Advertisement

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

12:35 AM May 28, 2024 | Team Udayavani |

ರಾಯ್ಪುರ: ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಛತ್ತೀಸ್‌ಗಢದ ಪ್ರಸಿದ್ಧ ನಾಟಿ ವೈದ್ಯ ಹೇಮಚಂದ್‌ ಮಾಂಝಿ ಅವರು ತಮಗೆ ನೀಡಿದ ಪದ್ಮ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಸೋಮವಾರ ಹೇಳಿದ್ದಾರೆ. ನಕ್ಸಲರಿಂದ ಮಾಂಝಿ ಅವರಿಗೆ ಬೆದರಿಕೆ ಬಂದ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ. ರಾಷ್ಟ್ರಪತಿ ಮುರ್ಮು ಅವರು ಮಾಂಝಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಫೋಟೋ ಇರುವ ಪೋಸ್ಟರ್‌ಗಳನ್ನು ನಕ್ಸಲರು ಚಮೇಲಿ ಹಾಗೂ ಗೌರ್ದಂಡ್‌ ಗ್ರಾಮಗಳಲ್ಲಿ ಹಂಚಿದ್ದರು. ಅದರಲ್ಲಿ ಮಾಂಝಿ ವಿರುದ್ಧ ಬೆದರಿಕೆಗಳನ್ನೂ ಹಾಕಿದ್ದರು. ಅದರ ಬೆನ್ನಲ್ಲಿಯೇ ಮಾಂಝಿ ಈ ಪ್ರತಿಕ್ರಿಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next