Advertisement

ನರೇಂದ್ರ ಮೋದಿ ‘ದುಲ್ಹನ್‌’: ನವಜೋತ್‌ ಸಿಂಗ್‌ ಸಿಧು ಹೇಳಿಕೆ ಸೆಕ್ಸಿಸ್ಟ್‌ ಎಂದ ಬಿಜೆಪಿ

09:40 AM Apr 09, 2020 | Sathish malya |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯನ್ನು ದುಲ್ಹನ್‌ ಗೆ ಹೋಲಿಸಿ ವ್ಯಂಗ್ಯವಾಡಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರ ಹೇಳಿಕೆಯು ಕಾಂಗ್ರೆಸ್‌ ಪಕ್ಷದ ಜನಾಂಗೀಯ ಮತ್ತು ಲಿಂಗ ವಿರೋಧಿ ಮನೋಭಾವವನ್ನು ತೋರಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ.

Advertisement

ಕಡಿಮೆ ರೋಟಿ ತಟ್ಟುವ, ಆದರೆ ತಾನು ಹೆಚ್ಚು ಕೆಲಸ ಮಾಡುವವಳೆಂದು ಬಿಂಬಿಸಲು ಕೈತುಂಬ ಬಳೆ ತೊಡುವ ನವ ವಧುವಿನಂತೆ ಪ್ರಧಾನಿ ಮೋದಿ ಎಂದು ಸಿಧು ಅವರು ಇಂದು ಶನಿವಾರ ಹೇಳಿರುವುದು ಬಿಜೆಪಿಯಿಂದ ಟೀಕೆ, ಖಂಡನೆಗೆ ಗುರಿಯಾಗಿದೆ.

ಈ ಬಗ್ಗೆ ದಿಲ್ಲಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಅವರು ಸಿಧು ನೀಡಿರುವ ದುಲ್ಹನ್‌ ಹೇಳಿಕೆ ಜನಾಂಗ ಮತ್ತು ಲಿಂಗ ವಿರೋಧಿಯಾಗಿದ್ದು ಇದು ಕಾಂಗ್ರೆಸ್‌ ಪಕ್ಷದ ಕುತ್ಸಿತ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next