೊಂಡರೂ ನಾನಾ ಲೆಕ್ಕಾಚಾರಗಳು ಶುರುವಾಗಿವೆ. ಇತ್ತೀಚೆಗೆ ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡಿರುವ ಮರಾಠಿ ವಾರಪತ್ರಿಕೆಯೊಂದು, ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮುಗ್ಗರಿಸಲು ಅಜಿತ್‌ ಪವಾರ್‌ ಜತೆಗಿನ ಸಖ್ಯವೇ ಕಾರಣ ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next