Advertisement

ದುರಾಸೆಗೆ ನಿಸರ್ಗವೇ ಕಲಿಸುತ್ತೆ ಪಾಠ: ಪಾಟೀಲ

12:46 PM Jan 24, 2022 | Team Udayavani |

ಮಾದನಹಿಪ್ಪರಗಿ: ಮಾನವನ ದುರಾಸೆಗೆ ಅರಣ್ಯ ನಾಶವಾಗಿದೆ. ನಿಸರ್ಗ ಸಮತೋಲದಿಂದ ಇದ್ದರೇ ಮಾತ್ರ ಬಿಸಿಲು, ಮಳೆ, ಚಳಿ ನಿಗದಿತ ಸಮಯಕ್ಕೆ ಬರುತ್ತವೆ, ಹೋಗುತ್ತವೆ. ಆದರೆ ಮನುಷ್ಯ ಸ್ವಾರ್ಥಕ್ಕಾಗಿ ಭೂಮಿಯ ಒಡಲನ್ನು ಬರಿದು ಮಾಡಿದ್ದರಿಂದ ವಾತಾವರಣದಲ್ಲಿ ಏರುಪೇರಾಗಿ ಮಾನವನಿಗೆ ಅನೇಕ ಕಾಯಿಲೆಗಳು ಬರುತ್ತಿವೆ. ನಿಸರ್ಗ ನಮ್ಮ ಬೇಡಿಕೆ ಪೂರೈಸುತ್ತದೆಯೇ ವಿನಃ ದುರಾಸೆಯಲ್ಲ ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

Advertisement

ಸಮೀಪದ ಖೇಡಉಮ್ಮರಗಾ ಗ್ರಾಮದ ಪರಿಸರ ಸಂರಕ್ಷಣಾ ಅಭಿಯಾನದ ತಂಡವನ್ನು ಭೇಟಿ ಮಾಡಿ, ಪರಿಸರ ಉಳಿಸಲು ಹೋರಾಡುತ್ತಿರವ ತಂಡದ ನಾಯಕ ರೆನಿಸಿಕೊಂಡ ಶಿಕ್ಷಕ ಬಸವರಾಜ ಸನ್ಮಾನಿಸಿ ಮಾತನಾಡಿ, ನಿಮ್ಮ ಪರಿಸರ ಕಾಳಜಿಗೆ ನಾವು ಕೈಜೋಡಿಸುತ್ತೇವೆ. ರಾಜಕೀಯ ಅಧಿಕಾರ ಬರುತ್ತದೆ, ಹೋಗುತ್ತದೆ. ಅದು ಮುಖ್ಯವಲ್ಲ. ನಮ್ಮ ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಬಿಟ್ಟು ಹೋಗೋಣ ಎಂದರು.

ಸನ್ಮಾನ ಸೀರಿಸಿ ಮಾತನಾಡಿದ ಶಿಕ್ಷಕ ಬಸವರಾಜ, ಗ್ರಾಮದ ಪ್ರಾಥಮಿಕ ಶಾಲೆ, ಪದವಿ ವಿದ್ಯಾರ್ಥಿಗಳು ಹಾಗೂ ಯುವಕರ ಸಹಕಾರದಿಂದ ತಂಡ ಕಟ್ಟಿ ತಾಲೂಕಿನ ಜಳಕಿ ಗ್ರಾಮದಲ್ಲಿ ಒಂದು ಸಾವಿರ ಸಸಿಗಳನ್ನು, ದರ್ಗಾಶಿರೂರ ಗ್ರಾಮದ ಶಾಂತಲಿಂಗ ಪಾದಗಟ್ಟೆ, ಮಾದನಹಿಪ್ಪರಗಿ, ಹಡಲಗಿ, ಯಳಸಂಗಿ ಗ್ರಾಮಗಳಲ್ಲಿ ಪರಿಸರ ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖೇಡ ಉಮ್ಮರಗಾ ಗ್ರಾಮದ ಶಾಲೆ ಆವರಣ ಖಾಲಿ ಇರುವ ರಸ್ತ ಪಕ್ಕದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಅಭಿಯಾನ ಮಾಡಿದ್ದೇವೆ ಎಂದು ಹೇಳಿದರು.

ಮಲ್ಲಯ್ಯ ಸ್ವಾಮಿ ಮದಗುಣಕಿ, ವೈಜನಾಥ ಪಾಟೀಲ, ಬಸವರಾಜ ಜಿ. ಪಾಟೀಲ ಚಲಗೇರಾ, ಮುಖ್ಯಶಿಕ್ಷಕ ಗಣಾಚಾರಿ ಮುಂತಾವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next