ಕಲಬುರಗಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದಲ್ಲಿ ಯುವ ಜನಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡ ಬಾಲಕ-ಬಾಲಕಿಯರ ರಸ್ತೆ ಓಟ, ಸ್ಕೇಟಿಂಗ್ ರೇಸ್ ಹಾಗೂ ಕ್ರಾಸ್ ಕಂಟ್ರಿ ಓಪನ್ ರೇಸ್ ನಗರದಲ್ಲಿ ರವಿವಾರ ಬೆಳಗ್ಗೆ ನಡೆಯಿತು. ಕ್ರೀಡೆಗಳಿಗೆ ಜಿ.ಪಂ. ಸಿಇಒ ಹೆಬ್ಸಿಬಾರಾಣಿ ಕೋರ್ಲಪಾಟಿ ಚಾಲನೆ ನೀಡಿದರು. ಜಗತ್ ವೃತ್ತದಿಂದ ಸ್ಕೇಟಿಂಗ್ ರೇಸ್ ಆರಂಭವಾಗಿ ಗೋವಾ ಹೋಟೆಲ್, ಆನಂದ ಹೋಟೆಲ್, ನ್ಯಾಯಾಲಯ ರಸ್ತೆ, ಸರ್ದಾರ ಪಟೇಲ್ ವೃತ್ತ, ಮಿನಿ ವಿಧಾನಸೌಧ, ಲಾಹೋಟಿ ಪೆಟ್ರೋಲ್ ಪಂಪ್, ಎಸ್.ಎಂ.ಪಂಡಿತ ರಂಗಮಂದಿರ ಮಾರ್ಗದ ಮೂಲಕ ಮರಳಿ ಜಗತ್ ವೃತ್ತದಲ್ಲಿ ಕೊನೆಗೊಂಡಿತು. 17 ವರ್ಷಕ್ಕೂ ಮೇಲ್ಪಟ್ಟ ರೂಟ್‌ನಲ್ಲಿ ಜೇವರ್ಗಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಲಕ್ಷ್ಮಣ ಪ್ರಥಮ, ನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಶಶಾಂಕ ದ್ವಿತೀಯ, ಪೊಲೀಸ್ ಸಿಬ್ಬಂದಿ ಶರಣ ಇಜೇರಿ ಮೂರನೇ ಸ್ಥಾನ, ಜೇವರ್ಗಿ ಪದವಿ ಕಾಲೇಜಿನ ವಿದ್ಯಾರ್ಥಿ ಸಾಯಬಣ್ಣ ನಾಲ್ಕನೇ ಸ್ಥಾನ ಪಡೆದರು. ರೂಟ್ 2ರಲ್ಲಿ ಬಾಲಕಿಯರ ಕ್ರಾಸ್ ಕಂಟ್ರಿ ಓಪನ್ ರೇಸ್‌ನಲ್ಲಿ ಮಹಾದೇವಿ ಶಾಲೆ ವಿದ್ಯಾರ್ಥಿನಿ ಕವಿತಾ ಎಸ್.ಜಿ., ಪ್ರಥಮ, ಸಿಪಿಎಸ್ ಶಾಲೆಯ ಅನಿಶಾ ದ್ವಿತೀಯ, ರೋಟರಿ ಕ್ಲಬ್‌ನ ಸುಹಾಸಿನಿ ತೃತೀಯ, ಕ್ರೀಡಾ ತರಬೇತಿ ಕೇಂದ್ರದ ರಾಧಿಕಾ ನಾಲ್ಕನೇ ಸ್ಥಾನ ಪಡೆದರು. ರೂಟ್ 3ರಲ್ಲಿ 17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಎಂಪಿಎಚ್‌ಎಸ್‌ನ ಜೈಭೀಮ ಪ್ರಥಮ, ಪ್ರಕಾಶ ದ್ವಿತೀಯ, ಭೀಮಾಶಂಕರ ತೃತೀಯ ಹಾಗೂ ಗೋವಿಂದ್ರ ದೇಸಾಯಿ ನಾಲ್ಕನೇ ಸ್ಥಾನ ಪಡೆದರು. ರೂಟ್ 4 ರಲ್ಲಿ 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸ್ಪರ್ಧೆಯಲ್ಲಿ ಎಸ್‌ಬಿಆರ್ ಶಾಲೆಯ ಶಶಾಂಕ ಪ್ರಥಮ, ಸಿಪಿಇಎಂಎಸ್‌ನ ಆದಿತ್ಯ ದ್ವಿತೀಯ, ಎಸ್‌ಬಿಆರ್‌ನ ಸ್ವಸ್ತಿಕ ಮೂರನೇ ಹಾಗೂ ಭರತಕುಮಾರ ನಾಲ್ಕನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಸಿಪಿಇಎಂಎಸ್‌ನ ನಿಧಿ ಪ್ರಥಮ, ಎಸ್‌ಬಿಆರ್.ನ ನಿಧಿ ಆರ್.ಆರ್. ದ್ವಿತೀಯ, ಸಿಪಿಇಎಂಎಸ್‌ನ ಸಬೀಯಾ ಸುಲ್ತಾನ ತೃತೀಯ, ಎಸ್‌ಬಿಆರ್‌ನ ಕನಕಲತಾ ನಾಲ್ಕನೇ ಸ್ಥಾನ ಪಡೆದಿದ್ದಾರೆ. ರೂಟ್ 5 ರಲ್ಲಿ 8 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಸಿಪಿಎಎಂಎಸ್‌ನ ಭರತ ಪ್ರಥಮ, ಎಸ್‌ಬಿಆರ್ ವಿದ್ಯಾರ್ಥಿಗಳಾದ ಸಾಯಿಶಕ್ತಿ ದ್ವಿತೀಯ, ಸಮರ್ಥ ತೃತೀಯ, ರೋಹನ ನಾಲ್ಕನೇಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಎಸ್‌ಬಿಆರ್‌ನ ಖುಷಿ ಪ್ರಥಮ, ಓಂಕಾರಿ ದ್ವಿತೀಯ, ಅಪ್ಪಾ ಪಬ್ಲಿಕ್ ಶಾಲೆಯ ಲಕೀÒ$¾ ತೃತೀಯ ಹಾಗೂ ಎಸ್ ಆರ್ ಮೆಹತಾ ಶಾಲೆಯ ವರ್ಷಾ ನಾಲ್ಕನೇ ಸ್ಥಾನ ಪಡೆದರು. ವಿಜೇತರಿಗೆ ನಗದು ಬಹುಮಾನ
ಹಾಗೂ ಪಾರಿತೋಷಕ ನೀಡಲಾಯಿತು. ನಾಗರಾಜ ಬಿ ಮಾಳಗೆ, ಅಶೋಕ, ಮಂಜುನಾಥ ಹಾಗೂ ಇತರರಿದ್ದರು.