Advertisement
ನ್ಯೂಜಿಲ್ಯಾಂಡ್ದುರ್ಗಾಪೂಜೆ ಮಾಡುವ ಮೂಲಕ ಇಲ್ಲಿನ ಅನಿವಾಸಿ ಭಾರತೀಯರು 9 ದಿನಗಳ ಕಾಲ ಶ್ರದ್ಧಾ-ಭಕ್ತಿಯಿಂದ ನವರಾತ್ರಿಯನ್ನು ಆಚರಿಸುತ್ತಾರೆ. ಅಕ್‌ಲ್ಯಾಂಡ್ ನಗರದ ಭಾರತೀಯ ಮಂದಿರ, ಮಹಾತ್ಮ ಗಾಂಧಿ ಸೆಂಟರ್, ಶಿರಿಡಿ ಸಾಯಿ ಮಂದಿರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿಜೃಂಭಣೆಯಿಂದ ಹಬ್ಬವು ನಡೆಯುತ್ತದೆ. ಇಡೀ ಒಂಬತ್ತು ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ.
ಪ್ರಾಚೀನ ಕಾಲದಿಂದಲೂ ಥೈಲ್ಯಾಂಡ್ ಜನರ ಮೇಲೆ ಹಿಂದೂ ಧರ್ಮ ಪ್ರಭಾವ ಬೀರಿರುವುದರಿಂದ ದಕ್ಷಿಣ ಭಾರತದಿಂದ ವಲಸೆ ಬಂದ ಭಾರತೀಯರಲ್ಲಿ ಥೈಲ್ಯಾಂಡ್ ಜನರು ದೇವಿ ಪಾರ್ವತಿ ರೂಪವನ್ನು ಕಂಡಿದ್ದರು. ರಾಜ ರಾಮಾ ವಿ ( 1868-1910) ಆಳ್ವಿಕೆಯ ಸಂದರ್ಭದಲ್ಲಿ ಬ್ಯಾಂಕಾಕ್‌ನ ಸಿಲೋಮ್ ರಸ್ತೆಯಲ್ಲಿ ಕಟ್ಟಿಸಿದ್ದ ಶ್ರೀ ಮಹಾ ಮರಿಯಮ್ಮನ್ ದೇವಸ್ಥಾನ ಸೇರಿದಂತೆ ವಿವಿಧ ಹಿಂದೂ ದೇವಸ್ಥಾಗಳಲ್ಲಿ ಥೈ ಇಂಡಿಯನ್, ಥೈ ಚೈನೀಸ್ ಸಮುದಾಯದವರಿಂದ ನವರಾತ್ರಿಯನ್ನು ನಂಬಿಕೆ, ಭಕ್ತಿ ರೂಪಕವಾಗಿ ಆಚರಿಸಲಾಗುತ್ತದೆ.
Related Articles
ಇಲ್ಲಿ 1920ರಿಂದಲೂ ನವರಾತ್ರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಒಂಬತ್ತು ದಿನಗಳ ಕಾಲ ಹೆಚ್ಚು ಜನರು ಸೇರುವ ಮೂಲಕ ದುರ್ಗಾ, ಲಕ್ಷ್ಮೀ ಮತ್ತು ಸರಸ್ವತಿ ದೇವಿಗಳಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ರಥೋತ್ಸವದ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭಜನೆ, ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ.
Advertisement
ನೈಜೀರಿಯಾಇಲ್ಲಿ 200 ಅಧಿಕ ಬಂಗಾಲಿ ಕುಟುಂಬದವರು ನೆಲೆಸಿರುವ ಕಾರಣ 1981ರಿಂದ ನವರಾತ್ರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. 2023ರಲ್ಲಿ ಕಾಳಿ ದೇಗುಲವನ್ನು ನಿರ್ಮಿಸಿ ದಿನನಿತ್ಯವೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
ಅಮೆರಿಕದಲ್ಲಿ 1970ರಿಂದ ದುರ್ಗಾ ಪೂಜೆಗಳು ಆರಂಭಗೊಂಡಿತು. ಅಮೆರಿಕದಲ್ಲಿ ನವರಾತ್ರಿಯನ್ನು ಹೆಚ್ಚಾಗಿ ಭಾರತೀಯ ವಲಸಿಗರು ಆಚರಿಸುತ್ತಾರೆ. ಅನೇಕ ಸಮುದಾಯ ಕೇಂದ್ರಗಳು ಮತ್ತು ದೇವಾಲಯಗಳು ಗರ್ಬಾ ಮತ್ತು ದಾಂಡಿಯಾ ರಾಸ್ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅವರ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವ ಜನರನ್ನು ಒಟ್ಟುಗೂಡಿಸಿ ಈ ಹಬ್ಬವನ್ನು ಆಚರಿಸುತ್ತಾರೆ. ಇಂಗ್ಲೆಂಡ್
ಇಂಗ್ಲೆಂಡಿನಲ್ಲಿ ಲಂಡನ್, ಲೀಸೆಸ್ಟರ್ ಮತ್ತು ಬರ್ಮಿಂಗ್‌ಹ್ಯಾಮ್ ನಗರಗಳಲ್ಲಿ ನವರಾತ್ರಿಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ವಿವಿಧ ಸಾಂಸ್ಕೃತಿಕ ಗುಂಪುಗಳು ಕಾರ್ಯಕ್ರಮಗಳು ಮತ್ತು ಗರ್ಬಾ ಪಾರ್ಟಿಗಳನ್ನು ಆಯೋಜಿಸುತ್ತಾರೆ. ಈ ಹಬ್ಬಗಳು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ.
ನೇಪಾಲದಲ್ಲಿ ನವರಾತ್ರಿಯನ್ನು ದಶೈನ್ ಎಂದು ಕರೆಯುತ್ತಾರೆ. ಇದು ವರ್ಷದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದ್ದು, 15 ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಜನರು ದುರ್ಗಾದೇವಿಯನ್ನು ವಿವಿಧ ರೂಪದಲ್ಲಿ ಪೂಜಿಸುತ್ತಾರೆ. ಇಲ್ಲಿನ ವಿಶೇಷವೆಂದರೆ “ಜಮರ’ ಆಚರಣೆ. ಇದರ ಭಾಗವಾಗಿ ಬಾರ್ಲಿ ಬೀಜವನ್ನು ಮಡಿಕೆಯಲ್ಲಿ ಬಿತ್ತಲಾಗುತ್ತದೆ. ಮೊಳಕೆಯೊಡೆದ ಈ ಬೀಜಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಅಕ್ಕಪಕ್ಕದವರೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ 1974ರಲ್ಲಿ, ನ್ಯೂ ಸೌತ್ ವೇಲ್ಸನ್ ಭಾರತೀಯ ಸಮುದಾಯದ ಜನರು ಒಟ್ಟಾಗಿ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಸಾಂಸ್ಕೃತಿಕ ತಂಡಗಳಿಂದ ದಾಂಡಿಯಾ ರಾಸ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸ್ಥಳಗಳನ್ನು ವರ್ಣರಂಜಿತವಾಗಿ ಅಲಂಕರಿಸಲಾಗುತ್ತದೆ. ಉತ್ಸಾಹಭರಿತ ಸಂಗೀತಗಳು ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತವೆ.
ಬಾಂಗ್ಲಾದ ಢಾಕಾದಲ್ಲಿರುವ ಢಾಕೇಶ್ವರ ದೇವಸ್ಥಾನದಲ್ಲಿ ನವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ದುರ್ಗಾದೇವಿ ದೇವಸ್ಥಾನವು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಬಾಂಗ್ಲಾದಲ್ಲಿ ನೆಲೆಸಿರುವ ಬಹುಪಾಲು ಬಂಗಾಲಿಯರು ಈ ಹಬ್ಬವನ್ನು ಆಚರಿಸುತ್ತಾರೆ. (ಸಂಗ್ರಹ ಮಾಹಿತಿ)