Advertisement
92 ವಿದ್ಯಾರ್ಥಿಗಳ ಸೇರ್ಪಡೆನಾವುಂದ ಗ್ರಾ.ಪಂ.ವ್ಯಾಪ್ತಿಯ ರಾ.ಹೆದ್ದಾರಿ 66ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗೆ 88 ವರ್ಷ. ಕಳೆದ ಸಾಲಿನಲ್ಲಿ 219 ವಿದ್ಯಾರ್ಥಿಗಳು ಇದ್ದರೆ ಪ್ರಸ್ತುತ ವರ್ಷದಲ್ಲಿ 131 ಹುಡುಗರು ಹಾಗೂ 141 ಹುಡುಗಿಯರನ್ನೊಳಗೊಂಡಂತೆ 272 ವಿದ್ಯಾರ್ಥಿಗಳಿದ್ದಾರೆ. 1ನೇ ತರಗತಿಗೆ 48 ಮಕ್ಕಳು ಸೇರ್ಪಡಿದ್ದಾರೆ. ಎ, ಬಿ ವಿಭಾಗಗಳಲ್ಲಿ ತರಗತಿ ನಡೆಯುತ್ತದೆ.
ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗಗಳಿವೆ. 1ನೇ ತರಗತಿಯಲ್ಲಿ ಎ, ಬಿ ವಿಭಾಗಗಳಿವೆ, 2ನೇ ತರಗತಿ ಯಲ್ಲಿ 44, 3ನೇ ತರಗತಿಯಲ್ಲಿ 48 ಮಕ್ಕಳಿದ್ದು ಎ, ಬಿ ವಿಭಾಗ ಹೊಂದಿದೆ. 4ಮತ್ತು 5ರಲ್ಲಿ 29ಹಾಗೂ 19 ಮಕ್ಕಳಿದ್ದಾರೆ. 6 ಮತ್ತು 7ರಲ್ಲಿ 48 ಮತ್ತು 38 ವಿದ್ಯಾರ್ಥಿಗಳಿದ್ದು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಎ, ಬಿ ವಿಭಾಗಗಳಿವೆ. ಒಟ್ಟು 272 ವಿದ್ಯಾರ್ಥಿಗಳಿಗೆ 6 ಶಿಕ್ಷಕರಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ 4 ಶಿಕ್ಷಕರ ಕೊರತೆ ಉಂಟಾಗಿದೆ. ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ 30 ಮಕ್ಕಳಿದ್ದಾರೆ. ಹೆತ್ತವರ ಹಾಗೂ ಎಸ್‌ಡಿಎಂಸಿ ಅವರ ಸಹಕಾರ ದಿಂದ ಇಬ್ಬರು ಗೌರವ ಶಿಕ್ಷಕ ರನ್ನು ನೇಮಿಸಲಾಗಿದೆ. ವಿಜ್ಞಾನ, ಗಣಿತ, ಸಮಾಜ ವಿಷಯಕ್ಕೆ ಸಂಬಂಧಿಸಿ ವಿಷಯವಾರು ಶಿಕ್ಷಕರ ಅಗತ್ಯವಿದೆ.
Related Articles
Advertisement
ಕೊಠಡಿ ಕೊರತೆಶಾಲೆಯಲ್ಲಿ ಅನ್ನದಾಸೋಹ ಕೊಠಡಿ ಸೇರಿದಂತೆ12 ತರಗತಿ ಕೋಣೆಗಳಿದ್ದು ಇದರಲ್ಲಿ 5ತರಗತಿ ಕೋಣೆಗಳ ಮಹಡಿ ದುಸ್ಥಿತಿಯಿಂದ ಕೂಡಿದೆ. ತುರ್ತು 5 ಕೊಠಡಿಗಳ ಅಗತ್ಯವಿದೆ. ಸ್ಥಳೀಯ ಸಂಘ ಸಂಸ್ಥೆಗಳಿಂದ ಕೈ ತೊಳೆಯುವ ಘಟಕ ಅಳವಡಿಸಲಾಗಿದೆ. ದಾನಿಗಳ ಸಹಕಾರದೊಂದಿಗೆ 1.5 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ಪಾರ್ಕ್ ನಿರ್ಮಿಸುವ ಯೋಜನೆ ಹೊಂದ ಲಾ ಗಿದೆ. ಹಳೆ ವಿದ್ಯಾರ್ಥಿ ಸಂಘದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ದೂರದ ಗ್ರಾಮೀಣ ಪ್ರದೇಶಗಳಾದ ರಾಗಿಹಕ್ಲು, ಹೇರೂರು, ಕುದ್ರಕೋಡು, ಉಳ್ಳೂರು, ಬಡಾಕರೆ ಸೇರಿದಂತೆ ನಿತ್ಯ 100 ಕಿ.ಮೀ. ವಿದ್ಯಾರ್ಥಿಗಳಿಗಾಗಿ ಸಂಚರಿಸುತ್ತದೆ. ಜನಪ್ರತಿನಿಧಿಗಳ ಹಾಗೂ ಇಲಾಖೆಗಳಿಂದ ಇನ್ನಷ್ಟು ಮೂಲ ಸೌಕರ್ಯಗಳ ಸಮಸ್ಯೆಗಳಿಗೆ ಸ್ಪಂದಿಸಿದರೆ ಖಾಸಗಿ ಶಾಲೆಗಳ ಸಂಖ್ಯೆಯನ್ನು ಮೀರಿಸುವ ವಿಶ್ವಾಸ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅವರದ್ದು. ಮೂಲಸೌಕರ್ಯಗಳ ಸಮಸ್ಯೆ
ನಲಿ-ಕಲಿ ತರಗತಿಗಳಿಗೆ ಕುರ್ಚಿ, ಟೇಬಲ್‌ಗಳ ಕೊರತೆ ಉಂಟಾಗಿದೆ. ಡೆಸ್ಕ್ ಗಳ ದುರಸ್ತಿ ಮಾಡಲು ಬಾಕಿ ಇದೆ. ಈಗ ಇರುವ 4 ಶೌಚಾಲಯವು ಶಿಥಿಲಗೊಂಡಿದ್ದು ಹೆಚ್ಚುವರಿ ಶೌಚಾಲಯದ ಅಗತ್ಯವಿದೆ. ಗ್ರಾ.ಪಂ. ನರೇಗ ಯೋಜನೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರದಲ್ಲಿ 5 ಲಕ್ಷ ರೂ.ದಲ್ಲಿ ಶೌಚಾಲಯ ನಿರ್ಮಾಣವಾಗಲಿದೆ ಎನ್ನಲಾಗಿದೆ. ಗ್ರಂಥಾಲಯಕ್ಕೆ ಕಟ್ಟಡದ ಅಗತ್ಯ ಇದೆ. ಪ್ರಯೋಗಾಲಯ, ಕಂಪ್ಯೂಟರ್, ಪ್ರೊಜೆಕ್ಟರ್, ಕ್ರೀಡಾ ಸಾಮಗ್ರಿಗಳ ಆವಶ್ಯಕತೆ ಇದೆ. ಭೌತಿಕ ಸೌಲಭ್ಯ ನೀಡಿ
ಎಸ್‌ಡಿಎಂಸಿ ಅವರ ಸಂಪೂರ್ಣ ಸಹಕಾರ ಹಾಗೂ ಹಳೆ ವಿದ್ಯಾರ್ಥಿಗಳ ಮತ್ತು ದಾನಿಗಳ ಬೆಂಬಲದಿಂದ ಸರಕಾರಿ ಶಾಲೆಯು ಖಾಸಗಿ ಶಾಲೆಗಿಂತ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ.ಸರಕಾರ ಭೌತಿಕ ಸೌಲಭ್ಯಗಳನ್ನು ನೀಡಿದರೆ ಖಾಸಗಿ ಶಾಲೆಗೆ ಪೈಪೋಟಿ ನೀಡಬಹುದು.
-ಶೇಖರ, ಮುಖ್ಯಶಿಕ್ಷಕ -ಕೃಷ್ಣ ಬಿಜೂರು