Advertisement

ನವಾಜ್‌ ಪತ್ನಿ ಸ್ಥಿತಿ ಗಂಭೀರ

08:05 AM Jun 16, 2018 | Karthik A |

ಲಂಡನ್‌/ಇಸ್ಲಾಮಾಬಾದ್‌: ಕ್ಯಾನ್ಸರ್‌ ನಿಂದ ಲಂಡನ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಪತ್ನಿ ಕುಲ್ಸೂಮ್‌ ನವಾಜ್‌ (68) ಅವರಿಗೆ ಭಾರೀ ಪ್ರಮಾಣದಲ್ಲಿ ಹೃದಯಾಘಾತವಾಗಿದೆ. ಹೀಗಾಗಿ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ ನಲ್ಲಿ ಇರಿಸಲಾಗಿದೆ. ಕಳೆದ ರಾತ್ರಿ ಈ ಬೆಳವಣಿಗೆ ಉಂಟಾಗಿದೆ ಎಂದು ನವಾಜ್‌ ಪುತ್ರಿ ಮರ್ಯಾಮ್‌ ಟ್ವೀಟ್‌ ಮಾಡಿದ್ದಾರೆ. ಎಪ್ರಿಲ್‌ ನಲ್ಲಿ ಬಿಡುಗಡೆ ಮಾಡಲಾಗಿದ್ದ ಮೆಡಿಕಲ್‌ ಬುಲೆಟಿನ್‌ ಪ್ರಕಾರ ಗಂಟಲು ಕ್ಯಾನ್ಸರ್‌ ದೇಹದ ಇತರ ಭಾಗಗಳಿಗೂ ಹರಡಲು ಆರಂಭವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next