Advertisement

Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ

12:13 AM Nov 20, 2024 | Shreeram Nayak |

ಶಿವಮೊಗ್ಗ: ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ವಿಕ್ರಂ ಗೌಡ ವಿರುದ್ಧ ಶಿವಮೊಗ್ಗ ಜಿಲ್ಲೆಯ ಆಗುಂಬೆ ಹಾಗೂ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣಗಳಿವೆ.

Advertisement

2009ರ ಮೇ 30ರಂದು ಆಗುಂಬೆ ಠಾಣೆ ವ್ಯಾಪ್ತಿಯ ಉಳ್ಮಡಿ ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿರುವ ನೆಕರ್ಕೆ ಗುಡ್ಡದಲ್ಲಿ ಅಪಾರ ಪ್ರಮಾಣದ ಶಸ್ತಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ನಿಷೇಧಿತ ಮಾವೋವಾದಿ ಸಿದ್ಧಾಂತಗಳಿರುವ ಪುಸ್ತಕಗಳು, ಎರಡು 9 ಎಂಎಂ ಬಂದೂಕು, ಜಿಲೇಟಿನ್‌ ಸೊ#ಧೀಟದ ವಸ್ತುವಿಗೆ ಬಳಸುವ ಬತ್ತಿ, ಡಿಟೋನೇಟರ್‌ ಸೇರಿ ನೂರಾರು ವಿವಿಧ ಮಾದರಿ ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ವಿಕ್ರಂಗೌಡ ಆರನೇ ಆರೋಪಿಯಾಗಿದ್ದ.

2007ರ ಜುಲೈಯಲ್ಲಿ ತೀರ್ಥಹಳ್ಳಿ ಠಾಣೆ ವ್ಯಾಪ್ತಿಯ ತಲ್ಲೂರು ಅಂಗಡಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ಅಡ್ಡ ಹಾಕಿ ಜನರನ್ನು ಇಳಿಸಿ ಅದರಲ್ಲಿದ್ದ ಡೀಸೆಲ್‌ ತೆಗೆದು ಬಸ್‌ ಸುಟ್ಟು ಹಾಕಿ ಕರಪತ್ರಗಳನ್ನು ಪೊಲೀಸರು ಹಾಗೂ ಪತ್ರಿಕೆಯವರಿಗೆ ಕೊಡುವಂತೆ ಕೊಟ್ಟು ಹೋಗಿದ್ದರು. ಈ ಪ್ರಕರಣದಲ್ಲೂ ವಿಕ್ರಂ ಗೌಡ ಎ6 ಆರೋಪಿಯಾಗಿದ್ದ.

2012ರ ಜನವರಿಯಲ್ಲಿ ಬರ್ಕಣ ಫಾಲ್ಸ್‌ ಬಳಿ ಎಎನ್‌ಎಫ್‌ ತಂಡ ಶೋಧ ನಡೆಸುತ್ತಿರುವಾಗ ವಿಕ್ರಂ ಗೌಡ ಸೇರಿ 6 ಮಂದಿ ಸಹಚರರು ಗುಂಡು ಹಾರಿಸಿ ತಪ್ಪಿಸಿಕೊಂಡಿ ದ್ದರು. ಮೂರು ಪ್ರಕರಣಗಳಿಗೆ ವಿಕ್ರಂ ಗೌಡ ಬೇಕಾಗಿದ್ದ. ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದೆ.

ಚಿಕ್ಕಮಗಳೂರು ಜಿಲ್ಲೆ ಯಲ್ಲೂ 13 ಪ್ರಕರಣ
ವಿಕ್ರಮ್‌ ಗೌಡ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ಯಲ್ಲೂ 13 ಪ್ರಕರಣಗಳು ದಾಖಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next