Advertisement
ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡುಬರುವ ಪೋಷಕ ಆಹಾರದ ಕೊರತೆ ಮತ್ತು ಹಸಿವು ಸಮಸ್ಯೆಗಳನ್ನು 2022ರೊಳಗೆ ನಿವಾರಿಸುವ ಅಂಗವಾಗಿ ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆಯನ್ನು ಆವಿಷ್ಕರಿಸಲಾಗಿದೆ.ಕೃಷಿ ವಿಜ್ಞಾನಿ ಡಾ| ಎಂ.ಎಸ್. ಸ್ವಾಮಿ ನಾಥನ್, ನ್ಯಾಯ ಆಯೋಗದ ಉಪಾಧ್ಯಕ್ಷ ಡಾ| ರಾಜೀವ್ ಕುಮಾರ್, ಸಿ.ಇ.ಒ. ಅಮಿತಾಬ್ ಕಾಂತ್ ಸಂಯುಕ್ತವಾಗಿ ರಾಷ್ಟ್ರೀಯ ಪೌಷ್ಟಿಕ ಆಹಾರ ನೀತಿ ಯನ್ನು ಪ್ರಕಟಿಸಿದ್ದಾರೆ.
ಐದು ವರ್ಷಗಳಿಗಿಂತ ಕೆಳಗಿನ ಮಕ್ಕ ಳಲ್ಲಿ ತೂಕ ಕಡಿಮೆಯಾಗುತ್ತಿರುವವರ ಪ್ರಮಾಣ ಅಧಿಕವಾಗುತ್ತಿದೆ. ಹಿಮಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ತ್ರಿಪುರ, ಮಣಿಪುರ ಮೊದಲಾದ ರಾಜ್ಯಗಳಲ್ಲಿ ಈ ವಿಷಯದಲ್ಲಿ ಗಂಭೀರ ಚಿಂತನೆ ಮಾಡಬೇಕಾದ ಸ್ಥಿತಿ ನೆಲೆಗೊಂಡಿದೆ.
Related Articles
Advertisement
2022ನೇ ಇಸವಿಯೊಳಗೆ ಪೌಷ್ಟಿಕ ಆಹಾರದ ಕೊರತೆಯನ್ನು ಪ್ರತೀ ವರ್ಷ ಶೇ. 3ರಂತೆ ಕಡಿಮೆಗೊಳಿಸುವ ಉದ್ದೇಶವಿರಿಸಿ ಕೊಳ್ಳಲಾಗಿದೆ. 15ರಿಂದ 49ನೇ ವರ್ಷ ಪ್ರಾಯದೊಳಗಿನವರಲ್ಲಿ ಕಂಡುಬರುವ ಪೌಷ್ಟಿಕ ಆಹಾರದ ಕೊರತೆಯನ್ನು 2020ರೊಳಗೆ ನಿವಾರಿಸುವ ಪ್ರಯತ್ನ ಮಾಡಲಾಗುವುದು.
ಕೇರಳದಲ್ಲೂ ಮಹಿಳೆಯರಲ್ಲಿ ಪೌಷ್ಟಿಕ ಆಹಾರ ಕೊರತೆ ಮಹಿಳೆಯರಲ್ಲಿ ಪೌಷ್ಟಿಕ ಆಹಾರ ಕೊರತೆ ಕಂಡು ಬರುತ್ತಿರುವ ರಾಜ್ಯಗಳ ಯಾದಿಯಲ್ಲಿ ಕೇರಳವೂ ಒಳಗೊಂಡಿದೆ. ರಾಷ್ಟ್ರೀಯ ಪೋಷಕ ಆಹಾರ ಯೋಜನೆಯನ್ನು ಆವಿಷ್ಕರಿಸಲು ನ್ಯಾಯ ಆಯೋಗ ನಡೆಸಿದ ಅಧ್ಯಯನದಲ್ಲಿ ದೇಶದ ಏಳು ರಾಜ್ಯಗಳಲ್ಲಿ ಮಹಿಳೆಯರಲ್ಲಿ ಪೋಷಕ ಆಹಾರದ ಕೊರತೆ ಕಂಡು ಬಂದಿದೆ. ಪಂಜಾಬ್, ಹಿಮಾಚಲ ಪ್ರದೇಶ, ದಿಲ್ಲಿ, ಉತ್ತರ ಪ್ರದೇಶ, ತಮಿಳ್ನಾಡು, ಗೋವಾ ಮತ್ತು ಕೇರಳದಲ್ಲಿ ಮಹಿಳೆಯರಲ್ಲಿ ಪೌಷ್ಟಿಕ ಆಹಾರದ ಕೊರತೆ ಪತ್ತೆಹಚ್ಚಲಾಗಿದೆ. ಹೆರಿಗೆಗೆ ಮುನ್ನ ಕೇರಳ, ಗೋವಾ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ಗರ್ಭಿಣಿಯರ ಬಗ್ಗೆ ಹೆಚ್ಚಿನ ಗಮನಹರಿಸುವುದಿಲ್ಲ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಆರು ತಿಂಗಳಿಗಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಕೇರಳ, ಅರುಣಾಚಲ ಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಸ್ತನ್ಯಪಾನ ಕಡಿಮೆಯಾಗುತ್ತಿದೆ ಎಂಬುದಾಗಿ ಅಧ್ಯಯನದಲ್ಲಿ ಪತ್ತೆಹಚ್ಚಲಾಗಿದೆ.