ಎನ್‌ಪಿಎಸ್‌ನಲ್ಲಿ ನೀವು ಮಾಡಿದ ಹೂಡಿಕೆಯು ನಾಲ್ಕು ವಿವಿಧ ಕ್ಷೇತ್ರಗಳಲ್ಲಿ ಹೂಡಲ್ಪಡುತ್ತದೆ ಎಂದು ಈಗಾಗಲೇ ಹೇಳಿ ಆಗಿದೆಯಷ್ಟೆ? E ಅಥವಾ ಈಕ್ವಿಟಿ, G ಅಥವಾ ಗವನ್ಮೆìಂಟ್ ಡೆಟ್ (ಸರಕಾರಿ ಸಾಲಪತ್ರಗಳು), C ಅಥವಾ ಕಾರ್ಪೋರೇಟ್ ಡೆಟ್ (ಖಾಸಗಿ ಕಂಪೆನಿಗಳ ಸಾಲಪತ್ರಗಳು) ಅಥವಾ A ಅಥವಾ ಆಲ್ಟರ್ನೇಟಿವ್ ಫಂಡುಗಳು.
Advertisement
ಎÇÉಾ ನಾಲ್ಕೂ ಹೂಡಿಕೆಗಳು ಒಂದು ಮ್ಯೂಚುವಲ್ ಫಂಡ್ ರೀತಿಯÇÉೇ ನಡೆಯುವ ಈ ಯೋಜನೆಗೆ ಯಾವುದೇ ಗ್ಯಾರಂಟಿ ಪ್ರತಿಫಲ ಇಲ್ಲ. ಅಂತಿಮ ಪ್ರತಿಫಲ ಮಾರುಕಟ್ಟೆಯ ಆಧಾರದಲ್ಲಿ ಫಂಡ್ ಬೆಳವಣಿಗೆಯನ್ನು ಹೊಂದಿರುತ್ತದೆ. ನಾಲ್ಕೂ ರೀತಿಯ ಫಂಡುಗಳಿಗೂ ಪ್ರತ್ಯೇಕವಾದ ಪ್ರತಿಫಲ ಇರುತ್ತದೆ. ಅಂತೆಯೇ ಕಳೆದ 1,3, ಹಾಗೂ 5 ವರ್ಷಗಳ ಸಾಧನೆಯನ್ನು E, G, C ಹಾಗೂ A ಆಯ್ಕೆಗಳಲ್ಲಿ ಪ್ರತಿಯೊಂದು ಫಂಡು ಹೌಸುಗಳಿಗೂ ಪ್ರತ್ಯೇಕವಾಗಿ ನೀಡಲಾಗಿದೆ. (ಈ ರೀತಿ ಎನ್‌ಪಿಎಸ್ ಪ್ರತಿಫಲವನ್ನು //www.npstrust.org.in/return-of-nps-scheme ಲಿಂಕಿಗೆ ಹೋಗಿ ಯಾವಾಗ ಬೇಕಾದರೂ ನೋಡಬಹುದು).
***
ಒಬ್ಟಾತನ ಹೂಡಿಕೆಯು ನಾಲ್ಕು ಕ್ಷೇತ್ರಗಳ ಮಿಶ್ರಣವಾಗಿದ್ದು ಅಂತಿಮ ಪ್ರತಿಫಲವೂ ಆ ಹೂಡಿಕಾ ಕ್ಷೇತ್ರಗಳ ಅನುಪಾತಕ್ಕನುಸಾರವಾಗಿಯೇ ದಕ್ಕುತ್ತದೆ. E, G, C ಹಾಗೂ A ಹೂಡಿಕೆಗಳ ಅನುಪಾತ ನಾವು ನಿರ್ದೇಶಿಸಿದಂತೆಯೇ ಫಂಡು ಹೌಸುಗಳು ನಡೆಸುತ್ತವೆ. ಸಾಮಾನ್ಯವಾಗಿ E ಆಯ್ಕೆಯಲ್ಲಿ ಶೇ.50 ಹಾಗೂ A ಆಯ್ಕೆಯಲ್ಲಿ ಶೇ.5 ಗರಿಷ್ಟ ಮಿತಿ ಆಗಿರುತ್ತದೆ. ಅಟೋ E ಆಯ್ಕೆಯಲ್ಲಿ ಶೇ.75 ಹೂಡಬಹುದು ಹಾಗೂ ಅಲ್ಲಿ A ಆಯ್ಕೆ ಇರುವುದಿಲ್ಲ. ನಿಮ್ಮ ಒಟ್ಟಾರೆ ಅಂತಿಮ ಪ್ರತಿಫಲ ನಿಮ್ಮ ವಿವಿಧ ಆಯ್ಕೆಗಳ ಸರಾಸರಿ ಆಗಿರುತ್ತದೆ.
ಅಷ್ಟೇ ಅಲ್ಲದೆ, ಪ್ರತಿಫಲವು ಮಾರುಕಟ್ಟೆಯ ಹಿಡಿತದಲ್ಲಿದ್ದು ಹಿಂದಿನ ಪ್ರತಿಫಲ ಮುಂಬರುವ ಪ್ರತಿಫಲಗಳ ಮುನ್ಸೂಚನೆಯಲ್ಲವೆಂಬುದನ್ನು ಅರಿಯಬೇಕು. ಇಲ್ಲಿರುವ ಎÇÉಾ ನಾಲ್ಕೂ ಆಯ್ಕೆಗಳೂ ಮಾರುಕಟ್ಟೆ ಮಾದರಿಯದ್ದು. E, G, C, A ಇವೆಲ್ಲವೂ ಮಾರುಕಟ್ಟೆಯ ಮೌಲ್ಯಾಧಾರಿತವಾಗಿ ಪ್ರತಿಫಲ ನೀಡುತ್ತವೆ. G ಮತ್ತು C ಎಂಬ ಸಾಲಪತ್ರಗಳೂ ಕೂಡಾ ಮಾರುಕಟ್ಟೆ ಆಧಾರಿತ ಪ್ರತಿಫಲಗಳನ್ನೇ ನೀಡುತ್ತವೆ ಎಂಬುದನ್ನು ಗಮನಿಸಬೇಕು.
Related Articles
Advertisement
ಈ ಮಾತನ್ನು ಹಲವಾರು ಬಾರಿ ಕಾಕುನಲ್ಲಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗಿಗಳ ಒಳಿತಿಗಾಗಿ ಹಲವಾರು ಖಾಸಗಿ ಸಂಸ್ಥೆಗಳು ಐಚ್ಛಿಕವಾಗಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಆರಂಭಿಸಿ¨ªಾರೆ. ಇದು ಕಾನೂನು ಪ್ರಕಾರ ಕಡ್ಡಾಯವಲ್ಲದಿದ್ದರೂ ಉದ್ಯೋಗಿಗಳ ಹಿತದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ಖಾಸಗಿ ಉದ್ಯೋಗದಾತರಿಗೆ ಒಂದು ಪೈಸೆಯ ಹೆಚ್ಚುವರಿ ಖರ್ಚು ಇಲ್ಲದೆ ಕೊಡುವ ಸಂಬಳದಲ್ಲಿಯೇ ಎನ್‌ಪಿಎಸ್ ಆರಂಭಿಸಲು ಸಾಧ್ಯ. ಈ ಬಗ್ಗೆ ಕೂಡಾ ಕಾಕುನಲ್ಲಿ ಈ ಹಿಂದೆ ಚರ್ಚಿಸಲಾಗಿದೆ.
2004ರ ಬಳಿಕ ಹೊಸದಾಗಿ ಸೇರುವವರಿಗೆ ಅನ್ವಯಿಸುವಂತೆ ಸರಕಾರದಲ್ಲೂ ಈ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿಯಲ್ಲಿದೆ. ಸರಕಾರಿ ಮಾದರಿಯಲ್ಲಿ ಹೂಡಿಕೆಯ ಕ್ರಮವೇ ಭಿನ್ನವಾಗಿದ್ದು, ಸ್ವಾಭಾವಿಕವಾಗಿ ಅಲ್ಲಿನ ಪ್ರತಿಫಲಗಳು ಕೂಡಾ ಇದರಿಂದ ಭಿನ್ನವಾಗಿವೆ. ಆದರೂ ಸರಕಾರಿ ಉದ್ಯೋಗಿಗಳು ತಮ್ಮ ಪ್ರತಿಫಲವನ್ನು ಹಳೆಯ ಪೆನ್ಶನ್ ಪದ್ಧತಿಗೆ ಅನುಸಾರವಾಗಿ ನೋಡುವುದು ಸಹಜವೇ ಆಗಿದೆ. ಈ ಬಗ್ಗೆ ಸರಕಾರಿ ನೌಕರರಲ್ಲಿ ತೀವ್ರ ಅಸಮಧಾನ ಕೂಡಾ ಇದೆ.
ಈ ರೀತಿಯಲ್ಲಿ ಎನ್‌ಪಿಎಸ್ ಎಂಬ ಮಹಾನ್ ಯೋಜನೆಯು ಹಲವು ಮುಖಗಳ ಮೂಲಕ ಗೋಚರವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸಂದರ್ಭಕ್ಕೆ ತಕ್ಕುದಾದ ಮುಖವನ್ನು ಮಾತ್ರ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಇನ್ನೊಬ್ಬರಿಗೆ ಅನ್ವಯವಾಗುವ ಮುಖವನ್ನು ತಮ್ಮ ಸಂದರ್ಭಕ್ಕೆ ಸಜ್ಜಿಗೆ-ಬಜಿಲ್ ಮಾಡಿಕೊಂಡು ಗೊಂದಲಕ್ಕೀಡಾಗಬೇಡಿ. ಗ್ರಹಿಕೆ ತಪ್ಪಾದರೆ ವಿಶ್ಲೇಷಣೆ ಮತ್ತು ತೀರ್ಮಾನ ಕೂಡಾ ತಪ್ಪಾಗುತ್ತದೆ. ಹೂಡಿಕೆಯು ಲೆಕ್ಕಾಚಾರದ ಕ್ರಿಯೆ; ಭಾವನಾತ್ಮಕ ಪ್ರತಿಕ್ರಿಯೆ ಅಲ್ಲ.