ನವದೆಹಲಿ: ಎನ್ ಸಿಸಿಯ ಲಘು ತರಬೇತಿ ವಿಮಾನವೊಂದು ಗಾಜಿಯಾಬಾದ್ ನ ಸದಾರ್ಪುರ್ ಗ್ರಾಮದ ಸಮೀಪದ ಪೆರಿಫೆರಲ್ ಎಕ್ಸ್ ಪ್ರೆಸ್ ರಸ್ತೆ ಬಳಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಗುರುವಾರ ನಡೆದಿದೆ ಎಂದು ವರದಿ ತಿಳಿಸಿದೆ.
Advertisement
ವರದಿಯ ಪ್ರಕಾರ, ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಲಘು ವಿಮಾನವನ್ನು ದೆಹಲಿ ಸಮೀಪದ ಹೆದ್ದಾರಿ ಮೇಲೆಯೇ ತುರ್ತು ಲ್ಯಾಂಡ್ ಮಾಡಲಾಗಿದೆ ಎಂದು ಹೇಳಿದೆ.
ಲಘು ವಿಮಾನದ ಮುಂಭಾಗದಲ್ಲಿ ಎನ್ ಸಿಸಿ(ನ್ಯಾಷನಲ್ ಕೆಡೆಟ್ ಕಾರ್ಪ್ಸ್)ಯ ಚಿಹ್ನೆ ಇದ್ದಿರುವುದಾಗಿ ತಿಳಿಸಿದೆ. ಲಘು ವಿಮಾನದ ಒಂದು ರೆಕ್ಕೆ ಜಖಂಗೊಂಡಿರುವುದಾಗಿ ವರದಿ ಹೇಳಿದೆ. ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿ ವಿವರಿಸಿದೆ.