Advertisement

ನವಲಿ ಜಲಾಶಯ ನಿರ್ಮಾಣಕ್ಕೆ ಮರುಜೀವ!

04:16 PM Aug 15, 2021 | Team Udayavani |

ಮಸ್ಕಿ: ರಾಯಚೂರು, ಕೊಪ್ಪಳ, ಬಳ್ಳಾರಿ ಮೂರುಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದಹೂಳಿಗೆ ಪರ್ಯಾಯವಾಗಿ ನವಲಿ ಬಳಿ ನಿರ್ಮಿಸಲುಉದ್ದೇಶಿಸಿದ ಸಮಾನಾಂತರ ಜಲಾಶಯಕ್ಕೆ ಮರುಜೀವಬಂದಿದೆ!.ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದಕಚೇರಿಯಲ್ಲಿ ಶುಕ್ರವಾರ ನೀರಾವರಿ ಇಲಾಖೆಅ ಧಿಕಾರಿಗಳು ಹಾಗೂ ತಜ್ಞರ ಸಭೆ ನಡೆದಿದ್ದು,ಕನಕಗಿರಿ, ಗಂಗಾವತಿ ಕ್ಷೇತ್ರದ ಶಾಸಕರು ಸಭೆಯಲ್ಲಿಭಾಗಿಯಾಗಿದ್ದರು.

Advertisement

ಸಮಾನಾಂತರ ಜಲಾಶಯಅಂತಾರಾಜ್ಯ ಯೋಜನೆಯಾಗಿದ್ದರಿಂದ ನೆರೆಯತೆಲಂಗಾಣ, ಆಂಧ್ರದ ಒಪ್ಪಿಗೆ ಪಡೆಯಬೇಕಿದ್ದುಇದಕ್ಕೂ ಮೊದಲು ತುಂಗಭದ್ರಾ ಮಂಡಳಿಅನುಮೋದನೆ ಪಡೆಯಬೇಕಿದೆ. ಹೀಗಾಗಿಯೋಜನೆ ಜಾರಿ ವೇಳೆ ಎದುರಾಗುವ ಅಡ್ಡಿ-ಆತಂಕಹಾಗೂ ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆನಡೆಯಿತು.

ಕೆಎನ್‌ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕಮಲ್ಲಿಕಾರ್ಜುನ ಗುಂಗೆ, ತುಂಗಭದ್ರಾ ವಲಯದಮುಖ್ಯ ಅ ಧೀಕ್ಷಕ ಕೃಷ್ಣಾ ಚವ್ಹಾಣ ಹಾಗೂ ಎ ಆ್ಯಂಡ್‌ಟೆಕ್ನಾಲಜಿ ಏಜೆನ್ಸಿಯ ತಜ್ಞರು ಸಮಾನಾಂತರ ಜಲಾಶಯಅನುಷ್ಠಾನಕ್ಕೆ ಬೇಕಾದ ಪೂರ್ವ ತಯಾರಿಗಳ ಕುರಿತುಸಮಗ್ರ ಚರ್ಚೆ ನಡೆಸಿದರು.

ಏನಿದು ಯೋಜನೆ?: 133 ಟಿಎಂಸಿ ಸಾಮರ್ಥ್ಯದತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣಹೆಚ್ಚಾಗುತ್ತಿದೆ. ಈಗಾಗಲೇ ಸುಮಾರು 33 ಟಿಎಂಸಿಗೂಅ ಧಿಕ ಪ್ರಮಾಣದಲ್ಲಿ ಹೂಳು ತುಂಬಿದೆ ಎಂದುನೀರಾವರಿ ಇಲಾಖೆಯ ಹಲವು ಸರ್ವೇಗಳಿಂದಬಯಲಾಗಿದೆ. ಈ ಹೂಳು ತೆರವಿಗೆ ಬೇಡಿಕೆ ಇದ್ದು,ಅಪಾರ ಪ್ರಮಾಣದ ಹೂಳು ತೆರವುಗೊಳಿಸುವುದುಅಸಾಧ್ಯ. ಇದು ಕಾರ್ಯಸಾಧುವಲ್ಲದ ಕಾರಣ ಹೂಳುತೆರವು ಕೈ ಬಿಟ್ಟು ಸಮಾನಾಂತರ ಜಲಾಶಯನಿರ್ಮಾಣದ ಪ್ರಸ್ತಾವನೆ ಇದ್ದು, ಇದಕ್ಕಾಗಿ ಕೊಪ್ಪಳಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರದಮುಂದೆ ಪ್ರಸ್ತಾವನೆ ಇದೆ.

ಈ ಸಮಾನಾಂತರ ಜಲಾಶಯದ ಮೂಲಕರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ನೆರೆಯಆಂಧ್ರ ತೆಲಂಗಾಣ ರಾಜ್ಯದ ನೀರಾವರಿ ವಂಚಿತಪ್ರದೇಶಗಳಿಗೆ ನೀರು ಒದಗಿಸುವುದು ಯೋಜನೆಉದ್ದೇಶ. ಇದಕ್ಕಾಗಿ ರೂಟ್ಸ್‌, ಎ ಆ್ಯಂಡ್‌ ಕಂಪನಿ ಸೇರಿಹಲವು ಖಾಸಗಿ ಏಜೆನ್ಸಿಗಳು ಸರ್ವೇ ನಡೆಸಿ ಪ್ರಾಥಮಿಕವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ ವರದಿಪ್ರಕಾರ ಈ ಯೋಜನೆಗೆ 12 ಸಾವಿರ ಕೋಟಿ ರೂ.ಅಗತ್ಯವಿದೆ ಎನ್ನುವ ಅಂಶ ಪ್ರಸ್ತಾಪಿಸಲಾಗಿದ್ದು,ಲಕ್ಷಾಂತರ ಜಮೀನು ಭೂ ಸ್ವಾ ಧೀನ ಪ್ರಕ್ರಿಯೆನಡೆಯಬೇಕೆಂದು ವರದಿ ಸಲ್ಲಿಸಿವೆ.

Advertisement

ಸರ್ಕಾರ ಇದಕ್ಕೆಅಸ್ತು ಎಂದಿದ್ದು ಯೋಜನೆಯ ಸಂಪೂರ್ಣ ಡಿಪಿಆರ್‌ತಯಾರಿಕೆಗೆ ಸೂಚನೆ ನೀಡಿದೆ. ಪ್ರಕಾರ ಎ ಆ್ಯಂಡ್‌ಟೆಕ್ನಾಲಜಿ ಕಂಪನಿಗೆ ಸರ್ವೇ ಕಾರ್ಯದ ಉಸ್ತುವಾರಿವಹಿಸಲಾಗಿದೆ. ಈಗಾಗಲೇ ಎರಡೂ¾ರು ಸುತ್ತಿನ ಸರ್ವೇಕಾರ್ಯವೂ ಪೂರ್ಣವಾಗಿದ್ದು, ಯೋಜನೆ ನೀಲನಕ್ಷೆನೀರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ.ಎದುರಾಗುವ ಸವಾಲು: ಯೋಜನೆ ಕುರಿತಾಗಿಯೇಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಮಾನಾಂತರಜಲಾಶಯ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಸ್ವಾಧಿಧೀನ ಪ್ರಕ್ರಿಯೆ, ಮುಳುಗಡೆಯಾಗುವ ಪ್ರದೇಶ,ನೀರಿನ ಹಂಚಿಕೆ, ಪ್ರತ್ಯೇಕ ಕಾಲುವೆಗಳ ನಿರ್ಮಾಣದನಕಾಶೆ ಸೇರಿ ಇತರೆ ಕಾರ್ಯಗಳಿಗೆ ಎದುರಾಗುವ ಅಡ್ಡಿಆತಂಕ, ತಜ್ಞರು ಎತ್ತುವ ಪ್ರಶ್ನೆಗಳಿಗೆ ಬೇಕಾದ ಸಮಗ್ರಉತ್ತರ ಒದಗಿಸುವುದು, ಟಿಬಿ ಬೋರ್ಡ್‌ ಹಾಗೂಅಂತಾರಾಜ್ಯಗಳನ್ನು ಈ ಯೋಜನೆಗೆ ಒಪ್ಪಿಗೆ ಪಡೆಯಲುಬೇಕಾದ ಪೂರ್ವ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆನಡೆದವು. ಕೆಲವೇ ದಿನಗಳಲ್ಲಿ ಈ ಯೋಜನೆ ಒಪ್ಪಿಗೆಪಡೆಯಲು ಅಂತಾರಾಜ್ಯ ಸಭೆ ನಡೆಯಲಿದ್ದು, ಇದಕ್ಕೆಸಂಬಂಧಿ ಸಿದ ಎಲ್ಲ ವರದಿ ತಯಾರಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next