ಕೆಲವು ಆ್ಯಂಡ್ರಾಯ್ಡ ಮೊಬೈಲ್‌ಗಳಲ್ಲಿ ಕಾಣಿಸಿಕೊಂಡಿದ್ದ ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್ ಎಂಬ ನ್ಯಾವಿಗೇಶನ್ ಆ್ಯಪ್ ಅನ್ನು 2 ಮಾದರಿಯ ಐಫೋನ್ ಫೋನ್‌ಗಳಲ್ಲಿ ಅಳವಡಿಕೆ ಮಾಡಿಕೊಳ್ಳಲಾಗಿದೆ. 2025ರ ಅಂತ್ಯಕ್ಕೆ ದೇಶದಲ್ಲಿರುವ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲೂ ನಾವಿಕ್ ಅನ್ನು ಕಡ್ಡಾಯ ಮಾಡುತ್ತೇವೆ ಎಂದು ಕೇಂದ್ರ ಹೇಳಿದೆ.
ಏನಿದು ನಾವಿಕ್?
(ನಾವಿಕ್)ಎನ್‌ಎವಿಐಸಿ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಅಭಿವೃದ್ಧಿ ಪಡಿಸಿರುವ ನ್ಯಾವಿಗೇಶನ್ ಸಾಫ್ಟ್ವೇರ್. ಏಳು ಉಪಗ್ರಹಗಳು ಈ ಸಾಫ್ಟ್ವೇರ್‌ಗಾಗಿ ಒಟ್ಟಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿವೆ. ಮೂರು ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಯಲ್ಲಿ ಇರಿಸಲಾಗಿದ್ದರೆ, ಉಳಿದ ನಾಲ್ಕನ್ನು ಜೀಸೋಸಿಂಕ್ರನೈಸ್ ಕಕ್ಷೆಯಲ್ಲಿ ಇರಿಸಲಾಗಿದೆ.
ವ್ಯಾಪ್ತಿ ಎಷ್ಟಿದೆ?
ಭಾರತ ಮತ್ತು ಭಾರತದ ಸುತ್ತಲಿನ 1,500 ಕಿ.ಮೀ. ವ್ಯಾಪ್ತಿವರೆಗೂ ಮಾಹಿತಿ ಕೊಡಬಲ್ಲದು. ಇತರ ನ್ಯಾವಿಗೇಶನ್ ಸಾಫ್ಟ್ವೇರ್‌ಗಳಾದ ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಮತ್ತು ಬಿಡ್ನೂ ಪರಸ್ಪರ ಸಂಕೇತಗಳನ್ನು ರವಾನಿಸುತ್ತವೆ. ಗ್ಲೋನಾಸ್ ಅನ್ನು ರಷ್ಯಾ, ಗೆಲಿಲಿಯೋ ಅನ್ನು ಐರೋಪ್ಯ ಒಕ್ಕೂಟ ಮತ್ತು ಬಿಡ್ನೂ ಅನ್ನು ಚೀನ ಅಭಿವೃದ್ಧಿ ಪಡಿಸಿದೆ.
ಕೇಂದ್ರದ ನಡೆ ಏನು?
ಸದ್ಯ ಆ್ಯಪಲ್ ಐಫೋನ್‌ನ ಎರಡು ಟಾಪ್ ಮಾಡೆಲ್‌ಗಳಲ್ಲಿ ಮಾತ್ರ ನಾವಿಕ್ ಅನ್ನು ಬಳಕೆ ಮಾಡಲಾಗಿದೆ. 2025ರ ಅಂತ್ಯಕ್ಕೆ ಭಾರತದಲ್ಲಿ ಸಿಗುವ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಸಾಫ್ಟ್ವೇರ್ ಬಳಕೆ ಮಾಡಲಾಗುವುದು ಎಂದು ಕೇಂದ್ರ ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸದ್ಯ ಭಾರತದಲ್ಲಿ ಹೆಚ್ಚಾಗಿ ಗೂಗಲ್ ಮ್ಯಾಪ್ ಬಳಕೆ ಮಾಡಲಾಗುತ್ತಿದೆ.
ಯಾವ ಫೋನ್‌ನಲ್ಲಿ ಲಭ್ಯ?
ಸದ್ಯ ಕ್ವಾಲ್‌ಕಾಮ್, ಮೀಡಿಯಾಟೆಕ್ ಚಿಪ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಬಹುದು. 2020ರಲ್ಲಿ ಕೆಲವು ಆ್ಯಂಡ್ರಾಯ್ಡ ಫೋನ್‌ಗಳು ಸಪೋರ್ಟ್ ಮಾಡುವಂತೆ ಮಾಡಲಾಗಿತ್ತು.