Advertisement

Indian Navy: ನೇವಿಗೆ ಸಿಕ್ಕಿದ ಮೊದಲ ಮೇಕ್‌ ಇಂಡಿಯಾ ಡ್ರೋನ್‌

09:55 PM Jan 10, 2024 | Pranav MS |

ಹೈದರಾಬಾದ್‌: ಭಾರತೀಯ ನೌಕಾಪಡೆದಾಗಿ ಮೊದಲ ಬಾರಿಗೆ ದೇಶಿಯವಾಗಿಯೇ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೈದರಾಬಾದ್‌ನಲ್ಲಿ ಇರುವ ಉದ್ಯಮಿ ಗೌತಮ್‌ ಅದಾನಿ ಮಾಲೀಕತ್ವದ ಅದಾನಿ ಡಿಫೆನ್ಸ್‌ ಆ್ಯಂಡ್‌ ಏರೋಸ್ಪೇಸ್‌ ಕಂಪನಿ ಅದನ್ನು ನಿರ್ಮಾಣ ಮಾಡಿದೆ. ಅದಕ್ಕೆ “ದೃಷ್ಟಿ 10 ಸ್ಟಾರ್‌ಲೈನರ್‌’ ಎಂದು ಹೆಸರು ಇರಿಸಲಾಗಿದೆ. ಅದು ಒಟ್ಟು 36 ಗಂಟೆಗಳ ಕಾಲ ಹಾರಾಟ ಸಾಮರ್ಥ್ಯಹೊಂದಿದೆ.

Advertisement

ಬುಧವಾರ ಅದನ್ನು ನೌಕಾಪಡೆ ಮುಖ್ಯಸ್ಥ ಆರ್‌.ಹರಿಕುಮಾರ್‌ ಬಿಡುಗಡೆ ಮಾಡಿದರು. ಹೈದರಾಬಾದ್‌ನಿಂದ ಹಾರಾಟ ಆರಂಭಿಸಿದ ಅದು ಪೋರಬಂದರ್‌ನತ್ತ ಧಾವಿಸಿತು. ಈ ಮೂಲಕ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು.

ಸೇನಾ ಸಾಧನ, ಉಪಕರಣಗಳ ನಿರ್ಮಾಣದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವುದು ಕೇಂದ್ರ ಸರ್ಕಾರ ಉದ್ದೇಶ. ಅದಕ್ಕೆ ಅನುಗುಣವಾಗಿ ಈ ಡ್ರೋನ್‌ ಅನ್ನು ಸಿದ್ಧಪಡಿಸಲಾಗಿದೆ.

ಏನಿದರ ವಿಶೇಷಗಳು?
1. 2 ರೀತಿಯ ವಾಯುಪ್ರದೇಶದಲ್ಲಿ ಬಳಕೆ. ಸಾಮಾನ್ಯ ವಾಯು ಮಾರ್ಗ ಮತ್ತು ನಿರ್ದಿಷ್ಟ ಉದ್ದೇಶಕ್ಕಾಗಿ ನಿಗದಿಪಡಿಸಿರುವ ಮಾರ್ಗಗಳಲ್ಲಿ ಸಂಚಾರ.
2. ಎಲ್ಲ ರೀತಿಯ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ, ನ್ಯಾಟೋ ಪಡೆಗಳ ಸ್ಟಾನಗ್‌ ಪ್ರಮಾಣಪತ್ರ ಹೊಂದಿದೆ.
3. 450 ಕೆಜಿ ತೂಕ ಹೊತ್ತು ಸಂಚಾರ ಸಾಮರ್ಥ್ಯ

ಸ್ಟಾನಗ್‌ ಪ್ರಮಾಣದ ಮಹತ್ವ:
ನ್ಯಾಟೋ ಪಡೆಗಳ ಸ್ಟಾನಗ್‌ 4671 ಪ್ರಮಾಣಪತ್ರವನ್ನು ದೃಷ್ಟಿ 10 ಪಡೆದಿದೆ. ಈ ಪ್ರಮಾಣಪತ್ರವಿದ್ದರೆ ನ್ಯಾಟೋ ಸದಸ್ಯ ರಾಷ್ಟ್ರಗಳ ವಾಯುಮಾರ್ಗದಲ್ಲೂ ಹಾರಾಟ ಸಾಧ್ಯ.

Advertisement

ಏನಿದು ಐಎಸ್‌ಆರ್‌ ತಂತ್ರಜ್ಞಾನ?
ದೃಷ್ಟಿ 10 ಸ್ಟಾರ್‌ಲೈನರ್‌ ಐಎಸ್‌ಆರ್‌ ತಂತ್ರಜ್ಞಾನವನ್ನು ಹೊಂದಿದೆ. ಗುಪ್ತಚರ (ಇಂಟೆಲಿಜೆನ್ಸ್‌), ಕಣ್ಗಾವಲು (ಸರ್ವೈಲೆನ್ಸ್‌), ಸ್ಥಳಾನ್ವೇಷಣೆಯನ್ನು (ರೆಕನೈಸಾನ್ಸ್‌) ಮಾಡುವ ಸಾಮರ್ಥ್ಯ ಈ ವ್ಯವಸ್ಥೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next