Advertisement

National Herald: 752 ಕೋ. ಆಸ್ತಿ ಜಪ್ತಿ

12:56 AM Nov 22, 2023 | Team Udayavani |

ಹೊಸದಿಲ್ಲಿ: ನ್ಯಾಶನಲ್‌ ಹೆರಾಲ್ಡ್‌ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಶಾಕ್‌ ನೀಡಿದೆ. ಯಂಗ್‌ ಇಂಡಿಯಾ ಲಿ. ಮಾಲಕತ್ವದ ನ್ಯಾಶನಲ್‌ ಹೆರಾಲ್ಡ್‌ ವಿರುದ್ಧದ ಪ್ರಕರಣ ಸಂಬಂಧ ಬರೋಬ್ಬರಿ 751.9 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ. ಮಂಗಳವಾರ ತಿಳಿಸಿದೆ.

Advertisement

ಈ ಆಸ್ತಿಯ ಪೈಕಿ ದಿಲ್ಲಿ ಮತ್ತು ಮುಂಬಯಿಯಲ್ಲಿರುವ ನ್ಯಾಶನಲ್‌ ಹೆರಾಲ್ಡ್‌ ಕಚೇರಿಗಳು, ಲಕ್ನೋದಲ್ಲಿರುವ ನೆಹರೂ ಭವನ ಕೂಡ ಸೇರಿದೆ. ಕಾಂಗ್ರೆಸ್‌ ನಾಯಕರ ನಂಟಿರುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ.(ಎಜೆಎಲ್‌) ದಿಲ್ಲಿ, ಮುಂಬಯಿ, ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸ್ಥಿರಾಸ್ತಿಯ ರೂಪದಲ್ಲಿ 661.69 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಯಂಗ್‌ ಇಂಡಿಯನ್‌ ಸಂಸ್ಥೆಯು 90.21 ಕೋಟಿ ರೂ.ಗಳನ್ನು ಷೇರುಗಳ ರೂಪದಲ್ಲಿ ಹೊಂದಿದೆ ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ.

ಕಾಂಗ್ರೆಸ್‌ ಕಿಡಿ: ಆಸ್ತಿ ಮುಟ್ಟುಗೋಲು ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಜಾರಿ ನಿರ್ದೇಶನಾಲಯವು ಈಗ ಬಿಜೆಪಿಯ “ಮಿತ್ರಪಕ್ಷ”ವಾಗಿದೆ. ಇಂತಹ ದ್ವೇಷದ ತಂತ್ರಗಳಿಗೆ ನಾವು ಹೆದರುವುದಿಲ್ಲ ಎಂದಿದೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲುವುದು ಖಚಿತ ಎಂಬುದು ಬಿಜೆಪಿಗೆ ಸ್ಪಷ್ಟವಾಗಿದೆ. ಬಿಜೆಪಿಯ ಮಿತ್ರಪಕ್ಷಗಳಾದ ಸಿಬಿಐ, ಇ.ಡಿ., ಆದಾಯ ತೆರಿಗೆ ಇಲಾಖೆ ಏನೇ ಮಾಡಿದರೂ ಆ ಪಕ್ಷದ ಸೋಲನ್ನು ತಪ್ಪಿಸಲು ಸಾಧ್ಯವಿಲ್ಲ. ಇಂತಹ ಕ್ಷುಲ್ಲಕ ಪ್ರತೀಕಾರದ ತಂತ್ರಗಳಿಗೆಲ್ಲ ಕಾಂಗ್ರೆಸ್‌ ಪಕ್ಷ ಹೆದರುವುದಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next