Advertisement
ಉಭಯ ಜಿಲ್ಲೆಗಳ ವಿವಿಧ ದೇವಿ ದೇವಾಲಯಗಳಲ್ಲಿ ಅ.15ರಿಂದ 9 ದಿನಗಳ ಕಾಲ ಚಂಡಿಕಾ ಹವನ, ಸಪ್ತಶತಿ ಪಾರಾಯಣ, ದುರ್ಗಾ ಹವನ, ದುರ್ಗಾ ನಮಸ್ಕಾರ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ನಿತ್ಯವೂ ಅನ್ನದಾನ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಟೀಲು, ಪೊಳಲಿ, ಬಪ್ಪನಾಡು ಸಹಿತ ವಿವಿಧ ದೇವಾಲಯಗಳಲ್ಲಿಯೂ ನವರಾತ್ರಿ ಸಡಗರ ವಿಜಯದಶಮಿ ಉತ್ಸವದೊಂದಿಗೆ ಕೊನೆಗೊಂಡಿತು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವಿಜಯ ದಶಮಿಯಂದು ವಿದ್ಯಾರಂಭ, ತುಲಾಭಾರ ನಡೆಯಿತು. ಮಧ್ಯಾಹ್ನ ರಥಾರೋಹಣ ನಡೆದು ರಾತ್ರಿ ವೈಭವದ ರಥೋತ್ಸವ ನೆರವೇರಿತು. ವಿವಿಧೆಡೆ ಸಂಘ ಸಂಸ್ಥೆಗಳಿಂದಲೂ ಶಾರದಾ ಪೂಜೆ ಶ್ರದ್ಧಾಭಕ್ತಿಗಳಿಂದ ನೆರವೇರಿತು.
Related Articles
ಮಂಗಳೂರಿನ ರಥಬೀದಿಯ ಆಚಾರ್ಯ ಮಠ ವಠಾರದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಡುತ್ತಿರುವ 101ನೇ ವರ್ಷದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ ವೈಭವದ ಶೋಭಾಯಾತ್ರೆ ಅ.25ರಂದು ನಡೆಯಲಿದೆ. ರಾತ್ರಿ 10 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಮೆರವಣಿಗೆ ನಗರದಲ್ಲಿ ನಡೆಯಲಿದೆ.
Advertisement
ಉಡುಪಿ: ದೇಗುಲಗಳಲ್ಲಿ ವೈಭವದ ಉತ್ಸವಉಡುಪಿ: ಜಿಲ್ಲೆಯ ಕೊಲ್ಲೂರು, ಮಂದಾರ್ತಿ, ಕುಂಭಾಶಿ, ಉಚ್ಚಿಲ, ಕಾಪು ಮಾರಿಗುಡಿಗಳು, ಕಾರ್ಕಳದ ಕುಕ್ಕುಂದೂರು, ಕಮಲಶಿಲೆ, ಸೌಕೂರು, ಉಡುಪಿಯ ಕಡಿ ಯಾಳಿ, ಇಂದ್ರಾಳಿ, ಬೈಲೂರು, ಅಂಬಲಪಾಡಿ, ಪುತ್ತೂರು, ಕನ್ನ ರ್ಪಾಡಿ, ದೊಡ್ಡಣಗುಡ್ಡೆ ಸಹಿತ ದೇವಿಯ ದೇವಸ್ಥಾನಗಳಲ್ಲಿ ವೈಭವದಿಂದ ಉತ್ಸವ ನಡೆದಿದೆ. ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಶ್ರೀಕೃಷ್ಣ ಮಠದಿಂದ ಮೆರವಣಿಗೆ ಬಂದು ಶಮೀ ವೃಕ್ಷದ ಪೂಜೆಯ ಪ್ರಸಾದವನ್ನು ಸ್ವೀಕರಿಸಿದರು. ಶ್ರೀಕೃಷ್ಣಮಠ ದಲ್ಲಿ ಕದಿರು ಕಟ್ಟುವ ಹಬ್ಬ ಆಚರಿಸಲಾಯಿತು. ಕಾಪು ತಾಲೂಕಿನ ಪಾಜಕ ಕ್ಷೇತ್ರದಲ್ಲಿ ಮಧ್ವಜಯಂತಿ ಉತ್ಸವ ನಡೆಯಿತು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಳೆದ ವರ್ಷ ಆರಂಭಗೊಂಡಿದ್ದ ದಸರಾ ಈ ಬಾರಿಯೂ ಅದ್ದೂರಿಯಾಗಿ ನಡೆದು ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.