Advertisement

ತರಾಸು ಜನ್ಮಶತಮಾನೋತ್ಸವ ಸರ್ಕಾರವೇ ಆಚರಿಸಲಿ

04:20 PM Apr 22, 2020 | Naveen |

ನಾಯಕನಹಟ್ಟಿ: ತರಾಸುರವರ ಜನ್ಮ ಶತಮಾನೋತ್ಸವದ ವಿಶಿಷ್ಟ ಆಚರಣೆಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಪಂ ಸದಸ್ಯ ಓಬಳೇಶ್‌ ಒತ್ತಾಯಿಸಿದ್ದಾರೆ.

Advertisement

ತಳಕು ಗ್ರಾಮದಲ್ಲಿ ಮಂಗಳವಾರ ನಡೆದ ತರಾಸುರವರ 100 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ಶ್ರೇಷ್ಠ ಕಾದಂಬರಿಕಾರರಲ್ಲಿ ತರಾಸು ಒಬ್ಬರಾಗಿದ್ದಾರೆ. ತ.ಸು. ಶಾಮರಾಯರು, ಟಿ.ಎಸ್‌. ವೆಂಕಣ್ಣಯ್ಯ ಹಾಗೂ ತರಾಸುರವರು ಚಿತ್ರದುರ್ಗ ಜಿಲ್ಲೆ ಹಾಗೂ ರಾಜ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಇವರುಗಳಿಂದ ತಳಕು ಗ್ರಾಮ ಇಡೀ ರಾಜ್ಯದಲ್ಲಿ ಹೆಸರು ಪಡೆದಿದೆ. ರಾಷ್ಟ್ರೀಯ ಹೆದ್ದಾರಿ 150 ಗ್ರಾಮವನ್ನು ಪ್ರವೇಶಿಸುವ ಪ್ರದೇಶದಲ್ಲಿ ತರಾಸು ಕಂಚಿನ ಪುತ್ಥಳಿ ನಿರ್ಮಿಸಬೇಕು. ಜನ್ಮ ಶತಮಾನೋತ್ಸವದ ಆಚರಣೆಯನ್ನು ಸರ್ಕಾರ ವಿಜೃಂಭಣೆಯಿಂದ ಆಚರಿಸಬೇಕು. ತಳಕು ಗ್ರಾಮದಲ್ಲಿ ವೆಂಕಣ್ಣಯ್ಯ ಸ್ಮಾರಕ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಬೇಕು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಈ. ರಾಮರೆಡ್ಡಿ ಮಾತನಾಡಿ, ತಳಕು ಗ್ರಾಮ ತರಾಸುರವರಿಂದ ಗುರುತಿಸಿಕೊಂಡಿದೆ. ಅವರ ಸಾಹಿತ್ಯ ಕೃತಿಗಳನ್ನು ಇಂದಿನ ವಿದ್ಯಾರ್ಥಿಗಳು ಓದುವಂತಾಗಬೇಕು. ಜಿಲ್ಲಾ ಕೇಂದ್ರದಲ್ಲಿ ತರಾಸು ಕಂಚಿನ ಪುತ್ಥಳಿಯನ್ನು ಸ್ಥಾಪಿಸಬೇಕು. ಜನ್ಮ ಶತಮಾನೋತ್ಸವ ಆಚರಣೆಗೆ ಸರ್ಕಾರ ಗಮನ ಹರಿಸಬೇಕು ಎಂದರು. ರೈತ ಮುಖಂಡ ಓಬಣ್ಣ, ಮುಖಂಡ ನಾಗರಾಜ್‌, ತರಾಸು ಸಹೋದರ ಸಂಬಂಧಿ  ಮಧುರನಾಥ್‌, ಸುರೇಶ್‌ ಮತ್ತಿತರರು ಇದ್ದರು .

Advertisement

Udayavani is now on Telegram. Click here to join our channel and stay updated with the latest news.

Next