Advertisement

ನಾಳೆಯಿಂದ ನವರಾತ್ರಿ ಉತ್ಸವ

01:01 PM Sep 19, 2017 | |

ಹುಬ್ಬಳ್ಳಿ: ಶರನ್ನವರಾತ್ರಿ ನಿಮಿತ್ತ ರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ ಸೆ.20ರಿಂದ 30ರ ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು, ಆಶ್ರಮದ ವತಿಯಿಂದ 11ನೇ ವರ್ಷದ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ.

Advertisement

ಸೆ.20ರಂದು ಮಧ್ಯಾಹ್ನ 4ರಿಂದ ಮರಾಠಾ ಗಲ್ಲಿಯಿಂದ ಕಲ್ಯಾಣನಗರದ ರಂಗಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ಸೆ.21ರಂದು ಬೆಳಗ್ಗೆ 9ಕ್ಕೆ ದುರ್ಗಾ ಪ್ರತಿಷ್ಠಾಪನೆ ನಡೆಯಲಿದ್ದು, ಬೆಳಗ್ಗೆ 10:30ಕ್ಕೆ ಗಣಹೋಮ, ನವಗ್ರಹ ಹೋಮ, ದುರ್ಗಾ ಹೋಮ ನಡೆಯಲಿದೆ.

ಸಂಜೆ 6:30ಕ್ಕೆ ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್‌ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುವರು ಎಂದು ತಿಳಿಸಿದರು. 22ರಂದು ಬೆಳಗ್ಗೆ 10ಕ್ಕೆ ಧನ್ವಂತರಿ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ವಿದುಷಿ ವೀಣಾ ಬಡಿಗೇರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು.

ಸಂಜೆ 6:30ಕ್ಕೆ ಬೇಂದ್ರೆ ಭವನದ ಅಧ್ಯಕ್ಷ ಡಾ| ಶಾಮಸುಂದರ ಬಿದರಕುಂದಿ ವಿಶೇಷ ಪ್ರವಚನ ನೀಡುವರು. 23ರಂದು ಬೆಳಗ್ಗೆ 10ಕ್ಕೆ ಲಘುರುದ್ರ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ವಿಜಯಕುಮಾರ ಪಾಟೀಲ ಅವರಿಂದ ಭಕ್ತಿ ಸಂಗೀತ ಜರುಗಲಿದೆ. ಸಂಜೆ 6:30ಕ್ಕೆ ವೀಣಾ ಬನ್ನಂಜೆ ಪ್ರವಚನ ನೀಡುವರು.

ಸೆ.24ರಂದು ಬೆಳಗ್ಗೆ 10ಕ್ಕೆ ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಲಿದೆ. ಬೆಳಗ್ಗೆ 11:30ಕ್ಕೆ ಆಶ್ರಮದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. 25ರಂದು ಬೆಳಗ್ಗೆ 10ಕ್ಕೆ ಶ್ರೀ ಲಲಿತಾ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ಧನುರ್ವಿದ್ಯೆ ಪ್ರದರ್ಶನ ನಡೆಯಲಿದೆ.

Advertisement

ಸಂಜೆ 6:30ಕ್ಕೆ ಶ್ರೀ ರಾಮದರ್ಶನ ಯಕ್ಷಗಾನ ಪ್ರಸಂಗ ನಡೆಯುವುದು. 26ರಂದು ಬೆಳಗ್ಗೆ 10ಕ್ಕೆ ವಿದ್ಯಾರ್ಥಿ ಹೋಮ ಆಯೋಜಿಸಲಾಗಿದೆ. ಸಂಜೆ 6:30ಕ್ಕೆ “ವಿಶ್ವಶಂಕರಾಕ್ಷರ ಯಕ್ಷ ನೃತ್ಯ ರೂಪಕ’ ಯಕ್ಷಗಾನ ಪ್ರಸಂಗ ಜರುಗುವುದು. 27ರಂದು ಬೆಳಗ್ಗೆ 10ಕ್ಕೆ ಸುಬ್ರಮಣ್ಯ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ಜಾನಪದ ಉತ್ಸವ ನಡೆಯಲಿದೆ.

ಸಂಜೆ 6:30ಕ್ಕೆ ಶಶಿಕಲಾ ದಾನಿ ಹಾಗೂ ಸುಜ್ಞಾನ ದಾನಿ ಅವರಿಂದ ಜಲತರಂಗ ಹಾಗೂ ಗಾಯನ ಜುಗಲ್‌ಬಂದಿ ನಡೆಯವುದು ಎಂದರು. 28ರಂದು ಬೆಳಗ್ಗೆ 10ಕ್ಕೆ ದುರ್ಗಾ ಹೋಮ ನಡೆಯಲಿದೆ. ಬೆಳಗ್ಗೆ 11:30ಕ್ಕೆ ಶ್ರೀನಿಧಿ ಕಾಮತ ಅವರಿಂದ ಭಕ್ತಿ ಸಂಗೀತ ಜರುಗಲಿದೆ. ಸಂಜೆ 6:30ಕ್ಕೆ ಇಮಾಮ್‌ಸಾಬ್‌ ವಲ್ಲೆಪ್ಪನವರ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ ಕಾರ್ಯಕ್ರಮವಿದೆ.

ಸೆ.29ರಂದು ಬೆಳಗ್ಗೆ 10ಕ್ಕೆ ವಿಷ್ಣು ಸಹಸ್ರನಾಮ ಹೋಮವಿದ್ದು, ಬೆಳಗ್ಗೆ 11:15ಕ್ಕೆ ಪೂಜಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ವಿದ್ಯಾ ವೈದ್ಯ ಅವರಿಂದ ವೀಣಾವಾದನ ನಡೆಯಲಿದೆ. ಸಂಜೆ 6ಕ್ಕೆ ಭರತನಾಟ್ಯ ಪ್ರದರ್ಶನ, ಸಂಜೆ 7ಕ್ಕೆ “ಜಗತ್‌ ಜನನಿ ನೃತ್ಯ ರೂಪಕ’ ಪ್ರದರ್ಶನಗೊಳ್ಳಲಿದೆ.

ಸೆ.30ರಂದು ಬೆಳಗ್ಗೆ 10ಕ್ಕೆ ಗಾಯತ್ರಿ ಹೋಮ ನಡೆಯಲಿದ್ದು, ಸಂಜೆ 5:30ಕ್ಕೆ ದುರ್ಗಾದೇವಿ ಮೂರ್ತಿ ಮೆರವಣಿಗೆ ಹಾಗೂ ಡೊಳ್ಳು ಕುಣಿತದೊಂದಿಗೆ ಉಣಕಲ್ಲ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದರು. ಆಶ್ರಮದ ಟ್ರಸ್ಟಿ ಎಂ.ಎ. ಸುಬ್ರಮಣ್ಯ ಹಾಗೂ ವಿನಯ ಮಹಾರಾಜ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next