Advertisement

Indian Football Team: ಮನೊಲೊ ಮಾರ್ಕ್ವೆಜ್: ಭಾರತೀಯ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌

10:52 PM Jul 20, 2024 | Team Udayavani |

ಹೊಸದಿಲ್ಲಿ: ಸ್ಪೇನ್‌ನ ಮನೊಲೊ ಮಾರ್ಕ್ವೆಜ್ ಅವರನ್ನು ಭಾರತೀಯ ಫ‌ುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾ ಗಿದೆ. ಪ್ರಸ್ತುತ ಅವರು ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಎಫ್ಸಿ ಗೋವಾ ತಂಡವನ್ನು ನೊಡಿ ಕೊಳ್ಳುತ್ತಿದ್ದರು. ವಜಾಗೊಂಡ ಇಗರ್‌ ಸ್ಟಿಮ್ಯಾಕ್‌ ಅವರ ಜಾಗಕ್ಕೆ ಮಾರ್ಕ್ವೆಜ್ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಅಖಿಲ ಭಾರತೀಯ ಫ‌ುಟ್‌ಬಾಲ್‌ ಫೆಡರೇಶನ್‌ನ  ಕಾರ್ಯಕಾರಿ ಸಮಿತಿ ಸದ ಸ್ಯರು ಶನಿವಾರ ಸಭೆ ಸೇರಿ ಚರ್ಚಿಸಿ ಮುಖ್ಯ ಕೋಚ್‌ ಹುದ್ದೆಗೆ ಮಾರ್ಕ್ವೆಜ್ ಅವ ರನ್ನು ಆಯ್ಕೆ ಮಾಡಲು ನಿರ್ಧ ರಿಸಿತು. 55ರ ಹರೆಯದ ಮಾರ್ಕ್ವೆಜ್ ಪೂರ್ಣ ಪ್ರಮಾಣದಲ್ಲಿ ಕೋಚ್‌ ಹುದ್ದೆ ಸ್ವೀಕರಿಸುವ ಮೊದಲು ಐಎಸ್‌ಎಲ್‌ ಮತ್ತು ರಾಷ್ಟ್ರೀಯ ತಂಡದ ಕೋಚ್‌ ಹುದ್ದೆಯ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಎಐಎಫ್ಎಫ್ ತಿಳಿಸಿದೆ.

ಮಾರ್ಕ್ವೆಜ್ ಅವರು 2020ರಿಂದ ಭಾರತದಲ್ಲಿ ಕೋಚ್‌ ಆಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟರವರೆಗೆ ಅವರು 2 ಐಎಸ್‌ಎಲ್‌ ಕ್ಲಬ್‌ ತಂಡದ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದ್ದಾರೆ. ಇದ ಲ್ಲದೇ ಸ್ಪೇನ್‌ ತಂಡದ ಕೆಳಗಿನ ವಿಭಾಗದ ಕ್ಲಬ್‌ಗಳಾದ ಲಾಸ್‌ ಪಾಲ್ಮಾಸ್‌ ಬಿ, ಎಸ್ಪಾನಿಯೋಲ್‌ ಬಿ, ಬಡಾಲೋನ, ಪ್ರಾಟ್‌, ಯುರೋಪ ಕ್ಲಬ್‌ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next