Advertisement

ನವಿಲಾದವರು : ಕನ್ನಡ ಶಾಲೆಗಳನ್ನು ಉಳಿಸೋದಕ್ಕೆ ಅಲ್ಲಿಂದ ಬಂದವರು …

05:00 PM Jun 29, 2017 | |

ಕನ್ನಡದಲ್ಲಿ ಪರಭಾಷೆಯಿಂದ ಬಂದು ಸಿನಿಮಾ ಮಾಡಿದವರ ಸಂಖ್ಯೆ ಕಡಿಮೆ ಏನಿಲ್ಲ. ಆ ಸಾಲಿಗೆ ಈಗ “ನವಿಲ ಕಿನ್ನರಿ’ ಸಿನಿಮಾ ತಂಡವೂ ಒಂದು. ಹೌದು, ಈ ಸಿನಿಮಾ ಮೂಲಕ ವೆಂಕಿ ಚೆಲ್ಲಾ ಎಂಬ ತೆಲುಗು ನಿರ್ದೇಶಕರು ಕನ್ನಡಕ್ಕೆ ಬಂದಿದ್ದಾರೆ. ಇವರಷ್ಟೇ ಅಲ್ಲ, ನಿರ್ಮಾಪಕರು, ತಂತ್ರಜ್ಞರೂ ಕನ್ನಡಕ್ಕೆ ಬಂದು ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಆಡಿಯೋ ಸಿಡಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

Advertisement

“ನವಿಲ ಕಿನ್ನರಿ’ ಎಂಬುದು ಅರಿವು ಮೂಡಿಸುವ ಸಿನಿಮಾ ಎನ್ನುತ್ತಾರೆ ನಿರ್ದೇಶಕ ವೆಂಕಿ ಚೆಲ್ಲಾ. ಇಲ್ಲಿ ಭಾಷೆ, ನೃತ್ಯ, ಶಿಕ್ಷಣ ಸೇರಿದಂತೆ ಕನ್ನಡ ಶಾಲೆಗಳನ್ನು ಉಳಿಸುವ ಕುರಿತಂತೆ ಹೇಳಲಾಗಿದೆ. ಒಬ್ಬ ಕ್ಲಾಸಿಕಲ್‌ ನೃತ್ಯಪಟುವೊಬ್ಬಳು ಶಾಲೆಯಲ್ಲಿ ಏನೇ ಅಡ್ಡಿ ಆತಂಕಗಳು ಬಂದರೂ, ಅದನ್ನು ಮೆಟ್ಟಿನಿಂತು, ತಾನೂ ಗೆಲ್ಲುವುದಲ್ಲದೆ ತಾನು ಓದುವ ಸರ್ಕಾರಿ ಕನ್ನಡ ಶಾಲೆಯನ್ನು ಉಳಿಸಲು ಹೇಗೆ ಸಫ‌ಲವಾಗುತ್ತಾಳೆ ಎಂಬುದು ಸಿನಿಮಾದ ಕಥೆ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ಹೈದರಬಾದ್‌ ಮೂಲದ ಹಿಮಾಂಶಿ ಚಿತ್ರದ ನಾಯಕಿ. ಇಲ್ಲಿ ಕೆಲವು ಕಲಾವಿದರನ್ನು ಹೊರತುಪಡಿಸಿ ಉಳಿದವರೆಲ್ಲರೂ ತೆಲುಗಿನವರೇ. ಬೆಂಗಳೂರು, ಮೇಲುಕೋಟೆ, ಹೊನ್ನಾವರ ಸುತ್ತ ಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಶ್ರೀನಿವಾಸ ಪ್ರಭು, ರಂಜನಿಪ್ರಭು, ಸ್ಪಂದನಾ ಪ್ರಕಾಶ್‌, ನಟರಾಜ್‌ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಸುಭಾಷ್‌ ಆನಂದ್‌ ಅವರ ಸಂಗೀತವಿದೆ. ವೆಂಕಟೇಶ್‌ ನಾಲ್ಕು ಗೀತೆಗಳನ್ನು ರಚಿಸಿದ್ದಾರೆ.  ಶ್ರೀನಿವಾಸ್‌ ವಿನ್ನಿಕೋಟ ಕ್ಯಾಮೆರಾ ಹಿಡಿದಿದ್ದಾರೆ.

ಹುಲಿಕಲ್‌ ಎಂಟರ್‌ಟೈನ್‌ ಮೆಂಟ್‌ ಸ್ಟುಡಿಯೋ ಮೂಲಕ ಶರತ್‌, ಬಸವಣ್ಣ , ಗಂಗಾಧರಯ್ಯ, ಪ್ರಕಾಶ್‌ಅಂಗಡಿ, ಸೂರ್ಯಪ್ರಕಾಶ್‌ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next