Advertisement

ನೇಷನ್ಸ್‌ ಕಪ್‌ ಚೆಸ್‌: ಚೀನ ಚಾಂಪಿಯನ್‌

12:18 AM May 12, 2020 | Sriram |

ಹೊಸದಿಲ್ಲಿ: ನೇಷನ್ಸ್‌ ಕಪ್‌ ಆನ್‌ಲೈನ್‌ ಚೆಸ್‌ ಕೂಟದಲ್ಲಿ ಅಗ್ರ ಶ್ರೇಯಾಂಕದ ಚೀನ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರವಿವಾರ ತಡರಾತ್ರಿ ನಡೆದ ಸೂಪರ್‌ಫೈನಲ್‌ನಲ್ಲಿ ಚೀನ 2-2ರಿಂದ ಅಮೆರಿಕ ಎದುರು ಡ್ರಾ ಸಾಧಿಸಿತು. ಆದರೆ ರೌಂಡ್‌ ರಾಬಿನ್‌ ಲೀಗ್‌ ಹಂತದ ಅನಂತರ ಅಗ್ರಸ್ಥಾನ ಗಳಿಸಿದ್ದ ಆಧಾರದಲ್ಲಿ ಚೀನ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

Advertisement

ಡ್ರಾ ಗೊಂಡ ಅಂತಿಮ ಹಂತ
ಸೂಪರ್‌ಫೈನಲ್‌ನ ಮೊದಲ ಬೋರ್ಡ್‌ನಲ್ಲಿ ಡಿಂಗ್‌ ಲಾರೆನ್‌ ಅಮೆರಿಕದ ಹಿಕಾರು ನಕಮುರ ಜತೆ 38 ನಡೆಗಳ ಬಳಿಕ ಡ್ರಾ ಮಾಡಿಕೊಂಡರು. ಫ್ಯಾಬಿಯಾನೊ ಕರುವಾನ, ಚೀನದ ವೀ ಯಿ ಅವರನ್ನು ಸೋಲಿಸಿದರೆ ಮೂರನೇ ಬೋರ್ಡ್‌ನಲ್ಲಿ ಚೀನದ ಯು ಯಾಂಗ್ವಿ ಅಮೆರಿಕದ ವೆಸ್ಲೆ ಸೊ ಅವರನ್ನು ಮಣಿಸಿದಾಗ ಸ್ಕೋರ್‌ 1.5-1.5 ರಲ್ಲಿ ಸಮಗೊಂಡಿತು. ನಿರ್ಣಾಯಕ ನಾಲ್ಕನೇ ಬೋರ್ಡ್‌ ನಲ್ಲಿ ಹೌ ಯಿಫಾನ್‌ ಮತ್ತು ಅಮೆರಿಕದ ಐರಿನಾ ಕ್ರುಶ್‌ ನಡುವಣ ಹಣಾಹಣಿ ಡ್ರಾ ಆದ ಕಾರಣ ಹೋರಾಟ ಸಮಬಲದಲ್ಲಿ ಅಂತ್ಯಗೊಂಡಿತು.

ಚೀನ ಡಬಲ್‌ ರೌಂಡ್‌ ರಾಬಿನ್‌ ಲೀಗ್‌ನಲ್ಲಿ ಅಮೆರಿಕದ ವಿರುದ್ಧ ಒಂದು ಪಂದ್ಯ ಸೋತಿದ್ದು ಉಳಿದೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು ಅಗ್ರ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿತ್ತು. ಅಮೆರಿಕ ಎರಡನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿತ್ತು.

5ನೇ ಸ್ಥಾನ ಪಡೆದ ಭಾರತ
ಭಾರತ ಕೊನೆಯ ಎರಡು ಸುತ್ತುಗಳಲ್ಲಿ (9 ಮತ್ತು 10ನೇ) ಚೀನ ಮತ್ತು ರಷ್ಯ ಎದುರು ಸೋಲನುಭವಿಸಿದ ಕಾರಣ ಐದನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next