Advertisement

ಇಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

11:04 PM Dec 01, 2020 | mahesh |

ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಇಂಥ ದಿನಾಚರಣೆಗಳು ಪ್ರಾಮುಖ್ಯವೆನಿಸಿವೆ. ವಿಷಾನಿಲಗಳು ಹೆಚ್ಚಾಗುತ್ತಿರುವ ಪರಿಣಾಮ ಶುದ್ಧಗಾಳಿ ಸಿಗುತ್ತಿಲ್ಲ. ಜಲಮೂಲಗಳ ನಾಶದಿಂದಾಗಿ ಕುಡಿಯುವ ನೀರು ಮಲಿನವಾಗಿದೆ. ರಾಸಾಯನಿಕ ಗಳ ಬಳಕೆ ಯಿಂದಾಗಿ ಮಣ್ಣು ಕಲುಷಿತವಾಗು ತ್ತಿದೆ. ಕಣ್ಣಿಗೆ ಹಾನಿ ಯುಂಟುಮಾಡುವ ಬೆಳಕಿನ ಮಾಲಿನ್ಯ, ಕಿವುಡರನ್ನಾಗಿಸುವ ಶಬ್ದ ಮಾಲಿನ್ಯ, ಆರೋಗ್ಯ ಕೆಡಿಸುವ ವಿಕಿರಣ..ಇವೆಲ್ಲವೂ ಭೂಮಿಯ ಮೇಲೆ ಮನುಷ್ಯನ ಉಳಿವಿಗೆ ಮಾರಕವಾಗುತ್ತಿವೆ. ಈ ಕುರಿತು ಜಾಗೃತಿ ಮೂಡಿಸಲು ಪ್ರತೀ ವರ್ಷ ಡಿ. 2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.

Advertisement

ಭೋಪಾಲ್‌ ದುರಂತದ ನೆನಪು
1984ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಘಟಿಸಿದ ಅನಿಲ ದುರಂತ ಇಡೀ ಜಗತ್ತನ್ನೇ ಆಘಾತಕ್ಕೆ ದೂಡಿತ್ತು. ಈ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಹಾಗೂ ಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಆಚರಿಸಲು ನಿರ್ಧರಿಸಲಾಯಿತು.

ವಾಯು ಮಾಲಿನ್ಯಕ್ಕೆ ಏನು ಕಾರಣ?
ಜಗತ್ತು ಬೆಳೆಯುತ್ತಿರುವುದರಿಂದಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿ ಪರಿಸರಕ್ಕೆ ಹಾನಿಯುಂಟು ಮಾಡುವ ಇಂಧನಗಳ ಬಳಕೆಯೇ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಈಗಲೂ ಕೆಲವು ಹಳ್ಳಿಗಳಲ್ಲಿ ಅಡುಗೆಗಾಗಿ ಕಟ್ಟಿಗೆಗಳನ್ನು ಉರುವಲಾಗಿ ಬಳಸುತ್ತಿರುವುದು, ಕೀಟ ನಿಯಂತ್ರಕ ಔಷಧಗಳು, ಬೆಳೆ ತ್ಯಾಜ್ಯಗಳನ್ನು ಸುಡುವುದು, ರಾಸಾಯನಿಕ ಗೊಬ್ಬರಗಳ ಬಳಕೆ ಮಿತಿಮೀರುತ್ತಿರುವುದು, ಕೈಗಾರಿಕೆಗಳು ಹೊರಸೂಸುತ್ತಿರುವ ಅಪಾಯಕಾರಿ ರಾಸಾಯನಿಕಗಳು, ಮಿತಿ ಮೀರಿದ ಪ್ಲಾಸ್ಟಿಕ್‌ ಬಳಕೆ ಮಾಲಿನ್ಯಕ್ಕೆ ಇನ್ನಿತರ ಮುಖ್ಯ ಕಾರಣಗಳಾಗಿವೆ. ಸರಕಾರಗಳು ಎಷ್ಟೇ ಕ್ರಮಗಳನ್ನು ಕೈಗೊಂಡರೂ ವಾಯು ಮಾಲಿನ್ಯ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಭಾರತದ ನಗರಗಳಲ್ಲೇ ಅಧಿಕ
ಜಗತ್ತಿನಲ್ಲಿ ಅತೀ ಹೆಚ್ಚು ವಾಯು ಮಾಲಿನ್ಯ ಹೊಂದಿರುವ 15 ನಗರಗಳನ್ನು ಪಟ್ಟಿ ಮಾಡಲಾಗಿದ್ದು ಅವುಗಳಲ್ಲಿ 13 ನಗರಗಳು ಭಾರತದಲ್ಲಿಯೇ ಇವೆ. ರಾಜಧಾನಿ ಹೊಸದಿಲ್ಲಿ ಅಪಾಯದಲ್ಲಿದೆ. ಇಲ್ಲಿನ ಜನರು ಶುದ್ಧ ಗಾಳಿಗಾಗಿ “ಆಕ್ಸಿಜನ್‌ ಹೌಸ್‌’ಗಳ ಮೊರೆ ಹೋಗುತ್ತಿ¨ªಾರೆ. ಅಶುದ್ಧ ಗಾಳಿ ಸೇವನೆ ಬೆಳೆಯುತ್ತಿರುವ ಮಕ್ಕಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಇನ್ನು ಹೃದ್ರೋಗಿಗಳಿಗಂತೂ ವಾಯು ಮಾಲಿನ್ಯ ಸವಾಲೇ ಸರಿ.

ಸಮಸ್ಯೆಗಳೇನಾಗುತ್ತಿದೆ?
ಅಧ್ಯಯನ ವರದಿಗಳ ಪ್ರಕಾರ ದೇಶದಲ್ಲಿ ಸುಮಾರು 15 ಕೋಟಿ ಜನರು ಕಲುಷಿತ ಗಾಳಿಯನ್ನು ಸೇವಿಸಿ ಮರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈಗಾಗಲೇ ಸುಮಾರು 2.5 ಲಕ್ಷ ಮಕ್ಕಳು ವಾಯು ಮಾಲಿನ್ಯದಿಂದ ಸಂಭವಿಸುವ ಕಾಯಿಲೆಗೆ ತುತ್ತಾಗಿ ಜೀವನ ಕಳೆದುಕೊಂಡಿದ್ದಾರೆ. ಪ್ರತೀ ಮೂರು ನಿಮಿಷಗಳಿಗೆ ಒಂದು ಮಗು ಸಾವನ್ನಪ್ಪುತ್ತಿದೆ. ಅಕಾಲಿಕವಾಗಿ ಸಾವಿಗೀಡಾಗುತ್ತಿರುವವರ ಪೈಕಿ ಶೇ. 25ಕ್ಕೂ ಹೆಚ್ಚು ಮಂದಿಯ ಸಾವಿಗೆ ವಾಯು ಮಾಲಿನ್ಯವೇ ಕಾರಣವಾಗಿದೆ.

Advertisement

ರಾಜ್ಯದಲ್ಲಿ ಎಲ್ಲಿ ಹೆಚ್ಚು
ಬೆಂಗಳೂರು, ತುಮಕೂರು, ದಾವಣಗೆರೆ, ಬೀದರ್‌ ಹಾಗೂ ರಾಯಚೂರು ನಗರಗಳಲ್ಲಿ ಅತೀ ಹೆಚ್ಚು ವಾಯು ಮಾಲಿನ್ಯ ಇದೆ. ಹುಬ್ಬಳ್ಳಿ- ಧಾರವಾಡ, ಕೋಲಾರ, ಕಲಬುರಗಿ ಮತ್ತು ಬೆಳಗಾವಿ ನಗರಗಳು ಅನಂತರದ ಸ್ಥಾನದಲ್ಲಿವೆ.

ಲಾಕ್‌ಡೌನ್‌ ವೇಳೆ ಮಾಲಿನ್ಯ ಕಡಿಮೆ
ಕೋವಿಡ್‌ ಸಂಬಂಧ ಹೇರಲಾಗಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಏರ್‌ ಕ್ವಾಲಿಟಿ ಇಂಡೆಕ್ಸ್‌ ಬಹಳ ಕಡಿಮೆಯಾಗಿತ್ತು. ಕೋವಿಡ್‌-19 ಲಾಕ್‌ಡೌನ್‌ ಅವಧಿಯಲ್ಲಿ ದಿಲ್ಲಿ ಮತ್ತು ಮುಂಬಯಿ ಸಹಿತ ದೇಶದ ಐದು ನಗರಗಳಲ್ಲಿ ವಾಯು ಮಾಲಿನ್ಯ ಮಟ್ಟ ಕಡಿಮೆಯಾಗಿದೆ. ಇದರಿಂದ ಸುಮಾರು 630 ಅಕಾಲಿಕ ಮರಣಗಳನ್ನು ತಡೆಗಟ್ಟಿದಂತಾಗಿದ್ದು, ದೇಶದ ಆರೋಗ್ಯ ವೆಚ್ಚದಲ್ಲಿ 690 ಮಿಲಿಯನ್‌ ಡಾಲರ್‌ ಉಳಿತಾಯವಾಗಿದೆ ಎಂದು ವರದಿಯೊಂದು ಹೇಳಿದೆ.

ಶೇ. 10ರಷ್ಟು ಕಡಿಮೆ
ದಿಲ್ಲಿ, ಮುಂಬಯಿ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್‌ ನಗರಗಳಲ್ಲಿನ ವಾಹನಗಳು ಮತ್ತು ಇತರ ಮೂಲಗಳಿಂದ ಹೊರಸೂಸುವ ಹಾನಿಕಾರಕ ಸೂಕ್ಷ್ಮಕಣಗಳ (ಪಿಎಂ 2.5) ಮಟ್ಟವನ್ನು ಲಂಡನ್‌ನ ವಿಜ್ಞಾನಿ ಗಳು ಪತ್ತೆಹಚ್ಚಿ¨ªಾರೆ. ಈ ಅವಧಿಯಲ್ಲಿ ಮುಂಬಯಿ ಯಲ್ಲಿ ಶೇ.10ರಷ್ಟು ಮತ್ತು ದಿಲ್ಲಿಯಲ್ಲಿ ಶೇ. 54ರಷ್ಟು ಕಡಿಮೆಯಾಗಿದೆ. ಇತರ ನಗರಗಳಲ್ಲಿ ಶೇ. 24ರಿಂದ ಶೇ. 32ರ ವರೆಗೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next