ಜೈಪುರ : ನಾಗ್ಪುರದಲ್ಲಿ ಅರ್ಧ ಪ್ಯಾಂಟ್ ಧರಿಸಿ ಮಾತನಾಡಿವುದು ರಾಷ್ಟ್ರೀಯತೆಯಲ್ಲ ಎಂದು ಹೇಳುವ ಮೂಲಕ ಕಾಂಗ್ರೇಸ್ ನಾಯಕ ಸಚಿನ್ ಪೈಲಟ್ ಆರ್ ಎಸ್ಎಸ್ ವಿರುದ್ಧ ಪರೋಕ್ಷವಾಗಿ ವಾಗ್ಧಳಿ ನಡೆಸಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ರಾಜಸ್ಥಾನದ ಜೈಪುರದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೇಸ್ ಹಿರಿಯ ನಾಯಕ ಪೈಲಟ್ ಕೇವಲ ಅರ್ಧ ಪ್ಯಾಂಟ್ ಧರಿಸಿಕೊಂಡು ಮಾತನಾಡುವುದು ರಾಷ್ಟ್ರೀಯತೆಯಲ್ಲ ಬದಲಾಗಿ ರೈತರ ಪರವಾದ ಮಾತುಗಳನ್ನು ಆಡುವುದು ರಾಷ್ಟ್ರೀಯತೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪರೋಕ್ಷವಾಗಿ ಹೆಸರಿಸದೆ ವಾಗ್ಧಳಿ ನಡೆಸಿದ್ದಾರೆ.
ಕೇಂದ್ರ ಸರಕಾರ ಕೂಡಲೇ ವಿವಾದಿತ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು, ಕಾಯ್ದೆಯನ್ನು ಹಿಂಪಡೆಯುವುದರಿಂದ ಸರಕಾರಕ್ಕೆ ಯಾವುದೇ ರೀತಿಯಲ್ಲಿ ಹಿನ್ನಡೆಯಾಗುವುದಿಲ್ಲ ಎಂದರು.
ಇದನ್ನೂ ಓದಿ:ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಕೇಸ್: ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಗೆ ಜಾಮೀನು
ಸರಕಾರ ತಂದಿರುವ ಹೊಸ ಕಾಯ್ದೆಯಿಂದ ರೈತರ ಬದುಕು ಕಟ್ಟಲಾಗಿದೆ, ಅವರ ಮುಂದಿನ ಜೀವನ ಹೇಗೆ ಎಂದು ಕಂಗಾಲಾಗಿದ್ದಾರೆ, ಹಾಗಾಗಿ ಕೇಂದ್ರ ಸರಕಾರ ಕೂಡಲೇ ಕಾಯ್ದೆಯನ್ನು ಹಿಂಪಡೆದು ರೈತರ ಬಾಳಿನಲ್ಲಿ ಬೆಳೆಕು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.