Advertisement
ಸಿಬಿಐ ಅಧಿಕೃತ ರಹಸ್ಯ ಕಾಯಿದೆಯ ಅಡಿಯಲ್ಲಿ ತನಿಖೆಗೆ ಸಂಬಂಧಿಸಿದಂತೆ ಪಾಂಡೆ ಮತ್ತು ಇತರರ ವಿರುದ್ಧ “ಅಪೂರ್ಣ ಚಾರ್ಜ್ ಶೀಟ್” ಅನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಜಾಮೀನು ದೊರಕಿದೆ. ಪಾಂಡೆ ಸೆಪ್ಟೆಂಬರ್ 3 ರಂದು ಬಂಧನಕ್ಕೊಳಗಾಗಿದ್ದರು.
Related Articles
Advertisement
ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ಕಮೋಡೋರ್ ರಣದೀಪ್ ಸಿಂಗ್ ಮತ್ತು ಕಮಾಂಡರ್ ಸತ್ವಿಂದರ್ ಜೀತ್ ಸಿಂಗ್ ಅವರು ಸೆಪ್ಟೆಂಬರ್ 2 ರಂದು ನೌಕಾಪಡೆಯಲ್ಲಿ ನಡೆದ ಸಭೆಗೆ ಸಂಬಂಧಿಸಿದ ನಿರ್ಣಾಯಕ ವಿವರಗಳನ್ನು ಹಂಚಿಕೊಳ್ಳಲು ಹೊರಟಿದ್ದಾರೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಬಿಐ ಇಬ್ಬರನ್ನೂ ಒಂದೇ ದಿನ ಬಂಧಿಸಿತ್ತು.
ಹೈದರಾಬಾದ್ ಮೂಲದ ಕಂಪನಿ ಅಲೆನ್ ರೀನ್‌ಫೋರ್ಸ್ಡ್ ಪ್ಲಾಸ್ಟಿಕ್ ಲಿಮಿಟೆಡ್‌ನಿಂದ ವ್ಯವಹಾರದಲ್ಲಿ ಲಂಚ ಪಡೆದು ನೌಕಾ ಉಪಕರಣಗಳ ಸಂಗ್ರಹಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯ ಸೋರಿಕೆಯ ಆರೋಪಗಳ ಬಗ್ಗೆ ಸಂಸ್ಥೆ ತನಿಖೆ ನಡೆಸುತ್ತಿದೆ.