Advertisement
ವೇಗಿ ಭುವನೇಶ್ವರ್ ಕುಮಾರ್, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ವಿಫಲವಾಗಿರುವ ಆರೋಪ ಎದುರಿಸುತ್ತಿರುವ ಎನ್ ಸಿಎಗೆ,ಪ್ರತ್ಯೇಕ ವೈದ್ಯಕೀಯ ಮಂಡಳಿಯನ್ನು ಒದಗಿಸಲು ಬಿಸಿಸಿಐ ನಿರ್ಧರಿಸಿದೆ. ಮುಂದಿನ 18 ತಿಂಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮುಗಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ.
Related Articles
ವೇಗಿ ಭುವನೇಶ್ವರ್ ಕುಮಾರ್‌ಗೆ ತೊಡೆಸಂದಿಯಲ್ಲಿ ಹರ್ನಿಯಾ ಇದ್ದಿದ್ದನ್ನು ಪತ್ತೆಹಚ್ಚಲು ಎನ್‌ಸಿಎ ವೈದ್ಯರು ವಿಫಲರಾಗಿದ್ದರು. ಅವರು ಸುಧಾರಿಸಿ ಕೊಂಡಿದ್ದಾರೆಂದು ವೈದ್ಯರು ಘೋಷಿಸಿದ ನಂತರ, ಭುವನೇಶ್ವರ್ ಮತ್ತೆ ಬೌಲಿಂಗ್ ಆರಂಭಿಸಿ ಎರಡೇ ಪಂದ್ಯಕ್ಕೆ ಗಾಯಗೊಂಡು ವಿಶ್ರಾಂತಿಗೆ ತೆರಳಿದ್ದಾರೆ. ಇದರಿಂದ ಎನ್‌ಸಿಎ ಭಾರೀ ಟೀಕೆಗೊಳಪಟ್ಟಿತ್ತು.
Advertisement
ಅದಕ್ಕೂ ಮುನ್ನ ವಿಕೆಟ್ ಕೀಪರ್ ವೃದ್ಧಿಮಾನ್ ಸುಧಾರಣೆ ಮಾಡುವಲ್ಲೂ ವಿಫಲವಾಗಿತ್ತು. ಇದರಿಂದ ಹೆದರಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ತಾವು ಎನ್‌ಸಿಎನಲ್ಲಿ ಚಿಕಿತ್ಸೆಗೊಳಗಾಗಲು ನಿರಾಕರಿಸಿದರು. ಲಂಡನ್ ವೈದ್ಯರಿಂದ ಖಾಸಗಿಯಾಗಿ ಚಿಕಿತ್ಸೆ ಪಡೆದರು. ಇದರಿಂದ ಎನ್‌ಸಿಎ ಸಿಬ್ಬಂದಿ ಮುಜುಗರಕ್ಕೊಳಗಾದರು.
ಈ ಸಂದರ್ಭದಲ್ಲಿ ಬುಮ್ರಾರನ್ನು ಅಂತಿಮಪರೀಕ್ಷೆಗೊಳಪಡಿಸಿ ಪ್ರಮಾಣಪತ್ರ ನೀಡಲು, ಈಗಷ್ಟೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿರುವ ರಾಹುಲ್ ದ್ರಾವಿಡ್ ಕೂಡ ನಿರಾಕರಿಸಿದರು. ಇವೆಲ್ಲ ಘಟನೆಗಳ ಪರಿಣಾಮ ವೈದ್ಯಕೀಯ ನೇಮಕ ಮಾಡಲು ಬಿಸಿಸಿಐ ನಿರ್ಧರಿಸುವಲ್ಲಿ ಮುಕ್ತಾಯವಾಗಿದೆ