Advertisement

ನಯನತಾರಾ-ವಿಘ್ನೇಶ್ ವಿವಾಹ ಸಮಾರಂಭದಲ್ಲಿ ಭಾಗಿಯಾದ ರಜಿನಿಕಾಂತ್, ಶಾರುಖ್ ಖಾನ್

03:41 PM Jun 09, 2022 | Team Udayavani |

ಮಹಾಬಲಿಪುರಂ: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ವಿವಾಹ ಸಮಾರಂಭವು ಇಂದು ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನಡೆಯಿತು.

Advertisement

ಮೆಗಾಸ್ಟಾರ್ ರಜನಿಕಾಂತ್, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಸೇರಿದಂತೆ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಚಿತ್ರರಂಗದ ಪ್ರಮುಖರ ಸಮ್ಮುಖದಲ್ಲಿ ವಿವಾಹ ಸಮಾರಂಭ ವಿಧಿವತ್ತಾಗಿ ನೆರವೇರಿತು.

ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ 10.24ರ ಶುಭ ಲಗ್ನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ವಿವಾಹ ನಡೆಯಿತು.

ಇದನ್ನೂ ಓದಿ:ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕಿಸ್ಥಾನ ನಾಯಕ ಬಾಬರ್ ಅಜಂ

ಈ ಸಂದರ್ಭದಲ್ಲಿ ಮೆಗಾಸ್ಟಾರ್ ರಜನಿಕಾಂತ್, ಶಾರುಖ್ ಖಾನ್, ಚಲನಚಿತ್ರ ನಿರ್ದೇಶಕ ಅಟ್ಲಿ, ವಿಜಯ್ ಸೇತುಪತಿ, ನಿರ್ದೇಶಕ ಮಣಿರತ್ನಂ, ನಟರಾದ ಸೂರ್ಯ, ಕಾರ್ತಿ ಮತ್ತು ಜ್ಯೋತಿಕಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

ಉಳಿದಂತೆ ನಿರ್ದೇಶಕರಾದ ಮೋಹನ್ ರಾಜ, ಶಿವ, ಕೆ ಎಸ್ ರವಿಕುಮಾರ್, ಮತ್ತು ನಟರಾದ ಶರತ್ ಕುಮಾರ್ ಮತ್ತು ರಾಧಿಕಾ, ಎಸ್ ಜೆ ಸೂರ್ಯ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ವರದಿಯ ಪ್ರಕಾರ, ಬಿಗಿಯಾದ ಭದ್ರತಾ ವ್ಯವಸ್ಥೆಗಳನ್ನು ಹೊಂದಿದ್ದು, 80 ಬೌನ್ಸರ್‌ಗಳನ್ನು ನಿಕಟ ರಕ್ಷಣೆಗಾಗಿ ನಿಯೋಜಿಸಲಾಗಿತ್ತು.

ನಯನತಾರಾ ದಂಪತಿಗಳು ತಮ್ಮ ವಿವಾಹದ ಅಂಗವಾಗಿ ರಾಜ್ಯದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ರಾಜ್ಯಾದ್ಯಂತ ವೃದ್ಧಾಶ್ರಮದಲ್ಲಿರುವ ಜನರಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಇದರ ಹೊರತಾಗಿ, ಆಯ್ದ ದೇವಾಲಯಗಳಲ್ಲಿ ಅನ್ನದಾನದ ವ್ಯವಸ್ಥೆಯನ್ನು ಸಹ ನಯನತಾರಾ ದಂಪತಿಗಳು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next