Advertisement

CM ಕುರ್ಚಿಯಲ್ಲಿ ಕುಳಿತ ನಯನಾ ಮೋಟಮ್ಮ !

08:34 PM Dec 07, 2023 | Team Udayavani |

ಬೆಳಗಾವಿ: ತೆಲಂಗಾಣ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿಸಿ ವಿಧಾನಸಭೆ ಕಲಾಪಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಅಭಿನಂದಿಸಲು ಬಂದ ಶಾಸಕಿ ನಯನಾ ಮೋಟಮ್ಮ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಘಟನೆ ನಡೆಯಿತು.

Advertisement

ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್‌ ಅವರು ನಯನಾರ ಕೈ ಹಿಡಿದೆಳೆದು ಏಳುವಂತೆ ಸೂಚಿಸಿದರು. “ಮುಖ್ಯಮಂತ್ರಿ ಕುರ್ಚಿ ಮೇಲೆ ಹಾಗೆಲ್ಲ ಕುಳಿತುಕೊಳ್ಳಬಾರದು” ಎಂದು ಶಿವಕುಮಾರ್‌ ಸೂಚ್ಯವಾಗಿ ತಿಳಿ ಹೇಳಿದರು. ಆದರೆ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಈ ಘಟನೆಯನ್ನು ಗಮನಿಸಿಯೂ ಗಮನಿಸದಂತೆ ಸುಮ್ಮನಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next