ಸೋಲಿನೇಟು ನೀಡಿದ್ದಾರೆ. ಫ್ರಾನ್ಸ್ “ಗ್ರೂಪ್ 3′ ವಿಭಾಗದ ಅಗ್ರಸ್ಥಾನಿಯಾಗಿ “ಫೈನಲ್ ಆಫ್ ಫೋರ್’ ಸುತ್ತು ಪ್ರವೇಶಿಸಿದೆ.
Advertisement
ಆತಿಥೇಯ ನಾಡಿನ ಅಭಿ ಮಾನಿಗಳ ಅಪಾರ ಬೆಂಬಲ ಪಡೆದು ಹೋರಾಡಿದರೂ ಹಾಲಿ ಚಾಂಪಿಯನ್ ಪೋರ್ಚುಗಲ್‌ಗೆ ಗೆಲುವಿನ ಮುಖ ಕಾಣಲಾಗಲಿಲ್ಲ. 54ನೇ ನಿಮಿಷದಲ್ಲಿ ಎದುರಾಳಿ ಗೋಲ್ ಕೀಪರ್ ರೂಯಿ ಪ್ಯಾಟ್ರಿಕೊ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದ ಕಾಂಟೆ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳುವ ಪೋರ್ಚು ಗಲ್ ಯೋಜನೆಗೆ ಭಾರೀ ಹೊಡೆತ ಬಿತ್ತು. ಕಳೆದ ವರ್ಷದ ಚೊಚ್ಚಲ ನ್ಯಾಶನಲ್ ಲೀಗ್‌ನಲ್ಲಿ ಪೋರ್ಚುಗಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಲೀಪ್‌ಝಿಗ್‌ನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಜರ್ಮನಿ 3-1 ಗೋಲುಗಳಿಂದ ಉಕ್ರೇನ್‌ಗೆ ಸೋಲುಣಿಸಿತು. ಶುಕ್ರವಾರ ಉಕ್ರೇನಿನ 3 ಆಟಗಾರರಿಗೆ ಹಾಗೂ ಮತ್ತೋರ್ವ ಸದಸ್ಯನಿಗೆ ಕೋವಿಡ್-19 ಸೋಂಕು ತಗುಲಿದ್ದರಿಂದ ಈ ಪಂದ್ಯ ನಡೆಯುವುದೇ ಅನುಮಾನವಿತ್ತು. ಬಳಿಕ ಉಳಿದ ಸದಸ್ಯರೆಲ್ಲರಿಗೂ ಶನಿವಾರ ಇನ್ನೊಂದು ಸುತ್ತಿನ ಕೋವಿಡ್ ಟೆಸ್ಟ್ ಮಾಡಲಾಯಿತು. ಇಲ್ಲಿ ಎಲ್ಲರ ಫಲಿತಾಂಶ ನೆಗೆಟಿವ್ ಬಂದುದರಿಂದ ಉಕ್ರೇನ್ ಆಡಲು ಸಾಧ್ಯವಾಯಿತು. ಆದರೆ ಅದು ನಿರೀಕ್ಷಿತ ಹೋರಾಟ ತೋರುವಲ್ಲಿ ವಿಫಲವಾಯಿತು.