Advertisement
ನವರಾತ್ರಿಯ ಒಂಬತ್ತು ದಿನಗಳಲ್ಲಿ ಹೆಂಗೆಳೆಯರು ಪ್ರತೀ ದಿನವೂ ಒಂದೊಂದು ವರ್ಣದ ಸೀರೆಯನ್ನು ಧರಿಸಿ ಸಂಭ್ರಮಿ ಸುವುದಕ್ಕೆ ಉದಯವಾಣಿ ಕಲ್ಪಿಸಿರುವ ಅವಕಾಶ ಈ ನವರೂಪ.
Related Articles
Advertisement
ಆಯಾ ದಿನಕ್ಕೆ ಸೂಚಿತವಾದ ವರ್ಣದ ಸೀರೆ ಯನ್ನು ಧರಿಸಿ ಚಿತ್ರ ತೆಗೆದು ಆಯಾ ದಿನ ಸಂಜೆ 3 ಗಂಟೆ ಒಳಗೆ ವಾಟ್ಸ್‌ಆ್ಯಪ್ ಮಾಡಬೇಕು. ಹಳೆಯ ಚಿತ್ರಗಳಿಗೆ ಅವಕಾಶ ಇಲ್ಲ. ಯಾವುದೇ ವಯಸ್ಸಿನವರೂ ಭಾಗವಹಿಸಬಹುದು. ಕುಟುಂಬ ಸದಸ್ಯೆಯರು, ಗೆಳತಿಯರು, ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯೆಯರು ಭಾಗವಹಿಸಲು ಉತ್ತಮ ಅವಕಾಶ. ಸಮೂಹ ಚಿತ್ರಗಳಿಗೆ ಆದ್ಯತೆ, ಕನಿಷ್ಠ ಮೂರು ಮಂದಿ ಇರಬೇಕು. ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಲೇಬೇಕು. ಉತ್ತಮ ಗುಣಮಟ್ಟದ ಆಯ್ದ ಚಿತ್ರಗಳನ್ನು ಮರುದಿನದ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತದೆ.
ಆಯಾ ಪ್ರದೇಶದವರು (ಉಡುಪಿ, ಕುಂದಾಪುರ, ಕಾರ್ಕಳ, ಮಂಗಳೂರು, ಮಂಗಳೂರು ಗ್ರಾಮಾಂ ತರ, ಪುತ್ತೂರು, ಬಂಟ್ವಾಳ) ನಿಗದಿತ ವಾಟ್ಸ್‌ಆ್ಯಪ್ ಸಂಖ್ಯೆಗಳಿಗೆ ಚಿತ್ರಗಳನ್ನು ಕಳುಹಿಸಬೇಕು.
ಅಪೂರ್ವ ಅವಕಾಶನವರಾತ್ರಿ ಸಂಭ್ರಮವನ್ನು ಇಮ್ಮಡಿ- ಮುಮ್ಮಡಿಗೊಳಿಸಿಕೊಳ್ಳಲು ಉದಯವಾಣಿಯ ನವರೂಪ ಒಂದು ಉತ್ತಮ ಅವಕಾಶ. ವರ್ಷಕ್ಕೊಮ್ಮೆ ಕದ ತಟ್ಟುವ ಈ ಅಪೂರ್ವ ಕಾರ್ಯಕ್ರಮ ನಿಮ್ಮ ಹಬ್ಬದ ಆಚರಣೆಗೆ ಒಂದು ವಿಶಿಷ್ಟ ಆಯಾಮ ನೀಡಲಿದೆ. ಬನ್ನಿ, ಸೆ. 26ರಿಂದ ಆರಂಭವಾಗುವ ಉದಯವಾಣಿ ನವರೂಪದಲ್ಲಿ ನಿಮ್ಮ ಗೆಳತಿಯರು, ಕುಟುಂಬ ಸದಸ್ಯೆಯರ ಜತೆಗೆ ಪಾಲ್ಗೊಂಡು ಮಿಂಚುವುದಷ್ಟೇ ಅಲ್ಲ; ಉದಯವಾಣಿ ದಿನಪತ್ರಿಕೆಯ ಪುಟಗಳನ್ನು ಅಲಂಕರಿಸುವುದನ್ನು ಕಂಡು ಹಿರಿಹಿರಿ ಹಿಗ್ಗಿ. ಬಹುಮಾನ ಪಡೆಯುವ ಅದೃಷ್ಟಶಾಲಿಗಳಾಗಿ
ಉದಯವಾಣಿ ನವರೂಪದಲ್ಲಿ ಪ್ರತೀ ದಿನ ಬಹುಮಾನ ಗೆಲ್ಲುವ ಅವಕಾಶವೂ ಇದೆ. ಪ್ರತೀ ದಿನ ಮೂವರು ಅದೃಷ್ಟ ಶಾಲಿಗಳನ್ನು ಚೀಟಿ ಎತ್ತಿ ಆರಿಸಲಾಗುತ್ತದೆ. ಹಬ್ಬದ ಕೊನೆಯಲ್ಲಿ ಬಂಪರ್ ಬಹುಮಾನ ಪಡೆಯುವ ಅದೃಷ್ಟವೂ ಇದೆ.