ಹೊಸದಿಲ್ಲಿ : ಅತ್ಯಂತ ದುರದೃಷ್ಟಕರ ಅವಘಡವೊಂದರಲ್ಲಿ ರಾಷ್ಟ್ರ ಮಟ್ಟದ ಕುಸ್ತಿಪಟು ವಿಶಾಲ್ ಕುಮಾರ್ ವರ್ಮಾ ಅವರು ನೀರು ತುಂಬಿದ್ದ ಇಲ್ಲಿನ ಜೈಪಾಲ್ ಸಿಂಗ್ ಸ್ಟೇಡಿಯಂ ನಲ್ಲಿ ನಿನ್ನೆ ಮಂಗಳವಾರ ವಿದ್ಯುತ್ ಸ್ಪರ್ಶದಿಂದ ಸಾವಪ್ಪಿದ್ದಾರೆ.
ಜಾರ್ಖಂಡ್ ರಾಜ್ಯ ಕುಸಿತ ಸಂಘದ ಕಾರ್ಯಾಲಯ ಇರುವ ಸ್ಟೇಡಿಯಂ ಕಟ್ಟಡ ನೀರಿನಲ್ಲಿ ಮುಳುಗಿದ್ದು ವಿದ್ಯುತ್ ಶಾರ್ಟ್ ಸರ್ಕ್ನೂಟ್ ಉಂಟಾಗಿತ್ತು.
ಶರ್ಮಾ ಅವರು ಪ್ರಜ್ಞಾಹೀನರಾಗಿ ಬಿದ್ದಿದ್ದುದನ್ನು ಸ್ಥಳೀಯರು ಕಂಡು ಒಡನೆಯೇ ಅವರನ್ನು ಸಮೀಪದ ಸದರ್ ಆಸ್ಪತ್ರೆಗೆ ಸೇರಿಸಿದರು. ಆದರೆ ಅಲ್ಲಿನ ವೈದ್ಯರು ಅದಾಗಲೇ ಶರ್ಮಾ ಮೃತಪಟ್ಟಿರುವುದಾಗಿ ಘೋಷಿಸಿದರು.
ಇದೊಂದು ಅತ್ಯಂತ ದುರದೃಷ್ಟಕರ ಘಟನೆ ಎಂದು ಶೋಕ ವ್ಯಕ್ತಪಡಿಸಿರುವ ರಾಜ್ಯ ಕುಸ್ತಿ ಪಟು ಸಂಘದ ಅಧ್ಯಕ್ಷ ಭೋಲಾ ನಾಥ್ ಸಿಂಗ್, ಮೃತ ಕುಸ್ತಿ ಪಟು ಶರ್ಮಾ ಅವರ ಕುಟುಂಬಕ್ಕೆ ಒಂದು ಲಕ್ಷ ರೂ. ಮಧ್ಯಾವಧಿ ಪರಿಹಾರ ಘೋಷಿಸಿರುವುದಾಗಿ ತಿಳಿಸಿದರು.
ಶರ್ಮಾ ಅವರ ನಾಲ್ಕು ಸಹೋದರಿಗಳಲ್ಲಿ ಕನಿಷ್ಠ ಒಬ್ಬಳಿಗಾದರೂ ಉದ್ಯೋಗ ಸಿಗುವ ತನಕ ಅವರ ಕುಟುಂಬಕ್ಕೆ ಪ್ರತೀ ತಿಂಗಳು 10,000 ರೂ. ಗಳನ್ನು ನೀಡಲು ಸಂಘ ನಿರ್ಧರಿಸಿದೆ ಎಂದು ಭೋಲಾ ನಾಥ್ ಸಿಂಗ್ ಹೇಳಿದರು.
ವಿಶಾಲ್ ಶರ್ಮಾ ಅವರು ತಮ್ಮ ಕುಸ್ತಿ ವೃತ್ತಿಜೀವನವನ್ನು ಆರಂಭಿಸಿದ್ದು 2005ರಲ್ಲಿ. ಕಳೆದ ಬಾರಿಯ ಹಿರಿಯರ ಕುಸ್ತಿ ಚಾಂಪ್ಯನ್‌ಶಿಪ್‌ನಲ್ಲಿ ಅವರ ನಾಲ್ಕನೇ ಸ್ಥಾನವನ್ನು ಪಡೆದಿದ್ದರು.