Advertisement

ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಜಿಲ್ಲಾ ಸಮಿತಿ: ಪೇಜಾವರ ಶ್ರೀ

07:38 AM Dec 09, 2020 | mahesh |

ಉಡುಪಿ: ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಧನ ಸಂಗ್ರಹದ ಜವಾಬ್ದಾರಿಯನ್ನು ಆರೆಸ್ಸೆಸ್‌ ಮತ್ತು ವಿಶ್ವ ಹಿಂದು ಪರಿಷತ್‌ ವಹಿಸಿಕೊಂಡಿದ್ದು ಈ ಕುರಿತು ದೇಶಾದ್ಯಂತ ಜಿಲ್ಲಾವಾರು ಸಮಿತಿ ರಚಿಸಿ ಸಮಾಜದ ಎಲ್ಲ ವರ್ಗಗಳ ಜನರನ್ನು ತಲುಪಲು ತಯಾರಿ ನಡೆಸಲಾಗುತ್ತಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ್ನು ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚೆನ್ನೈಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ಧನಸಂಗ್ರಹ ಮತ್ತು ವಿನಿಯೋಗದಲ್ಲಿ ಶೇ.100 ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದರು.

Advertisement

ರಾಮಾಯಣಕ್ಕೂ ತಮಿಳುನಾಡಿಗೂ ಅವಿನಾಭಾವ ಸಂಬಂಧವಿದೆ. ಧನುಷ್ಕೋಟಿ, ರಾಮಸೇತು ತಮಿಳು ನೆಲದಲ್ಲಿ ಇರುವುದು ರಾಮ ಮತ್ತು ರಾಮಾಯಣದೊಂದಿಗೆ ತಮಿಳಿನ ನಂಟಿಗೆ ಸಾಕ್ಷಿಗಳಾಗಿವೆ. ಕಂಬ ರಾಮಾಯಣದಂತಹ ಸಾಹಿತ್ಯ ಕೃತಿಗಳು, ಭರತನಾಟ್ಯದಂತಹ ಕಲೆ, ಜನಪದೀಯ ಸಂಸ್ಕೃತಿಯಲ್ಲಿಯೂ ರಾಮಾಯಣದ ಹೆಜ್ಜೆ ಗುರುತುಗಳಿವೆ. ತಮಿಳುನಾಡಿನ ಸಮಸ್ತ ಜನತೆ ರಾಮಮಂದಿರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸ್ವಾಮೀಜಿ ಆಶಿಸಿದರು.

ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್‌ ಚೆನ್ನೈಯಲ್ಲಿ ಮಂಗಳವಾರ ಪೇಜಾವರ ಶ್ರೀಗಳಿಂದ ಪ್ರಸಾದವನ್ನು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next