Advertisement

ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ರಾಷ್ಟ್ರೀಯ ಪಕ್ಷಗಳು

06:28 PM Feb 06, 2018 | Team Udayavani |

ಎನ್‌.ಆರ್‌. ಪುರ: ರಾಜ್ಯದಲ್ಲಿನ ಜನಸಾಮಾನ್ಯರ, ಬಡವರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ ಎಂದು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಟಿ.ರಾಜೇಂದ್ರ ಆರೋಪಿಸಿದರು. 

Advertisement

 ಅವರು ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾ.ಪಂ. ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.  ದೇವೇಗೌಡರು ತಮ್ಮ ಇಳಿವಯಸ್ಸಿನಲ್ಲೂ ಕೂಡ ತಮ್ಮ ಮುತ್ಸದ್ದಿತನದಿಂದಾಗಿ ರಾಜ್ಯದ ರೈತರ, ಜನಸಾಮಾನ್ಯರ ನೋವುಗಲಿವುಗಳಿಗೆ ಸ್ಪಂದಿಸುತ್ತಾ ರಾಜ್ಯ ವ್ಯಾಪಿ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಯಲ್ಲಿ ಮುಂದಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ  ನೀತಿಯ ವಿರುದ್ಧವಾಗಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಧಿ ಕಾರಕ್ಕೆ ಬರಬೇಕೆಂದು ಹಗಲಿರುಳು ದುಡಿಯುತ್ತಿದ್ದಾರೆ. ಅವರು ಅಧಿಕಾರದಲ್ಲಿ ಎಲ್ಲವನ್ನೂ ಅನುಭವಿಸಿ ಬಂದವರು. ಅವರಿಗೆ ಅ ಧಿಕಾರದ ಹುಚ್ಚಿಲ್ಲ. ಬದಲಿಗೆ ಈ ರಾಜ್ಯಕ್ಕೆ ಪ್ರಾಮಾಣಿಕ ಹಾಗೂ ಬದ್ಧತೆಯ ಸರ್ಕಾರದ ಅವಶ್ಯಕತೆ ಇದೆ. ಅದಕ್ಕಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜನರಲ್ಲಿ ಕೋಮುವಾದ ಕೆರಳಿಸಿ, ಮರಣ ಹೊಂದಿದ ಹಿಂದೂಗಳ ಶವವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ ನಂ. ಭ್ರಷ್ಟಾಚಾರಿವಾಗಿದೆ. ಅಹಿಂದ ವರ್ಗದ ಓಲೈಕೆಗಾಗಿ ಅದು ಮುಂದಾಗಿದೆ. ಈ ಬಾರಿ ಚುನಾವಣೆಯಲ್ಲಿ ರಾಜ್ಯದ ಮತದಾರರು ಕುಮಾರಸ್ವಾಮಿಯವರನ್ನು ಕಿಂಗ್‌ ಮೇಕರ್‌ ಮಾಡುವ ಬದಲಿಗೆ ಕಿಂಗ್‌ ಮಾಡಲಿ , ಆಗ ರಾಜ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು. 

ಶೃಂಗೇರಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಚ್‌.ಜಿ.ವೆಂಕಟೇಶ್‌ ಮಾತನಾಡಿ, ನಾನು ಪಕ್ಷದಲ್ಲಿ ಪ್ರಾಮಾಣಿಕವಾದ ಹಾಗೂ ಸಕ್ರಿಯವಾದ ರಾಜಕಾರಿಣಿಯಾಗುತ್ತಿದ್ದೆ. ಎಚ್‌.ಟಿ.ರಾಜೇಂದ್ರವರನ್ನು ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಿ ಅವರ ಗೆಲುವಿಗೆ ಶ್ರಮಿಸುತ್ತಿದ್ದೆ. ಆದರೆ ಅವರ ಆರೋಗ್ಯ ಸರಿಯಿಲ್ಲದ ಕಾರಣ ಪಕ್ಷದ ಸಂಘಟನೆ ಹಾಗೂ ಬಲವರ್ಧನೆ ದೃಷ್ಟಿಯಿಂದ ನನ್ನನ್ನೇ ಎಚ್‌.ಡಿ.ದೇವೇಗೌಡರು ಶೃಂಗೇರಿ ಕ್ಷೇತ್ರದ
ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಪಕ್ಷದ ಸಂಘಟನೆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ.  ನಾನೂ ಹಾಗೂ ಎಚ್‌.ಟಿ.ರಾಜೇಂದ್ರರವರು
ಬಾಲ್ಯ ಸ್ನೇಹಿತರು. ನಮ್ಮ ಗೆಳೆತನ ಇಂದಿಗೂ ಶಾಶ್ವತವಾಗಿದೆ. ಮುಂದೆಯೂ ಇರುತ್ತದೆ. ಮುಂದಿನ ನಮ್ಮದೇ ಪಕ್ಷ ಅ ಧಿಕಾರಕ್ಕೆ ಬಂದಲ್ಲಿ
ಎಚ್‌.ಟಿ.ರಾಜೇಂದ್ರರವರಿಗೆ ಸೂಕ್ತ ಸ್ಥಾನಮಾನ ನೀಡಲು ನಾನೇ ಹೈಕಮಾಂಡ್‌ಗೆ ಒತ್ತಡ ಹೇರುತ್ತೇನೆ ಎಂದು ಹೇಳಿದರು.

 ಜೆಡಿಎಸ್‌ ಶೃಂಗೇರಿ ಕ್ಷೇತ್ರಾಧ್ಯಕ್ಷ ದಿವಾಕರ್‌ ಭಟ್‌ ಮಾತನಾಡಿ, ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದ್ದರಿಂದ ಫೆಬ್ರವರಿ 15ರೊಳಗಾಗಿ ಕ್ಷೇತ್ರದ 256 ಭೂತ್‌ ಮಟ್ಟದ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಕೊಪ್ಪ ಹಾಗೂ ಶೃಂಗೇರಿಗಳಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಈ ತಾಲೂಕಿನಲ್ಲಿ ಕೆಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ಭೂತ್‌ ಸಮಿತಿ ರಚನೆಯಾಗಬೇಕಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್‌
ಮಟ್ಟದ ಪಕ್ಷದ ಅಧ್ಯಕ್ಷ ಅರಸಿನಗೆರೆ ಎ.ಎಸ್‌. ಮಂಜುನಾಥ್‌ ವಹಿಸಿದ್ದರು.

Advertisement

ಜೆಡಿಎಸ್‌ ಮುಖಂಡರುಗಳಾದ ಕೊಪ್ಪದ ಕಳಸಪ್ಪ, ಸಂಜಯ್‌, ರಾಮಸ್ವಾಮಿ, ಡಿ.ಸಿ.ದಿವಾಕರ್‌, ಎಸ್‌.ಎಸ್‌.ಶಾಂತ್‌ ಕುಮಾರ್‌, ಎಂ.ಓ.ಜೋಯಿ, ವಕೀಲ ಚಂದ್ರಶೇಖರ್‌, ಹೋಬಳಿ ಅಧ್ಯಕ್ಷ ಶಿವದಾಸ್‌, ಎಂ.ಮಹೇಶ್‌, ಕೆ.ಎನ್‌.ನಾಗರಾಜ್‌, ಸುಂದರೇಶ್‌ ಹೆಗ್ಡೆ, ಕೆ.ಸಿ.ನಾಗೇಶ್‌, ಜೆ.ಟಿ.ಸುಂದರೇಶ್‌,
ಎ.ಎ.ಪ್ರವೀಣ್‌, ಜಿ.ಡಿ.ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next