Advertisement

ನವಯುಗ ಟೋಲ್‌ ವಿರುದ್ಧ ಮೈಗೆ ಮಸಿ ಬಳಿದು ಅರೆನಗ್ನ ಪ್ರತಿಭಟನೆ

01:00 AM Jan 31, 2019 | Harsha Rao |

ಪಡುಬಿದ್ರಿ: ಹೆಜಮಾಡಿ ಜಿ.ಪಂ. ವ್ಯಾಪ್ತಿಯ ವಾಹನಗಳಿಗೆ ಹೆಜಮಾಡಿ ಟೋಲ್‌ನಲ್ಲಿ ರಿಯಾಯಿತಿಗೆ ಆಗ್ರಹಿಸಿ ಕಳೆದ 23 ದಿನಗಳಿಂದ ಪಡುಬಿದ್ರಿ ಟೆಂಪೋ ನಿಲ್ದಾಣದ ಬಳಿ ಕರವೇ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಈಗ ಮತ್ತೂಂದು ಮಜಲು ಮುಟ್ಟಿದೆ.

Advertisement

ಪ್ರತಿಭಟನೆಗೆ ಜಿಲ್ಲಾಡಳಿತದ ಸ್ಪಂದನೆ ಇಲ್ಲದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬುಧವಾರದಂದು ಮೈಗೆ ಮಸಿ ಬಳಿದು ಅರೆನಗ್ನರಾಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು.

‘ಭ್ರಷ್ಟ ವ್ಯವಸ್ಥೆಗೆ ಬಳಿದ ಮಸಿ’

ಸಂಘಟನೆಯ ಜಿಲ್ಲಾಧ್ಯಕ್ಷ ಅನ್ಸಾರ್‌ ಅಹಮ್ಮದ್‌ ಮಾತನಾಡಿ, 23 ದಿನಗಳಿಂದ ವಿವಿಧ ಸಂಘಟನೆಗಳ ಸಹಕಾರದಿಂದ ಹೆಜಮಾಡಿ ಟೋಲ್‌ ವಿರುದ್ಧ ವಿವಿಧ ರೀತಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸಿದ್ದೇವೆ. ವಿವಿಧ ಪಕ್ಷಗಳ ನಾಯಕರು ಕೂಡ ಸ್ಥಳಕ್ಕೆ ಬಂದು ನಮ್ಮೊಂದಿಗೆ ಬೆರೆತು ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ, ಆದರೆ ನಮ್ಮ ಹೋರಾಟವನ್ನು ದಮನಿಸುವ ಪ್ರಯತ್ನಗಳು ನಡೆದಿವೇ ಹೊರತೂ ಜಿಲ್ಲಾಧಿಕಾರಿ ನಮ್ಮನ್ನು ಭೇಟಿಯಾಗುವ ಸೌಜನ್ಯವನ್ನು ತೋರಿಲ್ಲ.

ಏನಿದ್ದರೂ ನಮ್ಮ ಹೋರಾಟ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಮುಂದುವರಿಯಲಿದೆ. ಮಸಿ ನಮಗೆ ನಾವೇ ಬಳಿದಿರುವುದಲ್ಲ. ಭ್ರಷ್ಟ ವ್ಯವಸ್ಥೆಗೆ ಬಳಿದಿರುವ ಮಸಿ ಇದು ಎಂದರು.

Advertisement

ಡಿಕೆಶಿ – ನವಯುಗ ಅಧಿಕಾರಿಗಳೊಂದಿಗೆ ಚರ್ಚೆ: ಮಿಥುನ್‌ ರೈ

ಸ್ಥಳಕ್ಕೆ ಭೇಟಿಯಿತ್ತ ದ.ಕ., ಜಿಲ್ಲಾ ಯುವ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ತಾನು ಸಚಿವ ಡಿ. ಕೆ. ಶಿವಕುಮಾರ್‌ರೊಂದಿಗೆ ಚರ್ಚಿಸಿ ನವಯುಗ ನಿರ್ಮಾಣ ಕಂಪೆನಿ ಮುಖ್ಯಸ್ಥರೊಂದಿಗೂ ಸಚಿವರ ಸಮ್ಮುಖದಲ್ಲಿ ಮಾತನಾಡಿ ಪಡುಬಿದ್ರಿಯ ಹೋರಾಟಕ್ಕೆ ಜಯ ಲಭಿಸುವಂತೆ ಪ್ರಯತ್ನಿಸುವುದಾಗಿ ಹೇಳಿದರು.

ಜಯಪ್ರಕಾಶ್‌ ಹೆಗ್ಡೆಗೂ ಮನವಿ: ನವೀನ್‌ಚಂದ್ರ ಶೆಟ್ಟಿ

ಪಡುಬಿದ್ರಿಯ ನಾಗರಿಕ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ತಾವು ಈಗಾಗಲೇ ಮಾಜಿ ಸಂಸದ ಜಯ ಪ್ರಕಾಶ್‌ ಹೆಗ್ಡೆ ಅವರಲ್ಲೂ ಈ ವಿಷಯವಾಗಿ ಚರ್ಚಿಸಿ ದ್ದೇನೆ. ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಹೇಳಿದರು. ಜಿಲ್ಲಾಧಿಕಾರಿ ಸೌಜನ್ಯಕ್ಕಾದರೂ ಪ್ರತಿಭಟನಕಾರರನ್ನು ಭೇಟಿಯಾಗಬೇಕಿತ್ತು ಎಂದರು.

ಅನ್ಸಾರ್‌ ಅಹಮ್ಮದ್‌ರೊಂದಿಗೆ ವೇದಿಕೆಯ ಪದಾಧಿಕಾರಿಗಳಾದ ಸೈಯ್ಯದ್‌ ನಿಝಾಮ್‌, ಆಸೀಫ್‌ ಆಪತ್ಬಾಂಧವ ಸಹಿತ ಪಡುಬಿದ್ರಿ ಘಟಕಾಧ್ಯಕ್ಷರು ಮೈಗೆ ಮಸಿ ಬಳಿದುಕೊಂಡು ಸಂಜೆಯವರೆಗೆ ಧರಣಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next