Advertisement
ಈಜುಶ್ರೀಹರಿ ನಟರಾಜ್
ಕರ್ನಾಟಕ ಹಾಗೂ ಭಾರತದ ಪ್ರಮುಖ ಈಜುಪಟುಗಳಲ್ಲೊಬ್ಬರು ಶ್ರೀಹರಿ ನಟರಾಜ್. 2021ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನಲ್ಲಿ ಶ್ರೀಹರಿ ಎ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು. 2019ರಲ್ಲಿ ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ 4 ಚಿನ್ನ ಗೆದ್ದಿದ್ದಾರೆ.
ಅನೀಶ್ ಗೌಡ
ಕೇವಲ 19 ವರ್ಷದ ಅನೀಶ್ ಗೌಡ 17ನೇ ಸಿಂಗಾಪುರ ರಾಷ್ಟ್ರೀಯ ಕೂಟದಲ್ಲಿ ಎರಡು ಚಿನ್ನ, ಒಂದು ಬೆಳ್ಳಿಯ ಪದಕ ಗೆದ್ದಿದ್ದಾರೆ. ಥಾಯ್ಲೆಂಡ್ ಏಜ್ ಗ್ರೂಪ್ ಈಜಿನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ದಿನಿದಿ ದೆಸಿಂಘು
ಇನ್ನೂ 14 ವರ್ಷದ ದಿನಿದಿ ದೆಸಿಂಘು ರಾಷ್ಟ್ರೀಯ ಕಿರಿಯರ, ಅತೀ ಕಿರಿಯರ ಅಕ್ವಾಟಿಕ್ಸ್ ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭವಿಷ್ಯದ ಭರವಸೆ ಎಂದರೂ ಸರಿ. 2021ರಲ್ಲಿ ಅವರು ರಾಷ್ಟ್ರೀಯ ಕಿರಿಯರ ಮಟ್ಟದಲ್ಲಿ ಮೂರು ದಾಖಲೆ ನಿರ್ಮಿಸಿದ್ದರು. ರಾಜ್ಯ ಮಿನಿ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದಿದ್ದರು.
ಎಂ.ತನಿಷ್
ಎಸ್.ಲಿಖೀತ್
ಉತ್ಕರ್ಷ ಪಾಟೀಲ್
ಆರ್.ಹಷಿಕಾ
ವಿ.ನೀನಾ
ಲಿನೇಯಾÏ ಆ್ಯತ್ಲೆಟಿಕ್ಸ್
ಜೆಸ್ಸಿ ಸಂದೇಶ್ (ಪುರುಷರ ಹೈಜಂಪ್)
ಬೆಂಗಳೂರಿನವರಾದ ಜೆಸ್ಸಿ ಸಂದೇಶ್‌ಗೆ ಬಾಲ್ಯದಲ್ಲಿ ಕ್ರಿಕೆಟ್ ಆಸಕ್ತಿಯಿತ್ತು. ತಮ್ಮ ದೈಹಿಕ ಶಿಕ್ಷಕರ ಒತ್ತಾಯಕ್ಕೆ ಮಣಿದು ಹೈಜಂಪ್‌ನಲ್ಲಿ ಸ್ಪರ್ಧಿಸಿ ಅದರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಆ್ಯತ್ಲೆಟಿಕ್ಸ್ ಕೂಟದಲ್ಲಿ 7.34 ಅಡಿ ಎತ್ತರ ಹಾರಿ, ಬೆಳ್ಳಿ ಪದಕ ಪಡೆದರು. ಜತೆಗೆ ಏಷ್ಯನ್ ಗೇಮ್ಸ್‌ಗೂ ಅರ್ಹತೆ ಸಂಪಾದಿಸಿದರು.
Related Articles
ಒಡಿಶಾದಲ್ಲಿ ನಡೆದ ಅಂತಾರಾಜ್ಯ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿ ದರು. ಅಲ್ಲೇ ಅವರು ಏಷ್ಯನ್ ಗೇಮ್ಸ್‌ಗೂ ಅರ್ಹತೆ ಸಂಪಾದಿಸಿದರು. ಹರ್ಡಲ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು, ಮಿಶ್ರ ರಿಲೇಯಲ್ಲಿ ಕಂಚು ಗೆದ್ದಿದ್ದರು. ಬೊಳ್ಳಂಡ ವಿಕ್ರಮ್ ಐಯ್ಯಪ್ಪ, ಪ್ರಮೀಳಾ ಅಯ್ಯಪ್ಪರಿಂದ ತರಬೇತಾಗಿರುವ ಸಿಂಚಲ್ ಮೇಲೆ ನಿರೀಕ್ಷೆಯಿದೆ.
Advertisement
ಯಶಸ್ ಫಾಲಾಕ್ಷ ಕರ್ನಾಟಕದವರಾದ ಯಶಸ್ ಫಾಲಾಕ್ಷ 400 ಮೀ. ಹರ್ಡಲ್ಸ್ ಓಟದಲ್ಲಿ ಸೇನೆಯನ್ನು ಪ್ರತಿನಿಧಿಸುತ್ತಿದ್ದಾರೆ. ನಿಹಾಲ್ ಜೋಯೆಲ್ ವಿಲಿಯಮ್
(4×400 ಮೀ. ಮಿಶ್ರ ರಿಲೇ) ಶ್ರೀಲಂಕಾದಲ್ಲಿ ನಡೆದ ರಾಷ್ಟ್ರೀಯ ಆ್ಯತ್ಲೆ ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿಹಾಲ್ ಜೋಯೆಲ್ ವಿಲಿಯಮ್ 4×400 ಮೀ. ಪುರುಷರ ರಿಲೇಯಲ್ಲಿ ಚಿನ್ನ ಗೆದ್ದಿದ್ದಾರೆ. ಇದೇ ಕೂಟದಲ್ಲಿ ನಿಹಾಲ್ ಇದ್ದ ತಂಡ 9 ಚಿನ್ನದ ಪದಕ ಗೆದ್ದಿತ್ತು. ಬೆಳ್ಳಿಯಪ್ಪ ಬೋಪಯ್ಯ
ಪುರುಷರ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ ಬೋಪಯ್ಯ ಭಾರತವನ್ನು ಪ್ರತಿನಿಧಿಸುತ್ತಾರೆ. ಬ್ಯಾಡ್ಮಿಂಟನ್
ಎಂ.ಮಂಜುನಾಥ್
ಕರ್ನಾಟಕದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರರಲ್ಲಿ ಮಿಥುನ್ ಮಂಜುನಾಥ್ ಕೂಡ ಒಬ್ಬರು. 25 ವರ್ಷದ ಇವರು ಪ್ರಸ್ತುತ ವಿಶ್ವದಲ್ಲಿ 43ನೇ ರ್‍ಯಾಂಕಿಂಗ್ ಹೊಂದಿದ್ದಾರೆ. 2022ರ ಅರ್ಲಿಯನ್ಸ್ ಮಾಸ್ಟರ್ಸ್‌ನಲ್ಲಿ ಫೈನಲ್‌ಗೇರಿದ್ದರು. ಬಾಂಗ್ಲಾದೇಶ ಇಂಟರ್‌ನ್ಯಾಶನಲ್ ಕೂಟದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಚಿರಾಗ್ ಶೆಟ್ಟಿ
ಕರ್ನಾಟಕದ ಮೂಲದ ಚಿರಾಗ್ ಶೆಟ್ಟಿ ಏಷ್ಯಾಡ್‌ಗೆ ಮಹಾರಾಷ್ಟ್ರ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಸಾತ್ವಿಕ್ ರಾಂಕಿರೆಡ್ಡಿ ಜತೆಗೆ ಸೇರಿ ಅದ್ಭುತ ಸಾಧನೆ ಮಾಡಿದ್ದಾರೆ. 2022ರಲ್ಲಿ ಟೋಕಿಯೋದಲ್ಲಿ ನಡೆದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಸತತ 2 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 2 ಚಿನ್ನ, 2 ಬೆಳ್ಳಿ ಪದಕ ಗೆದ್ದಿದ್ದಾರೆ. ಕೊರಿಯ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. ಇವರ ಮೇಲೆ ಚಿನ್ನದಂತಹ ನಿರೀಕ್ಷೆಯಿದೆ.
ಅಶ್ವಿನಿ ಪೊನ್ನಪ್ಪ
ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಅತ್ಯಂತ ಖ್ಯಾತ ಆಟಗಾರ್ತಿ ಅಶ್ವಿನಿ ಪೊನ್ನಪ್ಪ. 2011ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2010 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಇದೇ ಕೂಟದಲ್ಲಿ ನಾಲ್ಕು ಬೆಳ್ಳಿ ಪದಕ ಗೆದ್ದಿದ್ದಾರೆ. 2014ರ ಏಷ್ಯಾಡ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರತದ ಭರವಸೆಯ ಹಿರಿಯ ಆಟಗಾರ್ತಿ. ಮಹಿಳಾ ಡಬಲ್ಸ್‌ನಲ್ಲಿ ಸ್ಪರ್ಧಿಸಲಿರುವ ಇವರಿಗೆ ಯಾರು ಜತೆಗಾರರು ಎನ್ನುವುದು ಈಗಿನ ಪ್ರಶ್ನೆ.
ಸಾಯಿ ಪ್ರತೀಕ್
ಹಲವು ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಇನ್ನಷ್ಟೇ ಗಮನ ಸೆಳೆಯಬೇಕಿದೆ. 2018ರಲ್ಲಿ ಕೆನಡಾದಲ್ಲಿ ನಡೆದ ಕಿರಿಯರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು. 2019ರ ಮಾಲ್ದೀವ್ಸ್ ಚಾಲೆಂಜ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಟೆನಿಸ್
ರೋಹನ್ ಬೋಪಣ್ಣ
ಟೆನಿಸ್‌ನಲ್ಲಿ ಡಬಲ್ಸ್ ಆಟಗಾರನಾಗಿ ರೋಹನ್ ಬೋಪಣ್ಣ ಹೆಸರು ಮಾಡಿದ್ದಾರೆ. ಡಬಲ್ಸ್‌ನಲ್ಲಿ ಒಟ್ಟು 24 ಪ್ರಶಸ್ತಿ ಗೆದ್ದಿದ್ದಾರೆ. ಸಿಂಗಲ್ಸ್‌ನಲ್ಲಿ ಇವರ ಸಾಧನೆ ಹೇಳಿ ಕೊಳ್ಳುವಷ್ಟು ಉತ್ತಮವಿಲ್ಲ. ಸಾನಿಯಾ ಮಿರ್ಜಾ ಜತೆಗೆ ಮಿಶ್ರ ಡಬಲ್ಸ್‌ನಲ್ಲೂ ಆಡಿದ್ದಾರೆ. 2010ರ ಯುಎಸ್ ಓಪನ್ ಗ್ರ್ಯಾನ್‌ಸ್ಲಾéಮ್‌ನಲ್ಲಿ ಫೈನಲ್‌ಗೇರಿದ್ದಾರೆ. 2017 ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾéಮ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದು ಇವರ ಶ್ರೇಷ್ಠ ಸಾಧನೆ. ಸ್ಕ್ವಾಷ್
ಜೋಶ್ನಾ ಚಿನ್ನಪ್ಪ
ಖ್ಯಾತ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹುಟ್ಟಿದ್ದು ಚೆನ್ನೈಯಲ್ಲಿ. ಇವರು ದೀಪಿಕಾ ಪಳ್ಳಿàಕಲ್ ಜತೆ ಸೇರಿ ಮಹಿಳಾ ಡಬಲ್ಸ್‌ನಲ್ಲಿ ಮಿಂಚಿನ ಸಾಧನೆ ಮಾಡಿದ್ದಾರೆ. 2022ರಲ್ಲಿ ವಿಶ್ವ ಡಬಲ್ಸ್ ಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, 2018ರಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 2 ಬೆಳ್ಳಿ ಪದಕ ಗೆದ್ದಿದ್ದಾರೆ. ಗಾಲ್ಫ್
ಅದಿತಿ ಅಶೋಕ್
25 ವರ್ಷದ ಮಹಿಳಾ ಗಾಲ#ರ್ ಅದಿತಿ ಅಶೋಕ್ 2021ರ ಟೋಕಿಯೋ ಒಲಿಂಪಿಕ್ಸ್ ಮೂಲಕ ಜನಪ್ರಿಯ ರಾದರು. ಅಲ್ಲಿ 4ನೇ ಸ್ಥಾನ ಪಡೆದು, ಕೊಂಚ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದರು. ಅಂತಾರಾಷ್ಟ್ರೀಯ
ಮಟ್ಟದಲ್ಲಿ ಗಮನ ಸೆಳೆಯುವ ಪ್ರದರ್ಶನನೀಡಿದ್ದಾರೆ. ಶೂಟಿಂಗ್
ದಿವ್ಯಾ ಸುಬ್ಬರಾಜು
(10 ಮೀ. ಏರ್ ಪಿಸ್ತೂಲ್)
ಕರ್ನಾಟಕದ ದಿವ್ಯಾ ಸುಬ್ಬರಾಜು ಈ ವರ್ಷ ಬಾಕುವಿನಲ್ಲಿ ನಡೆದ ವಿಶ್ವಕಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದಾರೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಇವರು ಸರಬೊjàತ್ ಸಿಂಗ್ ಜತೆಗೂಡಿ ಮಹತ್ವದ ಸಾಧನೆ ಮಾಡಿದರು. ಏಷ್ಯಾಡ್‌ನಲ್ಲೂ ಇವರು ಚಿನ್ನ ಗೆಲ್ಲಲಿ ಎಂಬ ಹಾರೈಕೆಯಿದೆ. ಕ್ರಿಕೆಟ್
ರಾಜೇಶ್ವರಿ ಗಾಯಕ್ವಾಡ್
ಭಾರತ ಮಹಿಳಾ ತಂಡದ ಖ್ಯಾತ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಯಾರಿಗೆ ಗೊತ್ತಿಲ್ಲ? 32 ವರ್ಷದ ಇವರು 99 ಏಕದಿನ, 58 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2 ಟೆಸ್ಟ್ ಗಳಲ್ಲೂ ಆಡಿದ್ದಾರೆ. 2017ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಅದರಲ್ಲಿ ಇವರು ಆಡಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಪ್ರಸ್ತುತ ಏಷ್ಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಾಲಿಬಾಲ್
ಅಶ್ವಲ್ ರೈ
ಹರಿಪ್ರಸಾದ್ ಸೈಲಿಂಗ್
ವಿಷ್ಣು ಶರವಣನ್
ಗಣಪತಿ ಚೆಂಗಪ್ಪ ಕ್ಲೈಂಬಿಂಗ್
ಭರತ್ ಕಾಮತ್
ಪ್ರತೀಕ್ಷಾ ಅರುಣ್ ಮಹಿಳಾ ಬಾಸ್ಕೆಟ್‌ಬಾಲ್ (5×5)
ಸಂಜನಾ ರಮೇಶ್. ಡಿ