Advertisement

ಯಹೂದಿ ಕೈದಿಗಳ ಹತ್ಯೆಗೆ ನೆರವು: 93ರ ವೃದ್ಧನೇ ಆರೋಪಿ!

03:14 AM Jul 24, 2020 | Hari Prasad |

ಬರ್ಲಿನ್‌: ಎರಡನೇ ವಿಶ್ವಮಹಾಯುದ್ಧದ ಸಮಯದಲ್ಲಿ ಜರ್ಮನಿಯಲ್ಲಿ 5,232 ಯಹೂದಿ ಕೈದಿಗಳ ಹತ್ಯೆಗೆ ನೆರವು ನೀಡಿರುವ ಪ್ರಕರಣದಲ್ಲಿ ನಾಜಿ ಕ್ಯಾಂಪ್‌ನ 93 ವರ್ಷದ ಕಾವಲುಗಾರನನ್ನು (ಗಾರ್ಡ್‌) ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿದ್ದು, 2 ವರ್ಷ ಅಮಾನತು ಶಿಕ್ಷೆ ವಿಧಿಸಿದೆ.

Advertisement

1944-45ರ ಅವಧಿಯಲ್ಲಿ ನಾಜಿ ಸೆರೆ ಶಿಬಿರದಲ್ಲಿ 5 ಸಾವಿರಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಲಾಗಿತ್ತು.

ಈ ಹತ್ಯೆಗೆ ಸಹಾಯ ನೀಡಿರುವ ಬ್ರುನೋ ಡಿ. ತಪ್ಪಿತಸ್ಥರಾಗಿದ್ದು, ಇವರಿಗೆ ಇದೀಗ 93 ವರ್ಷ ವಯಸ್ಸು ಆಗಿರುವ ಕಾರಣ 2 ವರ್ಷ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ಜರ್ಮನಿ ಕೋರ್ಟ್‌ ತಿಳಿಸಿದೆ.

ಘಟನೆ ನಡೆದ ವೇಳೆ ಬ್ರುನೋ 17 ವರ್ಷದ ಯುವಕನಾಗಿದ್ದನು. 2ನೇ ವಿಶ್ವ ಮಹಾಯುದ್ಧದ ಸಮಯದಲ್ಲಿ ಜರ್ಮನಿಯಲ್ಲಿ ಯಹೂದಿಗಳು ಸೇರಿದಂತೆ 65 ಸಾವಿರ ಮಂದಿಯನ್ನು ಕೊಲೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next