Advertisement
ಬಡಾಕೆರೆ ಗ್ರಾಮಕ್ಕೆ ಹಾದು ಹೋಗುವ ಕಳುವಿನಬಾಗಿಲು ರಸ್ತೆಯ ಭಾಗಶಃ ಕಾಂಕ್ರೀ ಟೀಕರಣ ಆಗಿದ್ದು ಅಲ್ಲಿಯ ರಸ್ತೆಯ ಸ್ವಲ್ಪಭಾಗ ಅಭಿವೃದ್ಧಿ ಕಾಣದೇ ಮಣ್ಣು ರಸ್ತೆಯಾಗಿಯೇ ಉಳಿದಿದೆ. ಮಳೆಗಾಲದಲ್ಲಿ ಹೊಂಡಗುಂಡಿ ಗಳಿಂದಾಗಿ ಸಾರ್ವಜನಿಕರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಬಡಾಕೆರೆ ಗ್ರಾಮಗಳಿಂದ ನಾವುಂದ, ಮರವಂತೆ, ಗಂಗೊಳ್ಳಿ, ಕುಂದಾಪುರ, ಬೈಂದೂರು ಭಾಗದ ವಿವಿಧ ಶಾಲೆ ಕಾಲೇಜುಗಳಿಗೆ ಪ್ರತಿನಿತ್ಯ ಹೋಗುವ ನೂರಾರು ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಇದು ಪ್ರಮುಖ ಸಂಚಾರ ಮಾರ್ಗವಾಗಿದ್ದು ಹದಗೆಟ್ಟ ರಸ್ತೆಯಿಂದಾಗಿ ಸಾರ್ವಜನಿಕರು ಪ್ರಯಾಣ ಸಮಯದಲ್ಲಿ ಪರಿತಪಿಸುಂತಾಗಿದೆ. ಸಂಚಾರ ದುಸ್ತರ
ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ ರಸ್ತೆಯ ಸ್ವಲ್ಪ ಭಾಗ ಮಣ್ಣುಗಳಿಂದ ಕೂಡಿರುವುದರಿಂದ ಮಳೆಯಿಂದಾಗಿ ಕೆಸರಿನಿಂದ ರಾಡಿ ಎದ್ದಿದ್ದು ಅಲ್ಲದೆ, ಉಂಟಾಗಿರುವ ಹೊಂಡಗುಂಡಿಗಳಿಂದಾಗಿ ವಾಹನಗಳಿಗೆ ಸಂಚರಿಸಲು ಕಷ್ಟಕರವಾಗಿ ಪರಿಣಮಿಸಿದೆ. ಸೈಕಲ್, ಬೈಕ್, ಆಟೋ ಚಾಲಕರು ಒಂದು ಹೊಂಡವನ್ನು ತಪ್ಪಿಸಲು ಹೋಗಿ ಮತ್ತೂಂದು ಹೊಂಡಕ್ಕೆ ವಾಹನಗಳನ್ನು ಹಾರಿಸುವುದು ಅನಿವಾರ್ಯ ಎಂಬಂತಾಗಿದೆ.
Related Articles
Advertisement