Advertisement

Beejadi-ಗೋಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ: ಬೆಳಗದ ದಾರಿದೀಪ, ಸಂಚಾರಕ್ಕೆ ಸಂಚಕಾರ

12:02 PM Oct 25, 2024 | Team Udayavani |

ಕೋಟೇಶ್ವರ: ಬೀಜಾಡಿ ಗೋಪಾಡಿ ನಡುವಿನ ರಾ. ಹೆದ್ದಾರಿಯ ದಾರಿದೀಪ ರಾತ್ರಿ ಹೊತ್ತಿನಲ್ಲಿ ಬೆಳಗದೇ ಅಲ್ಲಿನ ತಿರುವಿನ ಮಾರ್ಗದಲ್ಲಿ ಸಾಗುವ ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಭಯದ ವಾತಾವರಣ ಸೃಷ್ಟಿಸಿದೆ.

Advertisement

ಗೋಪಾಡಿ- ಬೀಜಾಡಿಯ ಸರ್ವೀಸ್‌ ರಸ್ತೆ ಮಾರ್ಗವಾಗಿ ಮುಖ್ಯ ರಸ್ತೆಗೆ ಸಾಗುವ ತಿರುವು ಮಾರ್ಗವು ಹಗಲು ಹೊತ್ತಿನಲ್ಲೇ ಬಹಳಷ್ಟು ಅಪಾಯಕಾರಿಯಾಗಿದ್ದು, ಅನೇಕ ವಾಹನ ಅಪಘಾತ ಇಲ್ಲಿ ಸಂಭವಿಸಿದೆ. ದಾರಿದೀಪ ಬೆಳಗದ ಕಾರಣ ರಾತ್ರಿ ಸಂಚಾರ ಇನ್ನಷ್ಟು ಅಪಾಯಕಾರಿಯಾಗಿದೆ.

ರಾ. ಹೆದ್ದಾರಿ ಇಲಾಖೆಯ ಅ ಧಿಕಾರಿಗಳ ಗಮನ ಸೆಳೆದರೂ ಕೆಟ್ಟ ದಾರಿದೀಪ ಸರಿಪಡಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next