ಮುಂಬಯಿ: ನವ ತರುಣ ಮಿತ್ರ ಮಂಡಳ ಹಾಗೂ ಭ್ರಾಮರಿ ಫ್ರೆಂಡ್ಸ್ ಮೀರಾ-ಭಾಯಂದರ್ ಇದರ 13ನೇ ವಾರ್ಷಿಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಧಕರಿಗೆ ಸಮ್ಮಾನ ಸಮಾರಂಭವು ಜು. 29 ರಂದು ಅಪರಾಹ್ನ ಮೀರಾರೋಡ್ ಪೂರ್ವದ ಪೂನಂ ಸಾಗರ್ ಸಮೀಪದ ಮೀರಾಲಾನ್ ಹಾಲ್‌ನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಇವರು ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಭಾವನೆಯಿಂದ ಅಸಹಾಯಕರಿಗೆ ಆಶ್ರಯ ನೀಡಿ, ರಕ್ತದಾನ, ವೃದ್ಧಾಶ್ರಮ, ಅನಾಥಾಶ್ರಮ, ಅರ್ಹರಿಗೆ ಆರ್ಥಿಕ ನೆರವು ನೀಡುತ್ತಿರುವ ಈ ಮಂಡಳದ ಕಾರ್ಯವೈಖರಿ ಮನುಷ್ಯತ್ವವನ್ನು ಪ್ರತಿಫಲಿಸುತ್ತದೆ. ಕಲಾವಿದರಿಗೆ, ಪ್ರತಿಭಾವಂತರಿಗೆ, ಸಮಾಜ ಸೇವಕರಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸುವ ತರುಣ ಮಿತ್ರ ಮಂಡಳದ ಮತ್ತು ಭಾÅಮರಿ ಫ್ರೆಂಡ್ಸ್‌ನ ಅಧ್ಯಕ್ಷ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿಗುತ್ತು, ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ತೆಳ್ಳಾರ್, ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ ಇವರ ನೇತೃತ್ವದ ಸದಸ್ಯರ ಸಾಧನೆ ಮೆಚ್ಚುವಂಥದ್ದಾಗಿದೆ. ನಾಡು-ನುಡಿಯ ಕಲಾಸೇವೆ ಈ ಸಂಘಟನೆಯಿಂದ ಪುನಃಶ್ಚೇತನ ಹೊಂದಲಿ ಎಂದು ಹಾರೈಸಿದರು.
ಮೀರಾಗಾಂವ್ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್ ಅವರು ಆಶೀರ್ವಚನ ನೀಡಿ, ಸಾಮಾಜಿಕ ಶ್ರೇಯೋಭಿವೃದ್ಧಿಗೆ ದುಡಿಯುವ ಈ ಸಂಸ್ಥೆ ಉಜ್ವಲ ಭವಿಷ್ಯದತ್ತ ಮುನ್ನಡೆಯಲಿ. ನವತರುಣ ಮಿತ್ರ ಮಂಡಳಿಯ ಯುವ ಶಕ್ತಿ ಹಾಗೂ ಭಾÅಮರಿ ಫ್ರೆಂಡ್ಸ್‌ನ ಮಧುರವಾದ ಸಂಘಟನೆಯಿಂದ ಸಮಾಜಮುಖೀ ಚಿಂತನೆಗಳು ಬಲಾಡ್ಯಗೊಳ್ಳಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ರಂಗ ಕಲಾವಿ ದರುಗಳಾದ ಶುಭಾಂಗಿ ಶೆಟ್ಟಿ ಅವರಿಗೆ ಕಲಾಶ್ರೀ, ಸುನೀತಾ ಎ. ಸುವರ್ಣ ಅವರಿಗೆ ಅಭಿನಯ ವಿಶಾರದೆ ಹಾಗೂ ಚನಲಚಿತ್ರ ನಟಿಯರುಗಳಾದ ರೇಷ್ಮಾ ಶೆಟ್ಟಿ ಅವರಿಗೆ ವರನಟಿ, ಶಿಲ್ಪಾ ಎಲ್. ಪೂಜಾರಿ ಅವರಿಗೆ ಅಭಿನಯ ಶಿಲ್ಪ ಬಿರುದು ಪ್ರದಾನಿಸಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೀರಾ- ಭಾಯಂದರ್ ಮಹಾನಗರ ಪಾಲಿಕೆಯ ಮೇಯರ್ ಡಿಂಪಲ್ ಮೆಹ್ತಾ, ರಾಜಕೀಯ ನೇತಾರ ಅವಿನಾಶ್ ಗುರವ್, ಕಲಾಪೋಷಕ, ಸಂಘಟಕ ಸುರೇಶ್ ಶೆಟ್ಟಿ ಗಂಧರ್ವ, ಅರುಣೋದಯ ಎಸ್. ರೈ, ರವಿ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ಅಜಿತ್ ಶೆಟ್ಟಿ ಬೆಳ್ಮಣ್, ಶಿವರಾಮ ಶೆಟ್ಟಿ, ಶಾಲಿನಿ ಶೆಟ್ಟಿ, ಲೀಲಾ ಡಿ. ಪೂಜಾರಿ, ಉದಯ ಶೆಟ್ಟಿ ಪೆಲತ್ತೂರು, ಪ್ರತಿಭಾ ಶೆಟ್ಟಿ, ಸುಜಾತಾ ಶೆಟ್ಟಿ, ಮಂಡಳದ ಅಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ತೆಳ್ಳಾರ್, ಗೌರವ ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಮಹಾ
ಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ ಸುರತ್ಕಲ್ ಇದರ ಕಲಾವಿದರುಗಳಿಂದ ಸುದರ್ಶನ ವಿಜಯ-ಭಾರ್ಗವ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಚಿತ್ರ-ವರದಿ : ರಮೇಶ್ ಅಮೀನ್