Advertisement

ತಲೆಗೆ 3 ಲಕ್ಷ ಇನಾಮು ಹೊಂದಿದ್ದ ನಕ್ಸಲ್‌ ಉಗ್ರ ಮಂದಾವಿ ಸೆರ

04:30 PM Feb 27, 2018 | udayavani editorial |

ರಾಯಪುರ : ತನ್ನ ತಲೆಗೆ ಮೂರು ಲಕ್ಷ ರೂ. ಇನಾಮು ಹೊಂದಿದ್ದ 28ರ ಹರೆಯದ ಸುಕುಲ್‌ ಮಂದಾವಿ ಅಲಿಯಾಸ್‌ ರಾಮಧರ್‌ ಎಂಬ ನಕ್ಸಲ್‌ ಉಗ್ರನನ್ನು ಪೊಲೀಸರು ಇಂದು ಛತ್ತೀಸ್‌ಗಢದ ಕೊಂಡಗಾಂವ್‌ ಜಿಲ್ಲೆಯಲ್ಲಿ ಬಂಧಿಸಿದರು. 

Advertisement

ವಿವಿಧ ಭದ್ರತಾ ಪಡೆಗಳ ತಂಡದವರು ಜಂಟಿಯಾಗಿ ತುಮಿªವಾಲ್‌ ಕೋತ್‌ಮೇತಾ ಗ್ರಾಮಕ್ಕೆ ಸಮೀಪದ ಅರಣ್ಯದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಕುಲ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌  ಮಹೇಶ್ವರ್‌ ನಾಗ್‌ ತಿಳಿಸಿದರು. 

ಸುಕುಲ್‌ ಮಂದಾವಿ ನಕ್ಸಲ್‌ ಸಂಬಂಧಿತ ಸುಮಾರು 16 ಹಿಂಸಾ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮತ್ತು ಆತನ ತಲೆಗೆ 3 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ಕೊಲೆ, ಸುಲಿಗೆ, ಕೊಳ್ಳಿ ಇಡುವಿಕೆ,  ಪೊಲೀಸರ ಮೇಲಿನ ದಾಳಿ ಮುಂತಾಗಿ ಹಲವು ಬಗೆಯ ಗಂಭೀರ ಅಪರಾಧ ಕೃತ್ಯಗಳನ್ನು ಆತ ಎಸಗಿದ್ದ ಮತ್ತು ನಕ್ಸಲ್‌ ಪಡೆಗೆ ಯುವಕರನ್ನು ಸೇರಿಸಿಕೊಳ್ಳುವ ಕೆಲಸವನ್ನೂ ನಡೆಸುತ್ತಿದ್ದ ಎಂದು ನಾಗ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next