ಬಂಗಾರಪೇಟೆ: ತಾಲೂಕಿನ ಹುದುಕುಳ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರವು ರಾಷ್ಟ್ರೀಯ ಮಟ್ಟಕ್ಕೆ ಮಾನ್ಯತೆ ಪಡೆದ ರಾಜ್ಯದಮೊದಲ ಏಕೈಕ ಕೇಂದ್ರವಾಗಿದ್ದು, ಅದರಪರಿಶೀಲನೆಗಾಗಿ ರಾಷ್ಟ್ರ ಮಟ್ಟದ ವೈದ್ಯರತಂಡ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಪಲಶೀಲನೆ ನಡೆಸಿತು.
ತಾಲೂಕಿನ ಹುದುಕುಳ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿಗುಣಮಟ್ಟದ ಸೇವೆ ಸಿಗುತ್ತಿದ್ದು, ಕೇಂದ್ರಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಇರುವ ಕಾರಣ ಈಗಾಗಲೇ ರಾಜ್ಯ ಮಟ್ಟದಲ್ಲಿ ಉತ್ತಮ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಿಂದ ಹುದುಕುಳ ಆರೋಗ್ಯ ಮತ್ತು ಕ್ಷೇಮ ಕೇಂದ್ರವು ರಾಷ್ಟ್ರೀಯಗುಣಮಟ್ಟ ಖಾತ್ರಿ ಮಾನದಂಡಕ್ಕೆ ಆಯ್ಕೆಯಾಗಿದ್ದು, ಇದು ರಾಜ್ಯದಿಂದ ಆಯ್ಕೆಯಾಗಿರುವ ಮೊದಲ ಕೇಂದ್ರವಾಗಿದೆ.
ಮಾನದಂಡಗಳನ್ನು ಪರಿಶೀಲನೆ ನಡೆಸಲುದೆಹಲಿ ಮತ್ತು ತಮಿಳುನಾಡಿನಿಂದ ಡಾ.ಬಾಲಾಜಿ, ಡಾ. ಧರ್ಮೇಶ್ ಸೇರಿ ಇತರೆ ವೈದ್ಯರ ತಂಡ ಭೇಟಿ ನೀಡಿದರು. ಈ ವೇಳೆ ಜಿಲ್ಲಾ ಗುಣಮಟ್ಟ ವ್ಯವಸ್ಥಾಪಕ ಡಾ.ಚೇತನ್ ಮಾತನಾಡಿ, ಈಗಾಗಲೇ ಜಿಲ್ಲೆಯಿಂದ ಕಾಯಕಲ್ಪ ಸೇರಿ ಹಲವು ಯೋಜನೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆಗಳು ಗುಣಮಟ್ಟದ ಆಸ್ಪತ್ರೆಗಳು ಎಂದು ಗುರುತಿಸಿಕೊಂಡಿವೆ.
ಹುದುಕುಳ ಗ್ರಾಮದ ಕ್ಷೇಮ ಕೇಂದ್ರದಿಂದ ಇಲ್ಲಿನ ವೈದ್ಯರೂ ಸೇರಿ ಸಿಬ್ಬಂದಿ ವರ್ಗ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಕೇಂದ್ರವು ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿದೆ. ರಾಷ್ಟ್ರ ಮಟ್ಟದ ವೈದ್ಯರ ತಂಡ ಕೇಂದ್ರದಲ್ಲಿನ ಎಲ್ಲಾ ದಾಖಲೆಗಳನ್ನು ಕೇಂದ್ರದಲ್ಲಿನ ಸೌಲಭ್ಯಗಳು ಸೇರಿ ಇತ್ಯಾದಿಗಳನ್ನು ಸಲಶೀಲನೆ ನಡೆಸಿ ಕೇಂದ್ರಕ್ಕೆ ರಾಷ್ಟ್ರ ಮಟ್ಟದ ಪ್ರಮಾಣ ಪತ್ರವನ್ನು ವಿತರಣೆ ಮಾಡಲಿದ್ದಾರೆ ಎಂದರು.
ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಎಚ್. ಎಂ.ರವಿ ಮಾತನಾಡಿ, ಹುದುಕುಳ ಆರೋಗ್ಯ ಕೇಂದ್ರವನ್ನು ಜಿಲ್ಲೆಯಲ್ಲಿಯೇ ಉತ್ತಮ ಕೇಂದ್ರವನ್ನಾಗಿ ಮಾಡಲು ಗ್ರಾಪಂನಿಂದ ಯೋಗ ಕೇಂದ್ರವನ್ನು ನಿರ್ಮಿಸಿ, ಸ್ವಚ್ಛತೆಯನ್ನು ಕಾಪಾಡುವುದರ ಜತೆಗೆ ಹಲವು ಸೌಲಭ್ಯಗಳನ್ನು ಕಲ್ಪಸಲಾಗಿದೆ. ನಾವು ಊಹಿಸಿದಕ್ಕಿಂತ ಹೆಚ್ಚಿನ ರೀತಿಯಲ್ಲಿ ಕೇಂದ್ರದಿಂದ ಉತ್ತಮ ಸೇವೆ ಸಿಗುತ್ತಿರುವ ಕಾರಣ ರಾಜ್ಯಮಟ್ಟದಲ್ಲಿ ಗುರ್ತಿಸಿಕೊಂಡಿದೆ. ಇದೀಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಗುಣಮಟ್ಟದ ಸಲಹೆಗಾರ ಡಾ.ಮನೋಹರ್, ತಾಲೂಕು ವೈದ್ಯಾಧಿಕಾರಿಡಾ.ಪ್ರತಿಕ್ ಎನ್.ಸ್ವಾಮಿ, ವೈದ್ಯಾಧಿಕಾರಿ ಡಾ.ಉಮಾ, ಕೇಂದ್ರ ತಂಡದ ಸದಸ್ಯರಾದ ಡಾ.ಬಾಲಾಜಿ, ಡಾ. ಧರ್ಮೇಶ್, ಪಿಡಿಒ ವಿ.ಚಿತ್ರಾ ಇತರರಿದ್ದರು.