ಮಹಾನಗರ: ನವರಾತ್ರಿ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶುಕ್ರವಾರವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಸಾವಿರಾರು ಮಂದಿ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.
ಕುದ್ರೋಳಿ ದೇವಸ್ಥಾನದಲ್ಲಿ ಶುಕ್ರವಾರ ಆರ್ಯ ದುರ್ಗಾ ಹೋಮ, ಪುಷ್ಪಾಲಂಕಾರ ಮಹಾಪೂಜೆ, ಭಜನೆ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ ಹಾಗೂ ಉತ್ಸವ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ವತಿಯಿಂದ ‘ತುಳುನಾಡ ಸತ್ಯೋಲು’ ಕಾರ್ಯಕ್ರಮ ಜರಗಿತು.
ಮಂಗಳಾದೇವಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳಾದೇವಿ ಸುಮನಾ ಕೇಂದ್ರ ಮಾತೃಮಂಡಳಿ ವತಿಯಿಂದ ಭಜನೆ, 5ರಿಂದ ದಿವಾಣ ಕೇಶವ ಭಟ್ ಮತ್ತು ಮಹಾಲಿಂಗೇಶ್ವರ ಭಟ್ ಅವರಿಂದ ಆರ್ಷಜ್ಞಾನ-ಆಚಾರ-ವಿಚಾರಗಳ ಬಗ್ಗೆ ಸಂವಾದ, ಬಳಿಕ ಪೂಜಾ ಉಪಾಧ್ಯಾ ಅವರಿಂದ ಭರತನಾಟ್ಯ, ರಾತ್ರಿ 7ರಿಂದ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಅವರ ಶಿಷ್ಯವೃಂದದಿಂದ ನೃತ್ಯ ವೈಭವ, ಬಳಿಕ ಎಂಜಿಟಿ ಸುವರ್ಣ ಮಹೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ಜರಗಿತು.
ಇಂದಿನ ಕಾರ್ಯಕ್ರಮ
ಅ. 13ರಂದು ಕುದ್ರೋಳಿ ದೇವಸ್ಥಾನದಲ್ಲಿ ಬೆಳಗ್ಗೆ 10ಕ್ಕೆ ಭಗವತೀ ದುರ್ಗಾ ಹೋಮ, 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ರಾತ್ರಿ 7ಕ್ಕೆ ಭಜನೆ, 9ರಿಂದ ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ಕ್ಕೆ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ವಿಜೇತ ಮಣಿಪಾಲ ವಿಪಂಚಿ ಬಳಗದ ನಿರ್ದೇಶಕಿ ಪವನಾ ಬಿ. ಆಚಾರ್ ನಿರ್ದೇಶನದಲ್ಲಿ ನವ ವೀಣಾವಾದನ, 7.30ರಿಂದ ಸಾಮಿ ಕೃಪಾ ಟೀಂ ಡಿಫರೆಂಟ್ ಮಂಗಳೂರು ಪ್ರೊಡಕ್ಷನ್ ದೀಕ್ಷಿತ್‌ರಾಜ್ ಪಡೀಲ್ ಮತ್ತು ತಂಡದವರಿಂದ ತೈಯಂ ನೃತ್ಯ ಕಾರ್ಯಕ್ರಮವಿದೆ.
ಮಂಗಳಾದೇವಿ ದೇವಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ 4ರಿಂದ ಶ್ರೀ ಮಂಗಳಾದೇವಿ ಸೇವಾ ಸಮಿತಿ ಮಹಿಳಾ ಘಟಕದವರಿಂದ ಭಜನೆ, 5ರಿಂದ ದೇವಸ್ಥಾನದ ವತಿಯಿಂದ ಜನಪದ ಕಲೋತ್ಸವದ ಬೆಳ್ಳಿಹಬ್ಬ ಸಂಭ್ರಮ, ರಾತ್ರಿ 10ಕ್ಕೆ ಶ್ರೀ ಮೂಕಾಂಬಿಕಾ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.