ಇವರು ನಿಟ್ಟೆ ರುಕ್ಮಿಣಿ ಅಡ್ಯಂತಾಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2ನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಉಡುಪಿ ಪೂರ್ಣಪ್ರಜ್ಞ 1 ಕಾಲೇಜಿನಲ್ಲಿ ಮೂರನೇ ವರ್ಷದ ನೇವಿ ಕೆಡೆಟ್ ಆಗಿದ್ದಾರೆ.
17 ಡೈರೆಕ್ಟರೇಟ್‌ಗಳಿಂದ ಆಗಮಿಸಿದ ಸ್ಪರ್ಧಾಳುಗಳ ಮಧ್ಯೆ ಕರ್ನಾಟಕ-ಗೋವಾ ಡೈರೆಕ್ಟರೇಟ್‌ನ ಮೂವರು ಎಸ್.ಡಬ್ಲ್ಯೂ ಕೆಡೆಟ್ಸ್‌ಗಳ ತಂಡವನ್ನು ನಿಸರ್ಗಾ ಅವರು ಮುನ್ನಡೆಸಿದ್ದಾರೆ. ಅವರ ತಂಡ ಶಿಪ್ ಮಾಡೆಲಿಂಗ್ ಇನ್‌ಸ್ಟ್ರಕ್ಟರ್ ಪರಶುರಾಮ್ ಕೆ. ಅವರ ಮಾರ್ಗದರ್ಶನದಲ್ಲಿ ಐಎನ್‌ಎಸ್ ತಬರ್ ನೌಕೆಯ ಮಾದರಿಯನ್ನು ತಯಾರಿಸಿತ್ತು. ಈ ಮಾದರಿ ಕುರಿತ ವಿವರಗಳನ್ನು ಪ್ರದರ್ಶಿನಿಯಲ್ಲಿ ಚೀಫ್ ಆಫ್ ನೇವಲ್ ಸ್ಟಫ್ ಅಡ್ಮಿರಲ್ ಸುನಿಲ್ ಲಾಂಬ ಅವರಿಗೆ ನಿಸರ್ಗಾ ಅವರು ನೀಡಿದ್ದು, ತಂಡಕ್ಕೆ 4ನೇ ಸ್ಥಾನ ಪ್ರಾಪ್ತವಾಗಿದೆ. ಇದರೊಂದಿಗೆ ವಿಜೇತರು ರಾಷ್ಟ್ರಪತಿ, ಪ್ರಧಾನಿ, ರಕ್ಷಣಾಮಂತ್ರಿ ಅವರೊಂದಿಗೆ ಚಹಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಇದರೊಂದಿಗೆ ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ವಿಜೇತರನ್ನು ಸಮ್ಮಾನಿಸಿದ್ದಾರೆ. ನಿಸರ್ಗಾ ಅವರು ಕಟಪಾಡಿ ಕಲ್ಲಾಪು ನಿವಾಸಿ ಭಾರತಿ ಅವರ ಪುತ್ರಿಯಾಗಿದ್ದಾರೆ.
Advertisement
ಕಠಿನ ತರಬೇತಿ ಬಳಿಕ ನಿಸರ್ಗಾ 52 ತಾಸಿನಲ್ಲಿ ಐ.ಎನ್.ಎಸ್. ತಬರ್ ನೌಕಾ ಮಾದರಿಯನ್ನು ಸಿದ್ಧಪಡಿಸಿದ್ದಾಳೆ. ತಂಡದ ನಾಯಕಿಯಾಗಿ ಆಕೆ ಯಶಸ್ಸು ಸಾಧಿಸಿದ್ದಾಳೆ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಎನ್.ಸಿ.ಸಿ. ಕೋಟಾದಡಿ ಮೀಸಲಾತಿಗೂ ಅರ್ಹತೆ ಪಡೆದಿದ್ದಾಳೆ. – ಪರಶುರಾಮ್ ಕೆ.,
ಶಿಪ್ ಮಾಡೆಲಿಂಗ್ ಇನ್‌ಸ್ಟ್ರಕ್ಟರ್.