Advertisement

ನವೀನ್‌ ಕೃಷ್ಣ ಈಗ ಹಿರಣ್ಯಕಶ್ಯಪು

08:59 AM Jan 08, 2019 | |

ಈಗಾಗಲೇ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸೈ ಎನಿಸಿಕೊಂಡಿರುವ ನಟ ನವೀನ್‌ ಕೃಷ್ಣ ಈಗ ಹಿರಣ್ಯಕಶ್ಯಪು ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯ “ನರಸಿಂಹಾವತಾರ’ದಲ್ಲಿ ನವೀನ್‌ ಕೃಷ್ಣ ಹಿರಣ್ಯಕಶ್ಯಪು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಂದಿನಿಂದ “ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯಲ್ಲಿ “ನರಸಿಂಹಾವತಾರ’ ಆರಂಭವಾಗಲಿದ್ದು, ನವೀನ್‌ ಕೃಷ್ಣ ಅಸುರನಾಗಿ ಅಬ್ಬರಿಸಲು ಸಿದ್ಧವಾಗಿದ್ದಾರೆ.

Advertisement

ತಮ್ಮ ಹೊಸಪಾತ್ರದ ಬಗ್ಗೆ ಮಾತನಾಡುವ ನವೀನ್‌ ಕೃಷ್ಣ, “ಬೆಳ್ಳಿತೆರೆಯಲ್ಲಿ ಹಿರಣ್ಯಕಶ್ಯಪು ಎಂದರೆ ಡಾ.ರಾಜಕುಮಾರ್‌ ಮೊದಲು ನೆನಪಾಗುತ್ತಾರೆ. ರಾಜಕುಮಾರ್‌ ಆ ಪಾತ್ರದಲ್ಲಿ ಛಾಪು ಒತ್ತಿರುವುದರಿಂದ, ಅವರಿಂದ ಸ್ಫೂರ್ತಿಗೊಂಡು ಈ ಪಾತ್ರ ನಿರ್ವಸುತ್ತಿದ್ದೇನೆ.

ಈ ಪಾತ್ರ ದೇಹದಾಡ್ಯìತೆ, ಉಗ್ರ ನೋಟ, ಭಾಷಾ ಶುದ್ಧತೆ ಹೀಗೆ ಅಂಶಗಳನ್ನು ನಿರೀಕ್ಷಿಸುತ್ತದೆ. ಅದಕ್ಕೆ ಬೇಕಾದ ಒಂದಷ್ಟು ತಯಾರಿಗಳೊಂದಿಗೆ ಹಿರಣ್ಯಕಶ್ಯಪು ಪಾತ್ರ ನಿರ್ವಹಿಸುತ್ತಿದ್ದೇನೆ’ ಎನ್ನುತ್ತಾರೆ. ಡ್ರಾಮ ಜ್ಯೂನಿಯರ್ಸ್‌ ಖ್ಯಾತಿಯ ಅಚಿಂತ್ಯ “ಪ್ರಹ್ಲಾದನ’ ಪಾತ್ರದಲ್ಲಿ ಗಮನ ಸೆಳೆಯಲಿ¨ªಾನೆ. ಕಿರುತೆರೆ ನಟನೆಯಲ್ಲಿ ಖ್ಯಾತಿ ಪಡೆದ ಅರ್ಚನ ಅವರು “ಕಯಾದು’ ಪಾತ್ರದಲ್ಲಿ ಕಾಣಿಸಿಕೊಳ್ಳಲಿ¨ªಾರೆ. ಅಂದಹಾಗೆ, “ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯ “ನರಸಿಂಹಾವತಾರ’ದ ಸಂಚಿಕೆಗಳು ಇಂದಿನಿಂದ ಪ್ರಸಾರಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next