Advertisement
ಇದುವರೆಗೆ ಇದ್ದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಸ್ಥಾನದಲ್ಲಿ ಇನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಬರಲಿದೆ. ಜು.29ರಂದು ಅದು ಲೋಕಸಭೆಯಲ್ಲಿ ಅನುಮೋದನೆಗೊಂಡಿತ್ತು.
Related Articles
ದಿವಾಳಿ ವಿಧೇಯಕಕ್ಕೆ ಒಪ್ಪಿಗೆ
ಕೇಂದ್ರ ಸರ್ಕಾರದ ಮಹತ್ವದ ದಿವಾಳಿ ವಿಧೇಯಕಕ್ಕೆ ಲೋಕಸಭೆ ಧ್ವನಿಮತದಿಂದ ಸಮ್ಮತಿ ಸೂಚಿಸಿದೆ. ಸಾಲ ಮರು ಪಾವತಿ ಮಾಡದೇ ಇರುವ ಕಂಪನಿಗಳ ಆಸ್ತಿ ಹರಾಜು ಮಾಡುವ ಬಗ್ಗೆ ಮತ್ತಷ್ಟು ಹೆಚ್ಚಿನ ಪಾರದರ್ಶಕತೆಯನ್ನು ವಿಧೇಯಕದಲ್ಲಿ ಕಲ್ಪಿಸಲಾಗಿದೆ. 330 ದಿನಗಳ ಒಳಗಾಗಿ ಸಾಲ ನೀಡಿದ ಹಣಕಾಸು ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ಪ್ರಕರಣವನ್ನು ಇತ್ಯರ್ಥಗೊಳಿಸಬೇಕಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಒಟ್ಟು ಏಳು ವಿಭಾಗಗಳಿಗೆ ತಿದ್ದುಪಡಿ ತರಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮತ್ತು ಇತರ ಕಾನೂನಾತ್ಮಕ ಸಂಸ್ಥೆಗಳಿಗೆ ಕೂಡ ನಿಯಮಗಳು ಅನ್ವಯವಾಗುತ್ತವೆ.
ರಾಜ್ಯಸಭೆಯಲ್ಲಿ ಕೋಲಾಹಲ
ಮುಲಾಯಂ ಸಿಂಗ್ ಯಾದವ್, ಎಸ್‌ಪಿ ಸಂಸದ ಮುಲಾಯಂಜಿ ಅವರೇ, ನೀವು ಹಿರಿಯ ಸದಸ್ಯರಿದ್ದೀರಿ. ಪ್ರಮುಖ ಮಸೂದೆಗಳು ಮಂಡನೆಯಾಗಿ ಚರ್ಚೆಯಾಗಿ ಅಂಗೀಕಾರವಾಗಬೇಕಾಗಿದೆ.ಅದರಿಂದ ಜನರಿಗೆ ಅನುಕೂಲವಾಗಬೇಕಾಗಿದೆ. ಹೀಗಾಗಿ ನಿಮ್ಮ ಅಭಿಪ್ರಾಯ ಒಪ್ಪಲಾಗುವುದಿಲ್ಲ.
ಅರ್ಜುನ್ ರಾಮ್ ಮೇಘಾಲ್, ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ 27 ಲೋಕಸಭೆಯಲ್ಲಿ ಇದುವರೆಗೆ ಅಂಗೀಕಾರವಾದ ಮಸೂದೆಗಳು
23 ರಾಜ್ಯಸಭೆಯಲ್ಲಿ ಇದುವರೆಗೆ ಅಂಗೀಕಾರವಾದ ಮಸೂದೆಗಳು
19 ಎರಡೂ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳು
ಮೇಲ್ಮನೆಯಲ್ಲಿ ನಿಷೇಧಿತ ಚಟುವಟಿಕೆಗಳ (ತಡೆ) ವಿಧೇಯಕದ ಬಗ್ಗೆ ಗುರುವಾರ ಸಂಜೆ 6 ಗಂಟೆಯ ಬಳಿಕ ಚರ್ಚೆ ನಡೆಯಿತು. ಈ ಬಗ್ಗೆ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಹಿಂದೆ ವಿಧೇಯಕಗಳ ಚರ್ಚೆ ಮಧ್ಯಾಹ್ನ 2 ಗಂಟೆಗೆ ಶುರುವಾಗುತ್ತಿತ್ತು. ಈಗ 12 ಗಂಟೆಗೇ ಶುರುವಾಗುತ್ತಿದೆ. ಬುಧವಾರ ಕೂಡ ಸದನ ಚರ್ಚೆಯ ಅವಧಿಯನ್ನು 6 ಗಂಟೆಯ ಬಳಿಕವೂ ವಿಸ್ತರಿಸಲಾಗಿತ್ತು. ಗುರುವಾರ ಕೂಡ 8.50ರ ವರೆಗೆ ಇದ್ದೇವೆ’ ಎಂದರು. ಎಸ್‌ಪಿ, ಟಿಎಂಸಿ ಸೇರಿದಂತೆ ಹಲವು ಪಕ್ಷಗಳ ನಾಯಕರು ಆಜಾದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಮೇಲ್ಮನೆಯಲ್ಲಿ ಚರ್ಚೆಗೆ ಉತ್ತರ ನೀಡಲಿದ್ದಾರೆ. ಹೀಗಾಗಿ, ಬಿಜೆಪಿ ತನ್ನ ಎಲ್ಲಾ ರಾಜ್ಯಸಭಾ ಸದಸ್ಯರು ಸದನದಲ್ಲಿ ಹಾಜರಿದ್ದು, ಮತದಾನದಲ್ಲಿ ಭಾಗವಹಿಸಬೇಕು ಎಂದು ವಿಪ್ ನೀಡಿದೆ.
Advertisement
ಸಂಸತ್ ಕಲಾಪವನ್ನು ವಿಸ್ತರಿಸುವ ಬಗ್ಗೆ ಕೇಂದ್ರ ಸರಕಾರ ಯೋಚನೆ ಮಾಡುತ್ತಿದೆ. ವಿಧಾನಸಭೆಗಳಿಗೆ ಮಾದರಿಯಾಗಿ ಲೋಕಸಭೆ ಇರಬೇಕು. ಸಂಸದರು ಕೂಡ ಮದುವೆ ಸೇರಿ ದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗ ಬೇಕಾಗುತ್ತದೆ. ಸದನದ ಕಲಾಪ ವಿಸ್ತರಿಸಬೇಕು ಎನ್ನುವುದಕ್ಕೆ ಸರಿಯಾದ ಕಾರಣ ನೀಡಿ.ಮುಲಾಯಂ ಸಿಂಗ್ ಯಾದವ್, ಎಸ್‌ಪಿ ಸಂಸದ ಮುಲಾಯಂಜಿ ಅವರೇ, ನೀವು ಹಿರಿಯ ಸದಸ್ಯರಿದ್ದೀರಿ. ಪ್ರಮುಖ ಮಸೂದೆಗಳು ಮಂಡನೆಯಾಗಿ ಚರ್ಚೆಯಾಗಿ ಅಂಗೀಕಾರವಾಗಬೇಕಾಗಿದೆ.ಅದರಿಂದ ಜನರಿಗೆ ಅನುಕೂಲವಾಗಬೇಕಾಗಿದೆ. ಹೀಗಾಗಿ ನಿಮ್ಮ ಅಭಿಪ್ರಾಯ ಒಪ್ಪಲಾಗುವುದಿಲ್ಲ.
ಅರ್ಜುನ್ ರಾಮ್ ಮೇಘಾಲ್, ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ 27 ಲೋಕಸಭೆಯಲ್ಲಿ ಇದುವರೆಗೆ ಅಂಗೀಕಾರವಾದ ಮಸೂದೆಗಳು
23 ರಾಜ್ಯಸಭೆಯಲ್ಲಿ ಇದುವರೆಗೆ ಅಂಗೀಕಾರವಾದ ಮಸೂದೆಗಳು
19 ಎರಡೂ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳು