Advertisement
ಈ ವರ್ಷವೇ ಟೌನ್‌ಶಿಪ್ ನಿರ್ಮಾಣ ಆರಂಭವಾಗಲಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಸ್ಟುಡಿಯೋ ಅಪಾರ್ಟ್‌ಮೆಂಟ್ ಸರಯೂ ನದಿ ತೀರದಲ್ಲೇ ಮೋಕ್ಷ ಪಡೆಯಬೇಕೆಂದು ಹಂಬಲಿಸುವವರಿಗೆ ಸ್ಟುಡಿಯೋ ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತದೆ. ಪ್ರತಿಯೊಂದಕ್ಕೆ 20-25 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. ಇಷ್ಟು ಮೊತ್ತ ಪಾವತಿ ಮಾಡಲು ಸಾಧ್ಯವಾಗದೇ ಇದ್ದವರಿಗೆ ಕನಿಷ್ಠ ಮೊತ್ತ 5 ಲಕ್ಷ ರೂ. ನಿಗದಿಗೊಳಿಸ ಲಾಗಿದೆ. ಅಪಾರ್ಟ್ ಮೆಂಟ್ ಕೊಂಡುಕೊಳ್ಳು ವವರು ಕುಟುಂಬ ಸಹಿತ ವಾಸವಿರಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಫೈಜಾಬಾದ್-ಗೋರಖ್‌ಪುರ ಹೆದ್ದಾರಿ ಬಳಿ ನಿರ್ಮಾಣ ಲಂಡನ್‌ನ ಥೇಮ್ಸ್ ನದಿ ಮಾದರಿಯಲ್ಲೇ ಅದ್ದೂರಿಯಾಗಿ ಟೌನ್‌ಶಿಪ್‌ಗೆ ಸಿದ್ಧತೆ ಪಿಡಬ್ಲ್ಯೂಸಿ ಸಂಸ್ಥೆಯಿಂದ ನೀಲ ನಕ್ಷೆ ಸಿದ್ಧ 1000 ಕೋ. ರೂ. ಯೋಜನೆ
ಬರೋಬ್ಬರಿ 1,200 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳ ಲಿದೆ. ಪೈಜಾಬಾದ್-ಗೋರಖ್‌ಪುರ ಹೆದ್ದಾರಿ ನಡುವಿನ ಮಂಜಾ ಬರೇಥಾದಲ್ಲಿರುವ 500 ಎಕರೆ ಪ್ರದೇಶದಲ್ಲಿ “ನಯಾ ಅಯೋಧ್ಯೆ’ ನಿರ್ಮಾಣವಾಗ ಲಿದೆ. ಸರಯೂ ನದಿ ತೀರದಲ್ಲಿ ನಿರ್ಮಿ ಸುವ ಉದ್ದೇಶವನ್ನು ಉತ್ತರ ಪ್ರದೇಶ ಹೊಂದಿದೆ. ಪಂಚತಾರಾ ಹೊಟೇಲ್‌ಗಳು, ರೆಸಾರ್ಟ್‌ಗಳು, ಸುಸಜ್ಜಿತ ಒಳಚರಂಡಿ, ವಾಣಿಜ್ಯ ಮತ್ತು ವಾಸಕ್ಕಾಗಿ ಸಾಮಾನ್ಯ, ಐಷಾರಾಮಿ ಕೊಠಡಿಗಳ ಕಟ್ಟಡಗಳು ನಿರ್ಮಾಣಗೊಳ್ಳಲಿವೆ.