Advertisement

Football ಡ್ಯುರಾಂಡ್‌ ಕಪ್‌: ನಾರ್ತ್‌ಈಸ್ಟ್‌  ಯುನೈಟೆಡ್‌ ಫೈನಲಿಗೆ

12:20 AM Aug 27, 2024 | Team Udayavani |

ಶಿಲ್ಲಾಂಗ್‌: ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಕೂಟದ ಸೋಮವಾರದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್ಸಿ ತಂಡವು ಶಿಲ್ಲಾಂಗ್‌ ಲಾಜಾಂಗ್‌ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮೊದಲ ಬಾರಿ ಫೈನಲ್‌ ಹಂತಕ್ಕೇರಿತು.

Advertisement

ಇಲ್ಲಿನ ಜವಾಹರ್‌ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಈ ಹೋರಾಟದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ತಂಡವು ಅಮೋಘ ಆಟದ ಪ್ರದರ್ಶನ ನೀಡಿತು. ಮೊದಲ ಅವಧಿಯ ಆಟದಲ್ಲಿ ನಾರ್ತ್‌ ಈಸ್ಟ್‌ ತಂಡ 2 ಗೋಲು ಹೊಡೆದು ಮುನ್ನಡೆ ಸಾಧಿಸಿತ್ತು. ಪಂದ್ಯ ಮುಗಿಯಲು ಕೆಲವು ನಿಮಿಷಗಳಿರುವಾಗ ತಂಡ ಇನ್ನೊಂದು ಗೋಲು ಹೊಡೆದು ಗೆಲುವಿನ ಸಂಭ್ರಮ ಆಚರಿಸಿತು.

ಪ್ರೇಕ್ಷಕರು ಶಿಲ್ಲಾಂಗ್‌ ತಂಡಕ್ಕೆ ಹೆಚ್ಚಿನ ಬೆಂಬಲ ನೀಡಿದರೂ ನಾರ್ತ್‌ ಈಸ್ಟ್‌ ತಂಡ ಅಮೋಘವಾಗಿ ಆಡಿ ಮೆರೆದಾಡಿತು. ಪಂದ್ಯದ 13ನೇ ನಿಮಿಷದಲ್ಲಿ ತಂಡದ ಮೊರೊಕ್ಕೋದ ಆಟಗಾರ ಅಲಾಯಿದ್ದೀನ್‌ ಅಜರಾಯಿ ಮೊದಲ ಗೋಲು ಹೊಡೆದರು.

ಇಂದು 2ನೇ ಸೆಮಿಫೈನಲ್‌
ಮಂಗಳವಾರ ಕೋಲ್ಕತಾದ ಸಾಲ್ಟ್ಲೇಕ್‌ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮಾಜಿ ನಾಯಕ ಸುನೀಲ್‌ ಚೇಟ್ರಿ ನೇತೃತ್ವದ ಬೆಂಗಳೂರು ಎಫ್ಸಿ ತಂಡವು ಮೋಹನ್‌ ಬಾಗನ್‌ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next