Advertisement

ನರೇಗಾ ಅವ್ಯವಹಾರ: ದಕ್ಷಿಣದಲ್ಲೇ ಹೆಚ್ಚು; ಯೋಜನೆ ದುರುಪಯೋಗದಲ್ಲಿ ಕರ್ನಾಟಕ ದ್ವಿತೀಯ

11:26 PM Feb 13, 2022 | Team Udayavani |

ನವದೆಹಲಿ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಜಾರಿಯಲ್ಲಿ ಕರ್ನಾಟಕ ಸೇರಿದಂತೆ 4 ರಾಜ್ಯಗಳಲ್ಲಿ ಶೇ.86ರಷ್ಟು ಸೂಕ್ತ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಇತರ ಮೂರು ರಾಜ್ಯಗಳು.

Advertisement

ದೇಶಾದ್ಯಂತ ಉದ್ಯೋಗ ಖಾತರಿ ಯೋಜನೆಯಲ್ಲಿ 4.20 ಲಕ್ಷ ಕೇಸುಗಳ ಪೈಕಿ 3.62 ಲಕ್ಷ ಕೇಸುಗಳು ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ದೃಢಪಟ್ಟಿದೆ. ದುರುಪಯೋಗವಾಗಿರುವ ಒಟ್ಟು ಮೊತ್ತದ ಪೈಕಿ 974 ಕೋಟಿ ರೂ. ಆಗಿದೆ. ಈ ಪೈಕಿ 12 ಕೋಟಿ ರೂ. ಮಾತ್ರ ವಸೂಲು ಮಾಡಲಾಗಿದೆ ಎಂದು ದಾಖಲೆಗಳನ್ನು ಉಲ್ಲೇಖೀಸಿ “ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಪಟ್ಟಿಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದ್ದು, 42,151 ಪ್ರಕರಣಗಳಿಂದ 1.74 ಕೋಟಿ ರೂ. ದುರ್ಬಳಕೆ ಮಾಡಲಾಗಿದೆ. ಈ ಪೈಕಿ 1.3 ಕೋಟಿ ರೂ. ವಸೂಲು ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ 1.19 ಲಕ್ಷ ಉದ್ಯೋಗ ಖಾತೆಯಲ್ಲಿ ವಂಚನೆಗಳು ದೃಢಪಟ್ಟಿವೆ. ಇದರಿಂದಾಗಿಯೇ 261 ಕೋಟಿ ರೂ. ಮೊತ್ತ ದುರುಪಯೋಗ ಮಾಡಲಾಗಿದೆ. ದುಃಖದ ವಿಚಾರದ ಅಂಶವೆಂದರೆ 1.12 ಕೋಟಿ ರೂ. ಮೊತ್ತ ವಸೂಲು ಮಾಡಲಾಗಿದೆ. ತಮಿಳುನಾಡಿನಲ್ಲಿ 1.58 ಲಕ್ಷ ಕೇಸುಗಳು ಬೆಳಕಿಗೆ ಬಂದಿದ್ದು, 24.61 ಕೋಟಿ ರೂ. ವಂಚನೆ ಪತ್ತೆ ಹಚ್ಚಲಾಗಿದೆ ಎಂದು ದಾಖಲೆಗಳಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆ ವಿಚಾರ : ಸಿಂಹ ಮೂರ್ಖ ಎಂದ ಖಾದರ್

ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ಸಚಿವಾಲಯದ ಪ್ರಕಾರ ಉದ್ಯೋಗ ಖಾತರಿ ಯೋಜನೆಯಲ್ಲಿ ಮೀಸಲಾಗಿ ಇರಿಸಿರುವ ಮೊತ್ತ ಯಾವ ರೀತಿಯಲ್ಲಿ ಸದ್ಬಳಕೆಯಾಗಿದೆ ಎಂಬ ಬಗ್ಗೆ ನಿಗಾ ಇರಿಸಲಾಗುತ್ತದೆ. ಈ ವೇಳೆ ದೃಢಪಟ್ಟ ವಂಚನೆಯ ಮೊತ್ತವನ್ನು “ಹಣಕಾಸು ಅವ್ಯವಹಾರಕ್ಕೆ ಒಳಗಾಗಿ ದೃಢಪಟ್ಟ ವರದಿ’ಗೆ ಸೇರ್ಪಡೆಗೊಳಿಸಲಾಗುತ್ತದೆ.

Advertisement

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕೂಡ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್‌)ಗೆ ಹೆಚ್ಚಿನ ಪ್ರಾಶಸ್ತ್ಯ ಇದೆ ಎಂದು ಸಂಸತ್‌ನ ಸ್ಥಾಯಿ ಸಮಿತಿಯೊಂದರ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

      ರಾಜ್ಯ                                     ಪ್ರಕರಣಗಳು       ಒಟ್ಟು ಮೊತ್ತ                    ಪಡೆದುಕೊಂಡಿರುವುದು
ಆಂಧ್ರಪ್ರದೇಶ                               1,19, 964                2,61,34,70,548                        1,12,53, 657
ಕರ್ನಾಟಕ                                     42, 151 1,74,              91,65,405                             1,03, 89, 726
ತೆಲಂಗಾಣ                                     42,721                     86, 98,40,711                         10,90,035
ತಮಿಳುನಾಡು                              1,58, 822                24,61,31, 566                         4,65,09,366
ಒಟ್ಟು (ದೇಶಾದ್ಯಂತ)                  4,20, 869                9,74,87,84, 841                     12,06, 12,986

Advertisement

Udayavani is now on Telegram. Click here to join our channel and stay updated with the latest news.

Next