ಔರಂಗಾಬಾದ್: ಪದವೀಧರ ಕ್ಷೇತ್ರದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಗುರಿ. ಅದಕ್ಕಾಗಿ ಎನ್‌ಸಿಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುವೆ ಎಂದು ಕೇಂದ್ರದ ಮಾಜಿ ಸಚಿವ ಗಾಯಕ್ವಾಡ್ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.
ರಾಜ್ಯ ಘಟಕದ ನಾಯಕರ ಜತೆಗೆ ಭಿನ್ನಾಭಿಪ್ರಾಯ ಹೊಂದಿರುವ ಅವರು ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಬಿಜೆಪಿ ನಾಯಕರ ಪರವಾಗಿ ಕೆಲಸ ಮಾಡಲು ವರಿಷ್ಠರು ಅವಕಾಶ ನೀಡಲಿಲ್ಲ ಎಂದು ಪಾಟೀಲ್ ದೂರಿದ್ದಾರೆ. ಹೀಗಾಗಿ, ಎನ್‌ಸಿಪಿ ಅಭ್ಯರ್ಥಿ ಸತೀಶ್ ಚವಾಣ್ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಅಪೌಷ್ಟಿಕತೆಯಿಂದ ಬಳಲುವ ದೇಶದ ಸುಮಾರು 10 ಸಾವಿರ ಮಕ್ಕಳಿಗೆ ಕೊಹ್ಲಿ ನೆರವು
ಔರಂಗಾಬಾದ್ ಪ್ರದೇಶದಲ್ಲಿ ಎನ್‌ಸಿಪಿ ಅಭ್ಯರ್ಥಿ ಸತೀಶ್ ಚವಾಣ್ ಅವರೇ ಬಿಜೆಪಿಯನ್ನು ಸೋಲಿಸಲು ಸಮರ್ಥ ವ್ಯಕ್ತಿ ಎಂದು ಹೇಳಿದ್ದಾರೆ. ಇದೇ ವೇಳೆ ಹತ್ತು ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.