ಚಿಂತಾಮಣಿ : ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಭಾರತೀಯರೆಲ್ಲಾ ನಿಷ್ಠೆಯಿಂದ ಗೌರವ ತೋರಿ ಕೈ ಮುಗಿಯುತ್ತಿದ್ದರೆ ತಾಲೂಕಿನ ಉಪ್ಪರಪೇಟೆ ಗ್ರಾಪಂ ಕಾರ್ಯಾಲಯ ದ ಮೇಲೆ ಧ್ವಜಕ್ಕೆ ಅಗೌರವ ತೋರಿರುವ ಘಟನೆ ನಡೆದಿದೆ.
ಹರಿದು ನೇತಾಡುತ್ತಿರುವ ರಾಷ್ಟ್ರೀಯ ಧ್ವಜ ಕಟ್ಟಿ ಅಪಮಾನ ಮಾಡಿರುವುದು ದೇಶ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಇನ್ನು ತಮ್ಮ ಕಛೇರಿ ಕಟ್ಟಡದ ಮೇಲೆ ಬಾವುಟ ಹರಿದು ಹೋದರು ಅದರಕಡೆ ಗಮನ ಹರಿಸದ ಅಧಿಕಾರಿಗಳು ನಿತ್ಯ ಕಛೇರಿಗೆ ಬಂದು ಹೋಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.
ಇನ್ನು ಗ್ರಾಪಂ ಕಟ್ಟಡ ಮೇಲೆ ನಿತ್ಯ ಬಾವುಟ ಕಟ್ಟಿ ಬಿಡಿಸಲು ದಿನಕ್ಕೆ 10 ರಿಂದ 15 ರೂ ಸಂಭಾವನೆಯೂ ಸಹ ನೀಡಲಾಗುತ್ತೆ ಆದರೆ ನಿತ್ಯ ಬಾವುಟ ಕಟ್ಟಿ ಹಾರಿಸುವ ಜವಾನನೂ ಕೂಡ ಸುಮ್ಮನಿರುವುದು ಖೆಧಕರ ಸಂಗತಿ.
ಇದನ್ನೂ ಓದಿ :ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು